ಬರ್ಲಿನ್: ಯಾವುದೇ ವಸ್ತು ಖರೀದಿಸುವಾಗ ಅದರ ಬಣ್ಣದ ಕುರಿತು ಗ್ರಾಹಕರು ತುಂಬಾ ತಲೆಕೆಡಿಸಿಕೊಳ್ಳುವುದು ಸಹಜ. ಎಲೆಕ್ಟ್ರಾನಿಕ್ ಉಪಕರಣಗಳು, ಸ್ಮಾರ್ಟ್ ಫೋನು ಹೀಗೆ ಪಟ್ಟಿ ಉದ್ದ ಬೆಳೆಯುತ್ತದೆ. ಅದರಲ್ಲೂ ಕಾರು ಕೊಳ್ಳುವಾಗ ಬಣ್ಣದ ಆಯ್ಕೆ ಕುರಿತು ಮನೆಮಂದಿಯೆಲ್ಲಾ ತಿಂಗಳಾನುಗಟ್ಟಲೆ ಚರ್ಚೆ ನಡೆಸುವುದು ಸಾಮಾನ್ಯ. ಕಾರು ಖರೀದಿಸಿದ ಮೇಲೂ ಹಲವರಿಗೆ ಬಣ್ಣದ ಕುರಿತು ಅತೃಪ್ತಿಯೂ ಮೂಡಬಹುದು. ಈಗ ಆ ತಲೆನೋವಿಗೆ ಪ್ರಖ್ಯಾತ ಕಾರು ತಯಾರಕ ಸಂಸ್ಥೆ ಜರ್ಮನಿ ಮೂಲದ ಬಿಎಂಡಬ್ಲ್ಯು ಫುಲ್ ಸ್ಟಾಪ್ ಇಟ್ಟಿದೆ. ವಿಶ್ವದಲ್ಲೇ ಮೊದಲ ಬಣ್ಣ ಬದಲಾಯಿಸುವ ಕಾರನ್ನು ಪ್ರದರ್ಶನ ಮಾಡಿದೆ.

iX Flow ಎನ್ನುವ ಹೆಸರಿನ ಈ ಕಾರು ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. ಇದೇ ಮೊದಲ ಬಾರಿಗೆ ಈ ಕಾರನ್ನು ಜಗತ್ತಿನ ಮುಂದೆ ಪ್ರದರ್ಶನ ಮಾಡಿದೆ ಸಂಸ್ಥೆ.

ಸದ್ಯ ಈ ಕಾರು ಎರಡು ಬಣ್ನಗಳ ಆಯ್ಕೆಯಲ್ಲಿ ಲಭ್ಯವಿದೆ. ಬಿಳಿ ಮತ್ತು ಬೂದು ಬಣ್ಣ ಎರಡು ಬಣ್ನಗಳ ನಡುವೆ ಗ್ರಾಹಕರು ಬಣ್ನ ಬದಲಾಯಿಸಬಹುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಬಣ್ಣಗಳ ಆಯ್ಕೆಯನ್ನು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.