ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಅಶೋಕ್ ಲೇಲ್ಯಾಂಡ್ ಕಂಪನಿಗಳು ಒಟ್ಟಾಗಿ, ಹೈಡ್ರೋಜನ್ ಇಂಧನದಿಂದ ಚಲಿಸುವ ಭಾರಿ ಸಾಮರ್ಥ್ಯದ ಟ್ರಕ್ ಅನಾವರಣಗೊಳಿಸಿವೆ. ಇಲ್ಲಿ ಸೋಮವಾರ ಆರಂಭವಾದ ಇಂಧನ ಸಪ್ತಾಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಟ್ರಕ್ ಅನಾವರಣ ಮಾಡಿದರು.
‘ಸುಸ್ಥಿರ ಹಾಗೂ ಪರಿಸರ ಪೂರಕ ವಾಹನ ತಯಾರಿಕಾ ವಲಯದಲ್ಲಿ ನಾಯಕತ್ವದ ಸ್ಥಾನ ಪಡೆಯುವುದು ನಮ್ಮ ಗುರಿ’ ಎಂದು ಅಶೋಕ್ ಲೇಲ್ಯಾಂಡ್ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಎನ್. ಸರವಣನ್ ಹೇಳಿದ್ದಾರೆ. ಹೈಡ್ರೋಜನ್ ಚಾಲಿತ ಟ್ರಕ್ ಹೊರಸೂಸುವ ಇಂಗಾಲದ ಪ್ರಮಾಣವು ತೀರಾ ನಗಣ್ಯ. ಈ ಟ್ರಕ್‌ನ ಸಾಮರ್ಥ್ಯವು ಸಾಂಪ್ರದಾಯಿಕ ಎಂಜಿನ್ ಹೊಂದಿರುವ ಟ್ರಕ್‌ಗಳಿಗೆ ಸರಿಸಮವಾಗಿರುತ್ತದೆ. ಅಲ್ಲದೆ, ಹೈಡ್ರೋಜನ್ ಚಾಲಿತ ಟ್ರಕ್‌ಗಳ ನಿರ್ವಹಣಾ ವೆಚ್ಚ ಕಡಿಮೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ.
ರಿಲಯನ್ಸ್ ಕಂಪನಿಯು ಮುಂದಿನ ದಿನಗಳಲ್ಲಿ ಭಾರಿ ಸಾಮರ್ಥ್ಯದ ಟ್ರಕ್‌ಗಳಲ್ಲಿ ಹೈಡ್ರೋಜನ್ ಚಾಲಿತ ಎಂಜಿನ್ ಬಳಕೆಯನ್ನು ವ್ಯಾಪಕವಾಗಿ ಪರೀಕ್ಷೆಗೆ ಒಳಪಡಿಸಲಿದೆ. ನಂತರದಲ್ಲಿ ಈ ಟ್ರಕ್‌ಗಳನ್ನು ರಿಲಯನ್ಸ್ ಕಂಪನಿಯು ತನ್ನಲ್ಲಿ ಬಳಕೆಗೆ ತೆಗೆದುಕೊಳ್ಳಲಿದೆ.
Discussion about this post