ಸೂರತ್, ಗುಜರಾತ್: ಟಿಕ್‌ಟಾಕ್ ತಾರೆ ಕೀರ್ತಿ ಪಟೇಲ್ ರನ್ನ ಕಪೋದರ ಪೊಲೀಸರು ಬಂಧಿಸಿದ್ದಾರೆ. ಆರೋಪಿತೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದರು. ಕೀರ್ತಿ ಪಟೇಲ್ ಅವರ ವಿರುದ್ಧ ಬಿಲ್ಡರ್‌ನಿಂದ 2 ಕೋಟಿ ರೂ.ಗಳ ಸುಲಿಗೆ ಬೇಡಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳಿವೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಕೀರ್ತಿ ಗುಜರಾತ್‌ನ ಹಲವು ಸ್ಥಳಗಳಿಗೆ ಓಡಾಡುತ್ತಲೇ ಇದ್ದರು. ಅವರು ತಮ್ಮ ಫೋನ್‌ನ ಐಪಿ ವಿಳಾಸವನ್ನು ಕೂಡಾ ಆಗಾಗ್ಗೆ ಬದಲಾಯಿಸುತ್ತಲೇ ಇದ್ದರು. ಅಷ್ಟೇ ಅಲ್ಲ ಫೋನ್ ಅನ್ನು ಪದೇ ಪದೇ ಆನ್ ಮತ್ತು ಆಫ್ ಮಾಡುತ್ತಿದ್ದರು. ಅವರ ವಿರುದ್ಧ ಹಲ್ಲೆ, ಸುಲಿಗೆ ಮತ್ತು ಭೂಕಬಳಿಕೆ ಪ್ರಕರಣಗಳು ದಾಖಲಾಗಿವೆ.
ಕೀರ್ತಿ ಪಟೇಲ್ ಅವರನ್ನು ಬಂಧಿಸಿರುವ ಪ್ರಕರಣವು ವಾಜು ಕತ್ರೋಡಿಯಾ ಮತ್ತು ವಿಜಯ್ ಸವಾನಿ ಎಂಬ ಬಿಲ್ಡರ್ ನಡುವಿನ ಆಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಪ್ರಕರಣದ ವಿಚಾರಣೆ 2024 ರಲ್ಲಿ ನಡೆಯಬೇಕಾಗಿತ್ತು. ವಿಜಯ್ ಸವಾನಿ ಮತ್ತು ಕೀರ್ತಿ ಪಟೇಲ್ ವಾಜು ಕತ್ರೋಡಿಯಾ ಅವರಿಂದ ಹಣ ಸುಲಿಗೆ ಮಾಡಲು ಇವರು ಸಂಚು ರೂಪಿಸಿದ್ದರು ಎಂಬ ಆರೋಪ ಇವರ ಮೇಲಿದೆ. ಕೀರ್ತಿ ಪಟೇಲ್ ಕತ್ರೋಡಿಯಾಳ ಫೋಟೋವನ್ನು ರೀಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಲೈವ್ ಆಗಿ ಬಂದು ದೂರುದಾರ ಮತ್ತು ಅವರ ಕುಟುಂಬದ ವಿರುದ್ಧ ನಿಂದನೆ ಮಾಡಿದ್ದಲೇ ಕೊಲೆ ಬೆದರಿಕೆ ಹಾಕಿದ್ದಳು ಎಂಬ ಆರೋಪ ಇದೆ.
ಬಂಧನದ ಬಗ್ಗೆ ಡಿಸಿಪಿ ಪ್ರತಿಕ್ರಿಯೆ ಹೀಗಿದೆ: ಬಂಧನದ ಸಮಯದಲ್ಲೂ ಕೀರ್ತಿಯ ನಡವಳಿಕೆ ಆಕ್ರಮಣಕಾರಿಯಾಗಿಯೇ ಇತ್ತು. ಪೊಲೀಸ್ ವಾಹನದಲ್ಲಿ ಕುಳಿತಿದ್ದಾಗಲೂ ಅವಳು ವಿಡಿಯೋ ಮಾಡಿ ಗುಜರಾತ್‌ನಾದ್ಯಂತ ವೈರಲ್ ಮಾಡುವ ಬಗ್ಗೆ ಮಾತನಾಡುತ್ತಿದ್ದಳು. ಜೂನ್ 2, 2024 ರಂದು, ಕೀರ್ತಿ ಪಟೇಲ್ ಸೇರಿದಂತೆ ಐದಕ್ಕೂ ಹೆಚ್ಚು ಜನರ ವಿರುದ್ಧ ಕಪೋದ್ರಾ ಪೊಲೀಸ್ ಠಾಣೆಯಲ್ಲಿ ಸುಲಿಗೆ ಸೇರಿದಂತೆ ಇತರ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಡಿಸಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿತೆ: ಕಳೆದ ಒಂದು ವರ್ಷದಿಂದ ಆರೋಪಿತ ಕೀರ್ತಿ ಪಡೆ ತಲೆ ಮರೆಸಿಕೊಂಡಿದ್ದಳು. ಪೊಲೀಸರಿಂದ ತಪ್ಪಿಸಿಕೊಳ್ಳಲು ಅವಳು ಫೋನ್‌ನ ಐಪಿ ವಿಳಾಸವನ್ನು ಬದಲಾಯಿಸುತ್ತಿದ್ದಳು ಮತ್ತು ಗುಜರಾತ್‌ನಲ್ಲಿ ವಿವಿಧ ಅಡಗುತಾಣಗಳನ್ನು ಬದಲಾಯಿಸುತ್ತಿದ್ದಳು. ಜೊತೆಗೆ, ಅವಳು ಫೋನ್ ಸಂಖ್ಯೆಯನ್ನು ಸಹ ಆಗಾಗ್ಗೆ ಚೇಂಜ್ ಮಾಡುತ್ತಿರುತ್ತಿದ್ದಳು. ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಸಕ್ರಿಯಳಾಗಿದ್ದ ಕೀರ್ತಿ, ಫೋನ್ ಸಂಖ್ಯೆಯನ್ನು ಬದಲಾಯಿಸಿದರೂ ಒಂದೇ ಫೋನ್ ಬಳಕೆ ಮಾಡುತ್ತಿದ್ದಳು. ಅಷ್ಟೇ ಅಲ್ಲ ನಿರಂತರವಾಗಿ ಫೋನ್ ಆನ್ ಮತ್ತು ಆಫ್ ಮಾಡುತ್ತಲೇ ಇದ್ದಳು. ಈ ನಡುವೆ ಆರೋಪಿತೆಯ ವಿರುದ್ಧ ಪೊಲೀಸರು ನಿರಂತರ ನಿಗಾ ಇಟ್ಟಿದ್ದರು. ಅಷ್ಟೇ ಅಲ್ಲ ಆಕೆಯ ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್ ಕೂಡಾ ಹೊರಡಿಸಲಾಗಿತ್ತು. ಏತನ್ಮಧ್ಯೆ, ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಪೊಲೀಸರು ತನಿಖೆ ನಡೆಸಿದ್ದರು. ಪೊಲೀಸರು ಆಕೆಯ ಸ್ಥಳವನ್ನು ಅಹಮದಾಬಾದ್‌ನ ಸರ್ಖೇಜ್‌ನಲ್ಲಿ ಪತ್ತೆಹಚ್ಚಿದ್ದರು .
ಸೂರತ್ ವಲಯ ಒನ್ ಎಲ್‌ಸಿಬಿ ಕಪೋದ್ರಾ ಪೊಲೀಸರು ಮತ್ತು ಸರ್ಖೇಜ್ ಸ್ಥಳೀಯ ಪೊಲೀಸರ ಸಹಾಯದಿಂದ ಕೀರ್ತಿ ಪಟೇಲ್ ಅವರನ್ನು ಅಹಮದಾಬಾದ್‌ನ ಸರ್ಖೇಜ್‌ನಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post