ಕಣ್ಣೂರು: ಮಾದಕ ವ್ಯಸನಿ ಮಗ ತನ್ನ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕಣ್ಣೂರು ಜಿಲ್ಲೆಯ ಕೊಲಕ್ಕಾಡ್ ಎಂಬಲ್ಲಿ ನಡೆದಿದೆ. ಕಣ್ಣೂರಿನ ಕೊಲಕ್ಕಡ್ ಪೆರಾವೂರಿನಲ್ಲಿ ಶುಕ್ರವಾರ ರಾತ್ರಿ 9 ಗಂಟೆಗೆ ಮಾದಕ ವ್ಯಸನಿ ಮಗ ತನ್ನ ತಾಯಿಯನ್ನು ಮನೆಯಲ್ಲಿಯೇ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಿಜೆಪಿ ಮಹಿಳಾ ಮೋರ್ಚಾದ ನಾಯಕಿ ಮಠಥಿಪರಂಪಿಲ್ ಗೀತಮ್ಮ(55) ಕೊಲೆಯಾದ ದುರ್ದೈವಿ. ಕೊಲೆಯನ್ನು ಗೀತಮ್ಮ ಅವರ 25 ವರ್ಷದ ಪ್ರಾಯದ ಮಗ ಕ್ರಿಸ್ಟಿ ಮಾಡಿದ್ದಾನೆ, ನಂತರ ಪೋಲಿಸ್ ಠಾಣೆಗೆ ತೆರಳಿ ಶರಣಾಗತಿಯಾಗಿದ್ದಾನೆ

ಕ್ರಿಸ್ಟಿ ಗಾಂಜಾ ಮತ್ತು ಎಂಡಿಎಂಎ ವ್ಯಸನಿಯಾಗಿದ್ದ ಕಾರಣ ತಾಯಿ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಶುಕ್ರವಾರ ರಾತ್ರಿ ಮತ್ತೆ ತಾಯಿ ಮತ್ತು ಮಗನ ನಡುವೆ ನಡೆದ ವಾಗ್ವಾದದ ನಂತರ, ಕ್ರಿಸ್ಟಿ ತನ್ನ ತಾಯಿಯನ್ನು ಮಲಗುವ ಕೋಣೆಗೆ ಬಲವಂತವಾಗಿ ಎಳೆದೊಯ್ದು ಚಾಕುವಿನಿಂದ ಕತ್ತು ಸೀಳಿ ಇರಿದು ಕೊಂದಿದ್ದಾನೆ. ಕೊಲೆ ಮಾಡಿದ ನಂತರ ಕ್ರಿಸ್ಟಿ ತನ್ನ ಸಹೋದರಿ ಮತ್ತು ತಾಯಿಯ ಸಹೋದರನಿಗೆ ಕರೆ ಮಾಡಿ ತನ್ನ ತಾಯಿಯನ್ನು ಕೊಂದಿರುವುದಾಗಿ ತಿಳಿಸಿದ್ದಾನೆ, ನಂತರ ತನ್ನ ಸ್ನೇಹಿತನಿಗೆ ಪೋನ್ ಮಾಡಿ ನಡೆದ ವಿಷಯವನ್ನು ತಿಳಿಸಿ ಸ್ನೇಹಿತನೊಂದಿಗೆ ಬೈಕಿನಲ್ಲಿ ಪೋಲಿಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಗೀತಮ್ಮ ಸಕ್ರಿಯ ಸಾರ್ವಜನಿಕ ವ್ಯಕ್ತಿಯಾಗಿದ್ದರು. ಅವರು ಮಹಿಳಾ ಮೋರ್ಚಾದ ಸ್ಥಳೀಯ ನಾಯಕಿ ಮತ್ತು ಎರಡು ಬ್ಯೂಟಿ ಪಾರ್ಲರ್‌ಗಳ ಮಾಲೀಕರಾಗಿದ್ದರು. ಬೆಂಗಳೂರಿನಲ್ಲಿ ಬಿಬಿಎ ವಿದ್ಯಾರ್ಥಿನಿಯಾಗಿದ್ದ ಕ್ರಿಸ್ಟಿ ತನ್ನ ಓದನ್ನು ಅರ್ಧದಲ್ಲೇ ಬಿಟ್ಟು ಊರಿಗೆ ಮರಳಿದ್ದ ಮತ್ತು ಸ್ವಲ್ಪ ಸಮಯ ವಿದೇಶದಲ್ಲಿ ಕಳೆದಿದ್ದ, ಕ್ರಿಸ್ಟಿ ಮಾದಕ ವಸ್ತುಗಳ ಪ್ರಭಾವದಲ್ಲಿ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post