ಉಳ್ಳಾಲ : ಮೀಡಿಯಾ ಹಾಗೂ ಸಾಮಾಜಿಕ ಜಾಲತಾಣದಲ್ಲಿ ದೇಶದ ಎಲ್ಲೆಡೆ ಯಿಂದ ಬರುತ್ತಿರುವ ಕೆಲವು ಭಯಂಕರ ಸುದ್ದಿ ಗಳನ್ನು ಓದಿ ಕೊಂಡು ಜನ ದೂರದ ಊರುಗಳಿಗೆ ಪ್ರವಾಸ ಹೋಗಲು ಇಂದು ಹೆದರಿ ಕೊಳ್ಳುತ್ತಿದ್ದಾರೆ. ಇಂತಹ ಸಮಯಯೇ ಜನರಲ್ಲಿ ಜಾಗೃತಿ ಹಾಗೂ ಸೌಹಾರ್ದತೆ ಮೂಡಿಸುವ ಸಲುವಾಗಿ ಉಳ್ಳಾಲದ ಎಂಟು ಸಾಹಸಿ ಯುವಕರು ನಾಲ್ಕು ಬೈಕ್ ಗಳಲ್ಲಿ ಉತ್ತರ ಭಾರತ ವನ್ನು ಯಶಸ್ವಿಯಾಗಿ ಸುತ್ತಾಡಿಸಿಕೊಂಡು ಬಂದಿದ್ದಾರೆ .
ಕಳೆದ ತಿಂಗಳು ದಿನಾಂಕ 14-02-2022 ರಂದು 4ಬೈಕ್ ಮೂಲಕ ಹೊರಟ ಉಳ್ಳಾಲದ ಸೈಯದ್ ಆಫ್ರಿದ್, ಮಹಮ್ಮದ್ ಶಾಕಿರ್ ,ಮಹಮ್ಮದ್ ನೌಫ್ ಲ್, ಅಬ್ದುಲ್ ಸಮದ್, ಶಫೀಕ್, ಮುಜೀಬ್, ಹಫೀಜ್, ಉಮ್ಮರ್ ಫಾರೂಕ್ , ಈ ಒಟ್ಟು ಎಂಟು ಯುವಕರು ಹರಿಯಾಣ.ಮನಾಲಿ. ಪಂಜಾಬ್. ದೆಹಲಿ. ಆಗ್ರಾ.ಉತ್ತರ ಪ್ರದೇಶ. ಮಧ್ಯಪ್ರದೇಶ. ರಾಜಸ್ತಾನ ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯ ಗಳಲ್ಲಿ ಸುತ್ತಾಡಿದ್ದಾರೆ
ಸರಿ ಸುಮಾರು ಒಂದು ತಿಂಗಳ ಕಾಲ ಸಾಗಿದ ಈ ಯುವಕರ ಪ್ರವಾಸವು ಸುಮಾರು 10 ಸಾವಿರ ಕಿ. ಲೊ ಮೀಟರ್ ದೂರ ಇವರ ದ್ವಿಚಕ್ರ ವಾಹನ ಗಳು ಓಡಿದೆ .
ರಾತ್ರಿ ಹೊತ್ತಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳದಲ್ಲಿ ಟೆಂಟ್ ಹಾಕಿ ಕೊಂಡು ವಿಶ್ರಾಂತಿ ಮಾಡುತ್ತಿದ್ದ ಈ ಯುವಕ ರೊಂದಿಗೆ ಆಯಾ ರಾಜ್ಯದ ಜನರು ತುಂಬಾ ಪ್ರೀತಿ ಹಾಗೂ ಆತ್ಮೀಯತೆಯಿಂದ ಸಹಕರಿಸಿದ್ದಾರೆ ಎಂದು ಈ ಯುವಕರು ತಮ್ಮ ಅನುಭವ ವನ್ನು ಹಂಚಿ ಕೊಂಡಿದ್ದಾರೆ. …
ಪಂಜಾಬ್ ವಾಘ ದಲ್ಲಿ ಗಡಿ ಕಾಯುತ್ತಿರುವರುವ ಭಾರತೀಯ ಸೈನಿಕರು ಆತ್ಮೀಯವಾಗಿ ಉಳ್ಳಾಲದ ಈ ಯುವಕರಿಗೆ ಸ್ವಾಗತ ಕೊಟ್ಟು ಸಹಕರಿಸಿದ್ದಾರೆ. ಹರಿಯಾಣ ಪೊಲೀಸರು ಕೂಡ ಈ ಯುವಕರಿಗೆ ರಾತ್ರಿ ಹೊತ್ತಿನಲ್ಲಿ ಟೆಂಟ್ ಹಾಕಲು ಒಳ್ಳೆಯ ಸ್ಥಳ ವನ್ನು ಕೊಟ್ಟಿದ್ದಾರೆ .
ಕಾಶ್ಮೀರದಲ್ಲಿ ಕೊರೆಯುವ ಚಳಿಯಲ್ಲಿ ಈ ಯುವಕರ ಪಾಡು ಕಂಡು ಅಲ್ಲಿ ಗಸ್ತು ತಿರುಗುತ್ತಿದ್ದ ಸೈನಿಕರು ಇವರಿಗೆ ಸಹಾನುಭೂತಿ ವ್ಯಕ್ತ ಪಡಿಸಿ..ಕಾಶ್ಮೀರಕ್ಕೆ ಜೂನ್ ತಿಂಗಳಲ್ಲಿ ಬರುವುದೇ ಉತ್ತಮ. ಆಗ ಇಲ್ಲಿನ ವಾತಾವರಣ ಕೂಡ ಚೆನ್ನಾಗಿರುತ್ತೆ ಎಂಬ ಮಾಹಿತಿ ಕೊಟ್ಟು. ಚಳಿಯನ್ನು ತಡೆಯಲು ಕೆಲವು ಸಲಹೆ ಯನ್ನು ಕೂಡ ಸೈನಿಕರು ಇವರಿಗೆ ಕೊಟ್ಟಿದ್ದರಂತೆ .
ಕಾಶ್ಮೀರಿ ಜನರು ಕೂಡ ಚೆನ್ನಾಗಿ ಸತ್ಕಾರ ಮಾಡಿದ್ದಾರೆ ಎಂದು ಹೇಳುವ ಈ ಯುವಕರು ಉತ್ತರ ಪ್ರದೇಶ ದಲ್ಲಿ ಪೆಟ್ರೋಲ್ ಪಂಪ್ ಗಳ ಮತ್ತು ಹೋಟೆಲ್ ಗಳ ಕೊರತೆ ಯಿಂದ ಸ್ವಲ್ಪ ತೊಡಕಾಯಿತು ಅಷ್ಟೆ. ಅದು ಬಿಟ್ಟರೆ ಬಾಕಿ ಎಲ್ಲವೂ ಪರಿಪೂರ್ಣ ಎಂದು ಹೇಳುತ್ತಾರೆ .
ತಮಗೆ ಬೇಕಾದ ಉಪ್ಪು ಖಾರ ಉತ್ತರ ಭಾರತ ದಲ್ಲಿ ಸಿಗಲ್ಲ ಎಂದು ತಿಳಿದು ಕೊಂಡು ತಮ್ಮೊಂದಿಗೆ ತಂದ ಗ್ಯಾಸ್ ಸಿಲಿಂಡರ್ ನಿಂದ ತಮಗೆ ಬೇಕಾದ ಅಡುಗೆ ಯನ್ನು ತಯಾರಿ ಮಾಡಿ ಈ ಯುವಕರು ತಿನ್ನುತ್ತಿದ್ದರು .
ಇಂದಿನ ದಿನದಲ್ಲಿ ನೆಮ್ಮದಿ ಜೀವನಕ್ಕೆ ಅತೀ ಅಗತ್ಯವಾದ ಈ ಸೌಹಾರ್ದ ಸಾರುವ ಪ್ರವಾಸಕ್ಕಾಗಿ ಹೊರಟ ಈ ಯುವಕರು ನಿನ್ನೆ ದಿನಾಂಕ 15-03 – 2022 ರ ರಾತ್ರಿ 8 ರ ಹೊತ್ತಿಗೆ ಅವರು ಮತ್ತು ಅವರ ಬೈಕ್ ಗಳು ಕ್ಷೇಮವಾಗಿ ಉಳ್ಳಾಲಕ್ಕೆ ಮರಳಿ ಬಂದಾಗ ಅವರನ್ನು ಸಮಾಜ ಸೇವಕ ಅಲ್ತಾಫ್ ಉಳ್ಳಾಲ್ . ಜಿಲ್ಲಾ ಮಾಜಿ ಜಿಲ್ಲಾ ಕ್ರೀಡಾ ನಿರ್ದೇಶಕ ಸಾಜಿದ್ ಉಳ್ಳಾಲ್ . ಹನೀಫ್ ಬಸ್ತಿ ಪಡ್ಪು. ಹನೀಫ್ ಆನ್ನಿ, ಯು.ಎಮ್. ತಾಹಿರ್ . ಮೊಯ್ಲಾರ ಹೌಸ್ ಹಾಗೂ ಬಸ್ತಿಪಡ್ಫು ಕಲ್ಚರಲ್ ಎಸೋಸಿಯೇಶನ್ ಮತ್ತು ಬಿ.ಎಫ್.ಸಿ. (ರಿ) ತಂಡದ ಅಧ್ಯಕರಾದ ಯು.ಬಿ. ಹನೀಪ್, ಉಪಾದ್ಯಕ್ಷ ಹನೀಫ್ ಉಳ್ಳಾಲ್,ಕಾರ್ಯದರ್ಶಿ ಇಬ್ರಾನ್ ಬಾವ, ಟೀಮ್ ಮ್ಯಾನೇಜರ್ ಸಾದಿಕ್, ಸಿಯಾಬ್. ಹಲವಾರು ಜನರು ಪ್ರೀತಿ ಪೂರಕವಾಗಿ ಸ್ವಾಗತಿಸಿದರು
Discover more from Coastal Times Kannada
Subscribe to get the latest posts sent to your email.
Discussion about this post