ಮಂಗಳೂರು ಆ.15: ಸೌಜನ್ಯ ಅತ್ಯಾಚಾರ ಮತ್ತು ಹತ್ಯ, ಮುರುಘಾ ಮಠದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಕುಸ್ತಿ ಫೆಡರೇಶನ್ ನಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ, ಮಣಿಪುರದ ಮಹಿಳೆಯರ ನಗ್ನ ಮೆರವಣಿಗೆ ಇತ್ಯಾದಿ ಅಹಿತಕರ ಘಟನೆಗಳು ನಡೆಯುತ್ತಿರುವುದನ್ನು ನೋಡಿದಾಗ ಇಡೀ ದೇಶದಲ್ಲೇ ಮಹಿಳೆಯರಿಗೆ ಕೆಲಸ ಮಾಡಲು ಮುಕ್ತವಾದ ಸ್ವತಂತ್ರ ವಾತಾವರಣ ಇಲ್ಲದೇ ಇರುವುದು ಮತ್ತು ದೇಶವೇ ಮಹಿಳೆಯರಿಗೆ ಅಸುರಕ್ತವಾಗಿರುವುದು ಕಂಡುಬರುತ್ತದೆ ಮತ್ತು ನಮಗೆ ಒಂದು ಎಚ್ಚರಿಕೆಯ ಘಂಟೆಯಾಗಿ ಕಾಣಿಸುತ್ತಿದೆ.
ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಬಸ್ ಟಿಕೆಟ್ ಉಚಿತ, ಗೃಹಲಕ್ಷ್ಮೀ ಯೋಜನೆಯ ಮೂಲಕ 2000 ರೂ ಗಳ ಪ್ರತೀ ತಿಂಗಳು ಸಹಾಯಧನ ಇತ್ಯಾದಿಗಳನ್ನು ಜಾರಿಗೊಳಿಸುತ್ತಿರುವ ಹಾಗು ಒಕ್ಕೂಟ ಸರ್ಕಾರವು ಭೇಟಿ ಪಡಾವೂ, ಭೇಟಿ ಬಚಾವೂ (ಮಗಳನ್ನು ಓದಿಸಿ, ಮಗಳನ್ನು ರಕ್ಷಿಸಿ) ಎಂದು ಹೇಳುತ್ತಿರುವ ಸಂದರ್ಭದಲ್ಲಿ ಮಹಿಳೆಯರು ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಕೆಲಸ ಮಾಡಲು ಮತ್ತು ಜೀವನ ನಡೆಸಲು ಅವರಿಗೆ ಪ್ರಮುಖವಾಗಿ ಬೇಕಾದಂತಹ ರಕ್ಷಣೆ ಮತ್ತು ಭದ್ರತೆಯನ್ನು ನೀಡಿ ಸುರಕ್ಷತೆಯ ಭಾವವನ್ನು ತರಲು ವಿಫಲವಾಗಿರುವುದು ಒಂದು ದುರದೃಷ್ಟಕರ ಸಂಗತಿ.
ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸೌಜನ್ಯ ಎಂಬ 17 ವರ್ಷದ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಯಾವ ರೀತಿ ಭ್ರಷ್ಟ ಪಕ್ಷಗಳ ರಾಜಕೀಯ ಆಟದಿಂದ ನಿಜವಾದ ಅಪರಾಧಿಗಳು ತಪ್ಪಿಸಿಕೊಂಡು, ಒಬ್ಬ ನಿರಪರಾಧಿ ವಿನಾಕಾರಣ 11 ವರ್ಷಗಳು ದೈಹಿಕ, ಮಾನಸಿಕ ಹಿಂಸೆ ಅನುಭವಿಸುವಂತೆ ಆಗಿದೆ. ಅಲ್ಲದೇ ಸೌಜನ್ಯಳ ಕುಟುಂಬ ನ್ಯಾಯ ಸಿಗದೇ ಪ್ರತೀ ದಿನ ದು:ಖದಿಂದ, ನೋವಿನಿಂದ ನರಳುವಂತಾಗಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ನಿರಪರಾಧಿ ಎಂದು ಘೋಷಣೆ ಆದ ಮೇಲೆ ಮರು ತನಿಖೆ ನಡೆಸಲು ಸರ್ಕಾರ ಯಾಕ ಮೀನ ಮೇಷ ಎಣಿಸುತ್ತಿದೆ? ಸರ್ಕಾರಕ್ಕೆ ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಅವರಿಗೆ ನ್ಯಾಯಕೊಡಿಸುವ ಯಾವುದೇ ಉದ್ದೇಶ ಇಲ್ಲವೇ? ಅಥವಾ ಯಾವುದಾದರೂ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಸರ್ಕಾರ ಶರಣಾಗಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು.
ಸರ್ಕಾರಕ್ಕೆ ನಿಜವಾಗಲೂ ಮಹಿಳೆಯರ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೂಡಲೇ ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರುತನಿಖೆಗೆ ಆದೇಶ ನೀಡಬೇಕು, ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ತನಿಖೆಯ ದಾರಿ ತಪ್ಪಿಸಿ, ಸಾಕ್ಷಿನಾಶ ಮಾಡಿ ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳುವ ಹಾಗೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಈ ಕೂಡಲೇ ವಜಾ ಮಾಡಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ KRS ಪಕ್ಷ ಅಗ್ರಹಿಸುತ್ತದೆ.
ಈ ಒಂದು ರಾಜಕೀಯ ಪ್ರೇರಿತ ಹಾಗೂ ಪ್ರಭಾವಿಗಳ ಹಿಡಿತದಲ್ಲಿರುವ ಸರ್ಕಾರಿ ವ್ಯವಸ್ಥೆಯಿಂದ ಮುಂದಿನ ದಿನಗಳಲ್ಲಿ ಕೂಡಾ ಇದೇ ರೀತಿಯ ಘಟನೆಗಳು ಮರುಕಳಿಸುವುದಂತೂ ಗ್ಯಾರಂಟಿ, ಅದ್ದರಿಂದ ಮಹಿಳೆಯರಿಗೆ ಶಕ್ತಿ ಭಾಗ್ಯ, ಗೃಹಲಕ್ಷ್ಮೀ ಭಾಗ್ಯಗಳನ್ನು ನೀಡುತ್ತಿರುವ ಈಗಿನ ಸರ್ಕಾರ, ವ್ಯವಸ್ಥೆಯಲ್ಲಿ ಇರುವ ಲೋಪ ದೋಷಗಳನ್ನು ಕೂಡಲೇ ಸರಿಪಡಿಸಿ, ಸೂಕ್ತವಾದ ಬದಲಾವಣೆಗಳನ್ನು ತಂದು ಪ್ರಾಮುಖ್ಯತ ಮೇಲೆ ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳ ಅಡಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಮುಂದಿನ ಒಂದು ವರ್ಷದಲ್ಲಿ ಮುಗಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಈ ಮೂಲಕ KRS ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅಗ್ರಹಿಸುತ್ತಿದ್ದೇವೆ.
ನಮ್ಮ ಸರ್ಕಾರಗಳು, ಕಲುಷಿತಗೊಂಡು, ದುರಾಚಾರ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವುದ ಇಂತಹ ಪರಿಸ್ಥಿತಿಗೆ ಕಾರಣ. ಉತ್ತಮ ಪೊಲೀಸ್ ವ್ಯವಸ್ಥೆಯ ಮೂಲಕ, ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆಯನ್ನು ಮಾಡಬೇಕಾಗಿದೆ, ಅದರ ನಮ್ಮ ಸರ್ಕಾರಗಳು ಆ ಬಗ್ಗೆ ಗಮನ ನೀಡದೆ, ವರ್ಗಾವಣೆ, ಕಮೀಷನ್ ದಂಧ, ಹೀಗೆ ಸಾಲು ಸಾಲು ಅಕ್ರಮಗಳಲ್ಲಿ ಮುಳುಗಿರುವುದರಿದ ಇಂತಹ ಪರಿಸ್ಥಿತಿ ಇದೆ.
ಇಂದಿನ ಕಾಗ್ರೆಸ್ ಸರ್ಕಾರವು, ವಿವೇಚನೆಯಿಲ್ಲದೆ ನಡೆದುಕೊಳ್ಳುತ್ತಿದ್ದು, ಭ್ರಷ್ಟಾಚಾರಕ್ಕೆ ನಿಯಂತ್ರಣ ಹೇರಿ, ಸಂಪನ್ಮೂಲ ಕ್ರೋಢೀಕರಿಸಿದರೆ, ಗ್ಯಾರಂಟಿ ಯೋಜನಗಳ ಜೊತೆಗೆ, ಇತರ ಕಲ್ಯಾಣ ಕಾರ್ಯಕ್ರಮ ಹಾಗು ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲ ಒದಗಿಸಬಹುದಾಗಿದೆ. ಆದರೆ, ಇದಾವುದಕ್ಕೂ ಗಮನ ನೀಡುತ್ತಿಲ, ಕನಿಷ್ಠ ಪಕ್ಷ ದಕ್ಷ ಅಡಳಿತ ನೀಡುವ ಬಗ್ಗೆಯೂ ಯೋಚಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ, ಈ ಕಾಂಗ್ರೆಸ್ ಸರ್ಕಾರಕ್ಕೆ ಯಾವ ಗ್ಯಾರಂಟಿಯೂ ಉಪಯೋಗಕ್ಕೆ ಬರುವುದಿಲ್ಲ. ಮಹಿಳೆಯರಿಗೆ ಭದ್ರತೆ ಮತ್ತು ಸುರಕ್ಷತೆ ಇಲ್ಲದಿದ್ದರೆ ಶಕ್ತಿ ಮತ್ತು ಗೃಹಲಕ್ಷ್ಮಿಯಂತಹ ಯೋಜನೆಗಳು ಕೇವಲ ತಾತ್ಕಾಲಿಕ ನರವನ್ನು ಮಾತ್ರ ಒದಗಿಸಬಲ್ಲದು.
ಈ ಎಲ್ಲಾ ಕಾರಣಗಳಿಂದ ಇವತ್ತು ಸ್ವಾತಂತ್ರ್ಯ ದಿನಾಚರಣೆಯ ದಿನ ನಮ್ಮ ದಕ್ಷಿಣ ಕನ್ನಡ ಜಿಲ್ಲಾ KRS ಪಕ್ಷದ ವತಿಯಿಂದ “ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಭದ್ರತೆ’ ಬೇಕು ಅನ್ನುವ ಅರಿವು ಮೂಡಿಸುವ ಒಂದು ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ನಡಿಗೆ ಕಾರ್ಯಕ್ರಮ ಮಂಗಳೂರಿನ ಟೌನ್ ಹಾಲ್ ನ ಸುತ್ತ ಸಂಚರಿಸಿ, ಗಾಂಧಿ ಪ್ರತಿಮೆ ಬಳಿ ಮುಕ್ತಾಯಗೊಂಡಿತು. ಮುಖ್ಯವಾಗಿ ಮಹಿಳೆಯರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮತ್ತು ಜೀವನ ನಡೆಸಲು ಅಗತ್ಯವಾಗಿ ಬೇಕಾದಂತಹ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ನಡಿಗೆಯಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ಶ್ರೀ ರಘುಪತಿ ಭಟ್, ರಾಜ್ಯ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಬಶೀರ್, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಪ್ರವೀಣ್ ಜಾರ್ಜ್ ಪೇರರ, ಉಪಾಧ್ಯಕ್ಷರಾದ ಶ್ರೀ ಜೆರಾರ್ಡ್ ಟವರ್ಸ್, ಉಪಾಧ್ಯಕ್ಷರಾದ ಶ್ರೀಮತಿ ಎನ್ನಿ ಪಿಂಟೋ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರೇಮ್ ಜೇಮ್ಸ್ ಲೋಬೋ, ಕಾರ್ಯದರ್ಶಿಗಳಾದ ಶ್ರೀಮತಿ ಯಶೋದ, ಶ್ರೀ ದಯಾನಂದ ಶ್ರೀ ಮೊಹಮ್ಮದ ಸಾಲಿ, ಶ್ರೀ ಪ್ರಕಾಶ್, ಶ್ರೀಮತಿ ಸುನೀತ ರೂಝಾರಿಯೋ ಹಾಜರಿದ್ದರು. KRS ಪಕ್ಷದ ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಮತ್ತು ಸೈನಿಕರು ಕೂಡಾ ಭಾವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post