• About us
  • Contact us
  • Disclaimer
Monday, March 2, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮೂರ್ಛೆ ರೋಗ ಬಂದಂತೆ ಚೈತ್ರಾ ಕುಂದಾಪುರ ಹೈಡ್ರಾಮಾ: ಫಿಟ್ಸೂ ಇಲ್ಲ ಏನೂ ಇಲ್ಲ, ಆಸ್ಪತ್ರೆಯಲ್ಲಿ ಎಲ್ಲವೂ ನಾರ್ಮಲ್‌!

Coastal Times by Coastal Times
September 16, 2023
in ರಾಜ್ಯ
ಮೂರ್ಛೆ ರೋಗ ಬಂದಂತೆ ಚೈತ್ರಾ ಕುಂದಾಪುರ ಹೈಡ್ರಾಮಾ: ಫಿಟ್ಸೂ ಇಲ್ಲ ಏನೂ ಇಲ್ಲ, ಆಸ್ಪತ್ರೆಯಲ್ಲಿ ಎಲ್ಲವೂ ನಾರ್ಮಲ್‌!
67
VIEWS
WhatsappTelegramShare on FacebookShare on Twitter

ಬೆಂಗಳೂರು (ಸೆ.16): ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ದಿಢೀರ್‌ ಅಸ್ವಸ್ಥಳಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ನಾಟಕೀಯ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಗುರುವಾರ ಚೈತ್ರಾಳನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಿಟ್ಟಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಚೈತ್ರಾ ಶುಕ್ರವಾರ ಬೆಳಗ್ಗೆ ಎದ್ದು ಒಂದು ಗಂಟೆ ಯೋಗ ಹಾಗೂ ಧ್ಯಾನ ಮಾಡಿದ್ದಳು.

ಸೆಪ್ಟೆಂಬರ್‌ 12ರಂದು ರಾತ್ರಿ ಉಡುಪಿಯಲ್ಲಿ ಬಂಧಿತಳಾಗಿದ್ದ ಚೈತ್ರಾ ಮತ್ತು ಇತರ ನಾಲ್ವರನ್ನು ಕೋರ್ಟ್‌ 10 ದಿನಗಳ ಅವಧಿಗೆ ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ. ಚೈತ್ರಾಳನ್ನು ರಾತ್ರಿ ಸಾಂತ್ವನ ಕೇಂದ್ರದಲ್ಲಿಟ್ಟು ಬೆಳಗ್ಗೆ ಸಿಸಿಬಿ ಕಚೇರಿಗೆ ತಂದು ವಿಚಾರಣೆ ನಡೆಸಲಾಗುತ್ತಿತ್ತು. ಇದೀಗ ಆಕೆ ಸಿಸಿಬಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ಬಯಲಿಗೆ ಬಂದಿದೆ. ಹಿಂದುತ್ವದ ಪ್ರಖರ ಪ್ರತಿಪಾದಕಿಯಾಗಿದ್ದು, ಈಗ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಕೆ ಈಗ ಭಾರಿ ಅಪಮಾನಕ್ಕೆ ಗುರಿಯಾಗಿರುವುದರಿಂದ ತಾನು ಈ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗುವುದು ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಆಕೆ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ ಎಂದು ನಂಬಲಾಗಿದೆ.

ಚೈತ್ರಾ ಮೂರ್ಛೆ ನಾಟಕ: ಮೂರ್ಛೆ ರೋಗ ಬಂದಿದೆ ಎಂದು ಚೈತ್ರಾ ಕುಂದಾಪುರ ಎಂಬಾಕೆಯನ್ನು ಸಿಸಿಬಿ ಪೊಲೀಸರು ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಇಸಿಜಿ, ಬಿಪಿ, ಶುಗರ್‌ ಎಲ್ಲವೂ ನಾರ್ಮಲ್‌ ಇದೆ. ಸಿಟಿ ಸ್ಕ್ಯಾನ್‌ ಸೇರಿದಂತೆ ಎಲ್ಲಾ ಪರೀಕ್ಷೆ ಮಾಡಲಾಗಿದೆ. ಮೂರ್ಛೆ ರೋಗದಿಂದ ಆಕೆ ಕುಸಿದು ಬಿದ್ದಿಲ್ಲ. ಆಕೆ ಬಾಯಲ್ಲಿ ನೊರೆ ಇರಲಿಲ್ಲ. ಆರೋಗ್ಯ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆರೋಪಿ ಚೈತ್ರಾ ಸಿಸಿಬಿ ಪೊಲೀಸರ ವಿಚಾರಣೆ ತಪ್ಪಿಸಿಕೊಳ್ಳಲು ಮೂರ್ಛೆ ನಾಟಕ ಮಾಡಿದ್ದಾಳೆ ಎನ್ನಲಾಗಿದೆ.

ಚೈತ್ರಾಳಿಗೆ ಈ ಹಿಂದೆ ಮೂರ್ಛೆ ರೋಗ ಇತ್ತು. ಸಾರ್ವಜನಿಕ ಭಾಷಣದ ವೇಳೆ ಮೂರ್ಛೆ ಹೋಗಿದ್ದಳು ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತತೆ ಇಲ್ಲ. ವಿಚಾರಣೆ ವೇಳೆ ಆಕೆಗೆ ಮೂರ್ಛೆ ಬಂದಿರಲಿಲ್ಲ. ಬದಲಾಗಿ ಆಕೆ ಮೂರ್ಛೆ ಹೋದ ಹಾಗೆ ನಟಿಸಿ ಡ್ರಾಮ ಸೃಷ್ಟಿಸಿದ್ದಾಳೆ. ಸಿಸಿಬಿ ಪೊಲೀಸರು ಶನಿವಾರ ಆಕೆಯ ಆರೋಗ್ಯ ಚೇತರಿಕೆ ನೋಡಿಕೊಂಡು ಮತ್ತೆ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಬಿ.ಎಂ. ಪ್ರೌಢಶಾಲೆ ಉಳ್ಳಾಲ ಇದರ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕ-ಬಾಲಕಿಯ ಫುಟ್ಬಾಲ್ ಪಂದ್ಯಾಟ ಉದ್ಘಾಟನೆ

Next Post

ಮಂಗಳೂರು: ಯೆನೆಪೊಯದಿಂದ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ಶ್ರೀಮತಿ ಶೈಸಿಲ್ ಮ್ಯಾಥ್ಯೂ ಇವರಿಗೆ ಪಿಎಚ್‌ಡಿಯನ್ನು ಪ್ರದಾನ

Related Posts

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,
ರಾಜ್ಯ

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,

February 14, 2026
72
ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ
ರಾಜ್ಯ

ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ

February 2, 2026
132
Next Post
ಮಂಗಳೂರು: ಯೆನೆಪೊಯದಿಂದ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ಶ್ರೀಮತಿ ಶೈಸಿಲ್ ಮ್ಯಾಥ್ಯೂ ಇವರಿಗೆ ಪಿಎಚ್‌ಡಿಯನ್ನು ಪ್ರದಾನ

ಮಂಗಳೂರು: ಯೆನೆಪೊಯದಿಂದ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ಶ್ರೀಮತಿ ಶೈಸಿಲ್ ಮ್ಯಾಥ್ಯೂ ಇವರಿಗೆ ಪಿಎಚ್‌ಡಿಯನ್ನು ಪ್ರದಾನ

Discussion about this post

Recent News

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

March 1, 2026
69
ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

March 1, 2026
10
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

March 1, 2026
ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

March 1, 2026
ಇರಾನ್ ಮೇಲೆ ಇಸ್ರೇಲ್ ದಾಳಿ; ರಾಜಧಾನಿ ಟೆಹ್ರಾನ್ ಮೇಲೆ ಭೀಕರ ಕ್ಷಿಪಣಿ ದಾಳಿ, ತುರ್ತು ಪರಿಸ್ಥಿತಿ ಘೋಷಣೆ!

ಇರಾನ್ ಮೇಲೆ ಇಸ್ರೇಲ್ ದಾಳಿ; ರಾಜಧಾನಿ ಟೆಹ್ರಾನ್ ಮೇಲೆ ಭೀಕರ ಕ್ಷಿಪಣಿ ದಾಳಿ, ತುರ್ತು ಪರಿಸ್ಥಿತಿ ಘೋಷಣೆ!

February 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d