ಮಂಗಳೂರು: ಅಕ್ಟೋಬರ್ 16 ನೌಷಾದ್ ಹಾಜಿ ಸೂರಲ್ಪಾಡಿ ಮೆಮೋರಿಯಲ್ ಚಾರೀಟೇಬಲ್ ಟ್ರಸ್ಟ್ (ರಿ) ಇವರ ವತಿಯಿಂದ ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ಇವರ ಸಹಯೋಗದೊದಿಂಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಮಾದಕ ವ್ಯಸನದ ವಿರುದ್ಧ ಜಾಗೃತಿ ಕಾರ್ಯಕ್ರಮ ಮತ್ತು ಹಿರಿಯ ವೈದ್ಯರಿಗೆ ಸನ್ಮಾನ ಕಾರ್ಯಕ್ರಮವು 15 ಅಕ್ಟೋಬರ್ 2023 ಆದಿತ್ಯವಾರದಂದು ಗುರುಪುರ ಕೈಕಂಬದಲ್ಲಿರುವ ಅಲ್-ಬಿರ್ರ್ ಕ್ಯಾಂಪಸ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಮಾಲುದ್ದೀನ್ ದಾರಿಮಿ ದುವಾ ನೇರವೇರಿಸಿದರು.
ಶ್ರೀ ಸ್ವಾಮಿ ವಿವೇಕಚೈತಾನಂದ (ರಾಮ ಕೃಷ್ಣ ತಪೋವನ ಪೊಳಲಿ) ಮತ್ತು ಪೊಂಪೈ ಮಾತಾ ಚರ್ಚ್ ಗುರುಪುರ ಕೈಕಂಬ ಇಲ್ಲಿಯ ರೆ.ಫಾದರ್ ರುಡಾಲ್ಫ್ ರವಿ ಡೇಸಾ, ಹಸನ್ ಮದನಿ ಮರ್ಕಝ್ ಕೈಕಂಬ ಇವರು ಮೂವರು ಧಾರ್ಮಿಕ ನೇತಾರರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಯ್ಯದ್ ಝೈನುಲ್ ಆಬಿದೀನ್ ಜೆಫ್ರಿ ತಂಙಳ್ (ಅಧ್ಯಕ್ಷರು ದಾರುಸ್ಸಲಾಂ ಬೆಳ್ತಂಗಡಿ) ಮಾತನಾಡಿ ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿಡುವರ ಸೇವೆ ಮತ್ತು ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸ್ಮರಣೆ ಸಂಚಿಕೆಯನ್ನು ರಚಿಸಬೇಕೆಂದು ಹೇಳಿದರು.
ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯಕ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಜನಾಬ್ ಇನಾಯತ್ ಅಲಿ ಮುಲ್ಕಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಿ.ಸಿ ಮಾತನಾಡಿ ನೌಷಾದ್ ಹಾಜಿಯವರ ಸವಿ ನೆನಪಿಗಾಗಿ ಅವರ ಹೆಸರಿನಲ್ಲಿ ಒಂದು ಸ್ಮಾರಕ ಭವನವನ್ನು ನಿರ್ಮಿಸಬೇಕೆಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಸಮಾಜಕ್ಕೆ ಅರ್ಪೂವ ಸೇವೆ ಸಲ್ಲಿಸಿದ ಡಾ. ಕೆ ಸುಂದರ್ ಭಟ್, ಡಾ.ರಮೇಶ್ ಮಲ್ಲಿ, ಡಾ.ನಾಸಿರ್ ಹುಸೈನ್ ಕಿಲ್ಪಾಡಿ, ಡಾ. ಶ್ರೀಪತಿ ಕಿನ್ನಿಕಂಬಳ ಈ ನಾಲ್ವಾರು ಹಿರಿಯ ವೈದ್ಯರು ಮತ್ತು ರಫೀಕ್ ಮಾಸ್ಟರ್ ರವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಮ್.ಎಚ್ ಮೊಹಿದಿನ್ ಹಾಜಿ ಅಡ್ಡೂರು (ಅಧ್ಯಕ್ಷರು ದ.ಕ ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯನ್), ಯು.ಪಿ ಇಬ್ರಾಹಿಂ ಅಡ್ಡೂರು (ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು), ಉಸ್ಮಾನ್ ಹಾಜಿ ಏರ್ ಇಂಡಿಯಾ (ಕೋಶಾಧಿಕಾರಿ ದಾರುನ್ನೂರು ಕಾಶಿಪಟ್ನ), ಅಸ್ಕರ್ ಅಲಿ (ಮಾಲಕರು ಡೆಕ್ಕನ್ ಪ್ಲಾಸ್ಟ್), ಡಾ.ಮುಬಸ್ಸಿರ್ (ಡೈರಕ್ಟರ್ ಹೆಲ್ತ್ ಕೇರ್), ಅಬ್ದುಲ್ ಸಲಾಂ (ಅಧ್ಯಕ್ಷರು ಸೆಂಟ್ರಲ್ ಕಮಿಟಿ ಮೂಡಬಿದ್ರಿ), ಅಬ್ದುಲ್ ರಹಿಮಾನ್ (ಅಧ್ಯಕ್ಷರು ಫ್ರೆಂಡ್ಸ್ ಸರ್ಕಲ್ ಗುರುಪುರ ಕೈಕಂಬ), ಅಶ್ರಫ್ ಸಿ.ಕೆ (ಅಧ್ಯಕ್ಷರು ಸಿ.ಎಫ್.ಸಿ ಸೂರಲ್ಪಾಡಿ), ಇದ್ದಿನಬ್ಬ ದೊಂಪ (ಸಲಹೆಗಾರರು ಜಿ.ಸಿ.ಸಿ. ಅಮ್ಮುಂಜೆ), ಹಬೀಬ್ ಕಟ್ಟಪುಣಿ (ಅಧ್ಯಕ್ಷರು ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರು), ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾದಕ ವ್ಯಸನದ ಕುರಿತು ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜನಾಬ್ ಆಸಿಫ್ ಸೂರಲ್ಪಾಡಿ ಅಧ್ಯಕ್ಷತೆ ವಹಿಸದ್ದರು. ಈ ಶಿಬಿರದಲ್ಲಿ ವಿವಿಧ ವಿಭಾಗಗಳ ತಜ್ಞರ ವೈದ್ಯರು ಭಾಗವಹಿಸಿದ್ದರು. ಚರ್ಮ ರೋಗ ,ಮೂಳೆ ಎಲುಬು, ಕಣ್ಣು, ಕಿವಿ ಮೂಗು ಹಾಗೂ ಗಂಟಲು, ರೋಗ, ಮಕ್ಕಳ ರೋಗ, ಮಾನಸಿಕ ಕಾಯಿಲೆ, ಕ್ಯಾನ್ಸರ್ ರೋಗ, ಸಾಮಾನ್ಯ ರೋಗ, ನರ ರೋಗ, ಎದೆ ರೋಗ ಹೀಗೆ ವಿವಿಧ ವಿಭಾಗಗಳ ತಜ್ಞ ವೈದ್ಯರಿಂದ ತಪಾಸಣೆ ನಡೆಯಿತು. ಅಗತ್ಯ ಇದ್ದವರಿಗೆ ಉಚಿತವಾಗಿ ಇ.ಸಿ.ಜಿ, ಮದುಮೇಹ ಮತ್ತು ರಕ್ತದೊತ್ತಡ ತಪಾಸಣೆ ಕೂಡಾ ಮಾಡಲಾಯಿತು. ಸುಮಾರು 488 ಜನರು ಈ ಶಿಬಿರದ ಪ್ರಯೋಜನೆ ಪಡೆದುಕೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಅಗತ್ಯ ಉಳ್ಳವರಿಗೆ ಕನ್ನಡಕವನ್ನು ಉಚಿತವಾಗಿ ಕೂಡ ವಿತರಣಾ ಮಾಡಲಾಯಿತು .
ಜನಾಬ್ ಹಬೀಬ್ ರಹ್ಮಾನ್ ವಕೀಲರು ಬಿ.ಸಿ.ರೋಡ್ ಸ್ವಾಗತಿಸಿದರು. ಅಬ್ದುಲ್ ಹಮೀದ್ ಕಣ್ಣೂರು ಧನ್ಯವಾದಗೈದರು. ಆರೀಫ್ ಕಮ್ಮಾಜೆ ಕಾರ್ಯಕ್ರಮ ನಿರೂಪಿಸಿದರು. ಲತೀಫ್ ಗುರುಪುರ,ಶಾಫೀ ಮೂಲರಪಟ್ನ, ಡಾ ಇ.ಕೆ.ಎ ಸಿದ್ದೀಕ್, ಯಾಸಿರ್ ಮೂಡಬಿದ್ರಿ, ಸಾಲಿ ಮೂಲರಪಟ್ನ, ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಜಲೀಲ್ ನೌಷಾದ್ ಹಾಜಿ ಸಹೋದರರು, ಸಿತಾರ್ ಮಜೀದ್ ಹಾಜಿ, ಆಸಿಫ್ ಫರಂಗಿಪೇಟೆ, ಹಾಸಿರ್ ಪೇರಿಮಾರ್, ಅಹ್ಮದ್ ಹುಸೈನ್, ಅಝೀಝ್ ಮಾಲಿಕ್, ಅಶ್ರಫ್ ಮರೋಡಿ, ಅಬ್ದುಲ್ ಸಮದ್ ಅರಳ, ಸಾಹುಲ್ ಗುರುಪುರ, ತಾಜುದ್ದೀನ್ ಅಮ್ಮುಂಜೆ, ಶೇಕ್ ಕೈಕಂಬ, ಅಬ್ದುಲ್ ಮಜೀದ್ ಅಮ್ಮುಂಜೆ ಮುಕ್ತಾರ್ ಅಹ್ಮದ್ ಸೂರಲ್ಪಾಡಿ,ಝಕರಿಯಾ ಪರ್ವೇಝ್, ಮೂಲರಪಟ್ನ, ಸಿರಾಜ್ ಆತೂರ್, ಫ್ರೆಂಡ್ಸ್ ಸರ್ಕಲ್ ಕೈಕಂಬ ಸಿ.ಎಫ್.ಸಿ. ಸೂರಲ್ಪಾಡಿ, ಜಿ.ಸಿ.ಸಿ ಅಮ್ಮುಂಜೆ,
ಫೈವ್ ಸ್ಟಾರ್ ಯಂಗ್ ಬಾಯ್ಸ್ (ರಿ) ಅಡ್ಡೂರು, ಜಿ.ಎಚ್.ಎಮ್ ಫೌಂಡೇಶನ್ ಮೂಲರಪಟ್ಟ ಮತ್ತು ಇತರ ಸಂಘ ಸಂಸ್ಥೆಗಳು ವಿಶೇಷವಾಗಿ ಸಹಕರಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post