• About us
  • Contact us
  • Disclaimer
Saturday, April 18, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

6 ತಿಂಗಳ ಹಿಂದೆ ನಡೆದ ವೈದ್ಯೆಯ ಸಾವಿನ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್​: ಹುಷಾರಿಲ್ಲದ ವೈದ್ಯೆ ಪತ್ನಿಯನ್ನು ಕೈಯಾರೆ ಇಂಜೆಕ್ಷನ್ ನೀಡಿ ಕೊಂದ ವೈದ್ಯ ಪತಿ

Coastal Times by Coastal Times
October 16, 2025
in ಕ್ರೈಮ್ ನ್ಯೂಸ್
6 ತಿಂಗಳ ಹಿಂದೆ ನಡೆದ ವೈದ್ಯೆಯ ಸಾವಿನ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್​: ಹುಷಾರಿಲ್ಲದ ವೈದ್ಯೆ ಪತ್ನಿಯನ್ನು ಕೈಯಾರೆ ಇಂಜೆಕ್ಷನ್ ನೀಡಿ ಕೊಂದ ವೈದ್ಯ ಪತಿ
93
VIEWS
WhatsappTelegramShare on FacebookShare on Twitter

ಬೆಂಗಳೂರು: ಆರು ತಿಂಗಳ ಹಿಂದೆ ನಡೆದ ವೈದ್ಯೆಯೊಬ್ಬರ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಎಫ್ಎಸ್ಎಲ್ ವರದಿಯ ಹಿನ್ನೆಲೆಯಲ್ಲಿ, ವೈದ್ಯೆ ಪತ್ನಿಗೆ ಅರಿವಳಿಕೆ ಔಷಧಿ ನೀಡಿ ಕೊಲೆಗೈದ ಗಂಭೀರ ಆರೋಪದ ಮೇಲೆ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

“ಕೃತಿಕಾ ಎಂ.ರೆಡ್ಡಿ ಅವರನ್ನು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ 2025ರ ಏಪ್ರಿಲ್​ 21ರಂದು ಮಾರತ್ತಹಳ್ಳಿ ವ್ಯಾಪ್ತಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ರೋಗಿಯನ್ನು ಪರೀಕ್ಷಿಸಿದ್ದ ವೈದ್ಯರು, ಈಗಾಗಲೇ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಆಗ ಯುಡಿಆರ್ ಪ್ರಕರಣ ದಾಖಲಾಗಿತ್ತು. ಬಳಿಕ ಕೃತ್ಯ ನಡೆದ ಸ್ಥಳಕ್ಕೆ ತೆರಳಿದ ಸೋಕೋ (ಎಸ್.ಒ.ಸಿ.ಒ) ತಂಡದವರು ಸ್ಥಳ ಪರಿಶೀಲನೆ ನಡೆಸಿ ಘಟನಾ ಸಂದರ್ಭದಲ್ಲಿ ಬಳಕೆಯಾಗಿದ್ದ ಕ್ಯಾನೂಲಾ ಸೆಟ್, ಇಂಜೆಕ್ಷನ್ ಟ್ಯೂಬ್ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಿದ್ದರು. ಅಲ್ಲದೆ, ಮೃತದೇಹದಿಂದ ವಿಸೆರಾ ಮಾದರಿಗಳನ್ನು ಸಂಗ್ರಹಿಸಿ ಎಫ್​ಎಸ್​​ಎಲ್​ಗೆ ಕಳುಹಿಸಲಾಗಿತ್ತು. ಎಫ್​ಎಸ್​​ಎಲ್​​ನ ತಜ್ಞರು ವಿಸೆರಾ ಮಾದರಿಗಳನ್ನು ಪರೀಕ್ಷಿಸಿ, ಮೃತಳ ದೇಹದ ಅಂಗಾಂಗಗಳಲ್ಲಿ ಈ ಅರಿವಳಿಕೆ ಪದಾರ್ಥ ಪತ್ತೆಯಾಗಿದೆ. ಬಳಿಕ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ, ವೃತ್ತಿಯಲ್ಲಿ ವೈದ್ಯನಾದ ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿ, ಕೊಲೆ ಮಾಡಿರಬಹುದೆಂದು 13/10/2025ರಂದು ದೂರು ಸಲ್ಲಿಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಉಡುಪಿಯ ಮಣಿಪಾಲದಿಂದ ಬಂಧಿಸಿದ್ದಾರೆ” ಎಂದು ಆಯುಕ್ತರು ಮಾಹಿತಿ ನೀಡಿದರು.

2024ರ ಮೇ 26ರಂದು ಡಾ.ಮಹೇಂದ್ರ ರೆಡ್ಡಿ ಮತ್ತು ಡಾ.ಕೃತಿಕಾ ರೆಡ್ಡಿಯ ವಿವಾಹವಾಗಿತ್ತು. ದಂಪತಿ ಗುಂಜೂರಿನಲ್ಲಿರುವ ಅವರ ಮನೆಯಲ್ಲಿ ವಾಸವಾಗಿದ್ದರು. ಆದರೆ, ಮದುವೆಯಾದ ಸ್ವಲ್ಪ ದಿನಗಳ ನಂತರ ಅಳಿಯ ನನ್ನ ಮಗಳ ಬಗ್ಗೆ ಅಷ್ಟಾಗಿ ಕಾಳಜಿ ತೋರಿಸುತ್ತಿರಲಿಲ್ಲ. ಮಗಳಿಗೆ ಯಾವುದೇ ಹಣಕಾಸಿನ ಸಹಾಯ ಮಾಡದೇ, ಅವಳಿಂದಲೇ ಹಣ ಪಡೆಯುತ್ತಿದ್ದ.

21/04/2025ರಂದು ರಾತ್ರಿ ಕೃತಿಕಾಗೆ ಗ್ರಾಸ್ಟ್ರಿಕ್ ಸಮಸ್ಯೆ ಇದೆ ಎಂದು ಮಹೇಂದ್ರ ರೆಡ್ಡಿ ತನ್ನ ಮನೆಯಲ್ಲೇ ಆಕೆಯ ಬಲಗಾಲಿಗೆ ಐವಿ ಕ್ಯಾನ್ಯುಲಾ ಔಷಧಿ ಕೊಡಲು ಚುಚ್ಚಿದ್ದಾನೆ. ಬಳಿಕ 22/04/2025ರಂದು ಬೆಳಗ್ಗೆ ಅವಳಿಗೆ ವಿಶ್ರಾಂತಿ ಬೇಕೆಂದು ನಮ್ಮ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದ. ನಂತರ ಕೆಲಸಕ್ಕೆ ಹೋಗಿ ಮತ್ತೆ ಅದೇ ದಿನ ರಾತ್ರಿ ನಮ್ಮ ಮನೆಗೆ ಬಂದು ರಾತ್ರಿ ವೇಳೆ ನನ್ನ ಮಗಳಿಗೆ ಔಷಧಿ ಕೊಟ್ಟಿದ್ದ.

ಅಂದೂ ಕೂಡ ನನ್ನ ಮಗಳು ಎಂದಿನಂತೆ ಊಟ ಮಾಡಿಕೊಂಡು ಆರೋಗ್ಯವಾಗಿದ್ದಳು. ಆದರೆ, 23/04/2025ರಂದು ಮಧ್ಯಾಹ್ನ ಮಗಳಿಗೆ ಕಾಲಿನಲ್ಲಿ ಹಾಕಿರುವ ಐವಿ ಕ್ಯಾನ್ಯುಲಾದಿಂದ ತನಗೆ ವಿಪರೀತ ನೋವಾಗುತ್ತಿದೆ. ಇದನ್ನು ತೆಗೆಯಬಹುದೇ ಎಂದು ವಾಟ್ಸ್​ಆ್ಯಪ್​ ಮೂಲಕ ಕೇಳಿದ್ದಕ್ಕೆ, ಅದನ್ನು ತೆಗೆಯಬೇಡ. ಮತ್ತೊಂದು ಡೋಸ್​​ ಕೊಟ್ಟರೆ ಮತ್ತೆ ನೋವು ಬರುವುದಿಲ್ಲ ಎಂದು ನಂಬಿಸಿದ್ದ.

ಅಲ್ಲದೆ, ಅದೇ ದಿನ ರಾತ್ರಿ 9:00 ಗಂಟೆಗೆ ಬಂದ ಆತ ಐವಿ ಮೂಲಕ ಔಷಧಿಗಳನ್ನು ನೀಡಿದ್ದ. 24/04/2025ರಂದು ಬೆಳಗ್ಗೆ ಸುಮಾರು 07:30ರ ಸಮಯದಲ್ಲಿ ಕೃತಿಕಾ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಯಿತು. ಆಕೆ ಮಾತನಾಡದೇ ಇದ್ದಾಗ ಕೂಡಲೇ ನಾನು ಮತ್ತು ಅಳಿಯ ಮಹೇಂದ್ರ ರೆಡ್ಡಿ ನಮ್ಮ ಕಾರಿನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿನ ವೈದ್ಯರು ಪರೀಕ್ಷಿಸಿ, ಆಕೆ ಬರುವಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಬಳಿಕ ನನ್ನ ಅಳಿಯ ವೈದ್ಯನಾಗಿದ್ದರೂ ಸಹ ಮಗಳಿಗೆ ಸಿಪಿಆರ್ ಸಹ ಮಾಡಿಲ್ಲ. ಆತ ಮತ್ತು ಅವರ ಮನೆಯವರು ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿಸುವುದು ಬೇಡ, ನಾವು ಆಕೆಯ ಮೃತದೇಹವನ್ನು ನಮ್ಮ ಊರಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಒತ್ತಾಯ ಮಾಡಿದರು. ಆದರೂ ಸಹ ನನ್ನ ಹಿರಿಯ ಮಗಳು ಡಾ.ನಿಕಿತಾ ಮಾರತ್​ಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ಯುಡಿಆರ್ ದಾಖಲಿಸಲಾಗಿತ್ತು. ಅಳಿಯ ಮಹೇಂದ್ರ ರೆಡ್ಡಿ ನನ್ನ ಮಗಳಿಗೆ ಐವಿಯ ಮೂಲಕ ಅನಸ್ತೇಶಿಯಾ ಔಷಧಿ ನೀಡಿ ಕೊಲೆ ಮಾಡಿದ್ದಾನೆ. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಂದೆ ಕೆ.ಮುನಿರೆಡ್ಡಿ ದೂರಿನಲ್ಲಿ ಆಗ್ರಹಿಸಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ರೈಲಿನಡಿಗೆ ಹಾರಿ ಆತ್ಮಹತ್ಯೆ

Next Post

ಪ್ರೇಯಸಿ ಜತೆ 8 ದಿನಗಳಿಂದ ಬೆಂಗಳೂರಿನ ಲಾಡ್ಜ್​​​​ನಲ್ಲಿದ್ದ ಪುತ್ತೂರಿನ ಯುವಕ 9ನೇ ದಿನಕ್ಕೆ ಶವವಾಗಿ ಪತ್ತೆ

Related Posts

ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ
ಕ್ರೈಮ್ ನ್ಯೂಸ್

ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

April 18, 2026
56
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ್ಟಿ ಬಂಧಿಸಿದ ಕಾರ್ಕಳ ಪೊಲೀಸರು,
ಕ್ರೈಮ್ ನ್ಯೂಸ್

ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ್ಟಿ ಬಂಧಿಸಿದ ಕಾರ್ಕಳ ಪೊಲೀಸರು,

April 12, 2026
72
Next Post
ಪ್ರೇಯಸಿ ಜತೆ 8 ದಿನಗಳಿಂದ ಬೆಂಗಳೂರಿನ ಲಾಡ್ಜ್​​​​ನಲ್ಲಿದ್ದ ಪುತ್ತೂರಿನ ಯುವಕ 9ನೇ ದಿನಕ್ಕೆ ಶವವಾಗಿ ಪತ್ತೆ

ಪ್ರೇಯಸಿ ಜತೆ 8 ದಿನಗಳಿಂದ ಬೆಂಗಳೂರಿನ ಲಾಡ್ಜ್​​​​ನಲ್ಲಿದ್ದ ಪುತ್ತೂರಿನ ಯುವಕ 9ನೇ ದಿನಕ್ಕೆ ಶವವಾಗಿ ಪತ್ತೆ

Discussion about this post

Recent News

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

April 18, 2026
14
ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

April 18, 2026
56
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

April 18, 2026
ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

April 18, 2026
ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

April 16, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d