• About us
  • Contact us
  • Disclaimer
Monday, July 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅಲ್ಲಾಹ್ ಯಾವಾಗಲೂ ನಿಮಗೆ ಮಾರ್ಗದರ್ಶನ ನೀಡಿ ಸರಿಯಾದ ಮಾರ್ಗದಲ್ಲಿ ಮುನ್ನೆಡಸಲಿ, ಬಕ್ರೀದ್ ಹಬ್ಬದ ಶುಭಾಶಯಗಳು.

Coastal Times by Coastal Times
June 17, 2024
in ಕರಾವಳಿ
ಅಲ್ಲಾಹ್ ಯಾವಾಗಲೂ ನಿಮಗೆ ಮಾರ್ಗದರ್ಶನ ನೀಡಿ ಸರಿಯಾದ ಮಾರ್ಗದಲ್ಲಿ ಮುನ್ನೆಡಸಲಿ, ಬಕ್ರೀದ್ ಹಬ್ಬದ ಶುಭಾಶಯಗಳು.
26
VIEWS
WhatsappTelegramShare on FacebookShare on Twitter

ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬವನ್ನು ಈದ್-ಉಲ್-ಅಜಾ ಎಂದೂ ಕರೆಯುತ್ತಾರೆ. ರಂಜಾನ್ ಮುಗಿದ 70 ದಿನಗಳ ನಂತರ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗಾಗಿ ಈ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳ ಜು-ಅಲ್-ಹಿಜ್‌ನಲ್ಲಿ ಆಚರಿಸಲಾಗುತ್ತದೆ. ಆದರೆ ಈ ಈದ್-ಉಲ್-ಅದಾ ಆಚರಣೆಗೆ ನಿರ್ದಿಷ್ಟ ದಿನಾಂಕ ಎಂಬುದಿಲ್ಲ ಚಂದ್ರನು ಗೋಚರಿಸಿದ ನಂತರವೇ ಬಕ್ರೀದ್ ಆಚರಿಸುವ ಸಂಪ್ರದಾಯವಿದೆ. ಈ ಬಾರಿ ಬಕ್ರೀದ್ ಹಬ್ಬವನ್ನು ಜೂನ್ 17ರ ಸೋಮವಾರದಂದು ಆಚರಿಸಲಾಗುತ್ತಿದೆ.ಈ ದಿನದಂದು ಗಂಡು ಮೇಕೆಯನ್ನು ದೇವರಿಗೆ ಬಲಿ ನೀಡುವ ಆಚರಣೆಯಿದೆ. ಅಷ್ಟೇ ಅಲ್ಲದೇ, ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಕುಟುಂಬದವರೊಂದಿಗೆ ಸೇರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ಸಡಗರ ದಿನದಂದು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ವಿಶೇಷವಾಗಿ ಶುಭಾಶಯಗಳನ್ನು ತಿಳಿಸಬಹುದು.

ಬಕ್ರೀದ್ ಹಬ್ಬದ ಇತಿಹಾಸ: ಬಕ್ರೀದ್ ಆಚರಣೆಯ ಹಿಂದೆ ಹಜರತ್ ಇಬ್ರಾಹಿಂ ಅವರ ತ್ಯಾಗ ಬಲಿದಾನದ ಕಥೆಯಿದೆ. ಹಜರತ್ ಇಬ್ರಾಹಿಂ ಎನ್ನುವವರು ದೇವರ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಹೀಗಿರುವಾಗ ಒಂದೊಮ್ಮೆ ಹಜರತ್ ಇಬ್ರಾಹಿಂ ತನ್ನ ಮಗನನ್ನು ತ್ಯಾಗ ಮಾಡುತ್ತಿದ್ದಾನೆ ಎಂದು ಕನಸು ಕಾಣುತ್ತಾನೆ. ಕನಸನ್ನು ಸಂದೇಶವೆಂದು ಭಾವಿಸಿ, ತನ್ನ ಮಗನನ್ನು ಬಲಿ ಕೊಡಲು ಮುಂದಾಗುತ್ತಾನೆ. ಆದರೆ ದೇವರು ಮಗನ ಬದಲು ಪ್ರಾಣಿಯನ್ನು ಬಲಿ ಕೊಡುವ ಸಂದೇಶವನ್ನು ನೀಡುತ್ತಿದ್ದಂತೆ, ಮಗನ ಬದಲಿಗೆ ತನ್ನ ಪ್ರೀತಿಯ ಕುರಿ ಮರಿಯನ್ನು ಬಲಿ ನೀಡುತ್ತಾನೆ. ಇದನ್ನು ಬಕ್ರಾ-ಈದ್’ ಅಂದರೆ ಬಕ್ರೀದ್ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಲೇ ಈದ್-ಉಲ್-ಅಜಾ ದಿನದಂದು ಮೇಕೆಯನ್ನು ಬಲಿಕೊಡುವ ಸಂಪ್ರದಾಯವು ಪ್ರಾರಂಭವಾಯಿತು ಎನ್ನಬಹುದು.
ಬಕ್ರೀದ್ ಹಬ್ಬದ ಸಂಪ್ರದಾಯ ಹಾಗೂ ಆಚರಣೆ ಹೇಗೆ?
ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಈ ದಿನದಂದು ಮುಸ್ಲಿಂ ಬಾಂಧವರು ಬೆಳಿಗ್ಗೆ ಎದ್ದು ನಮಾಜ್ ಮಾಡಲು ಹೋಗುತ್ತಾರೆ. ಮುಸ್ಲಿಂರ ಈ ಹಬ್ಬದಂದು ತಮ್ಮ ಮನೆಗಳಲ್ಲಿ ಸಾಕಿರುವ ಅಥವಾ ಹಬ್ಬಕ್ಕೆ ಕೆಲವೇ ದಿನವಿರುವಾಗಲೇ ತಂದ ಮೇಕೆಗಳನ್ನು ಬಲಿ ಕೊಡುವ ಪದ್ಧತಿಯಿದೆ. ಮೇಕೆಯನ್ನು ಬಲಿ ಕೊಟ್ಟ ಬಳಿಕ, ಈ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಭಾಗವನ್ನು ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರಿಗೆ ನೀಡಲಾಗುತ್ತದೆ. ಎರಡನೆಯ ಭಾಗವನ್ನು ಬಡವರು ಮತ್ತು ನಿರ್ಗತಿಕರಿಗೆ ಹಾಗೂ ಮೂರನೇ ಭಾಗವನ್ನು ಕುಟುಂಬದವರು ಇಟ್ಟುಕೊಳ್ಳುತ್ತಾರೆ. ಈ ದೇವರ ಪ್ರಸಾದವನ್ನು ಅಡುಗೆ ಮಾಡಿ ಕುಟುಂಬ ಸದಸ್ಯರು ಸವಿದು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಖಾಸಗಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು

Next Post

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ 1312 ಮಕ್ಕಳಿಗೆ 1 ಕೋಟಿ ರೂ ಮೊತ್ತದ ಚೆಕ್ ವಿತರಣೆ

Related Posts

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ
ಕರಾವಳಿ

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

July 25, 2026
56
ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿಗಳ ಪ್ರತಿಭಟನೆ; ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
ಕರಾವಳಿ

ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿಗಳ ಪ್ರತಿಭಟನೆ; ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

July 25, 2026
40
Next Post
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ 1312 ಮಕ್ಕಳಿಗೆ 1 ಕೋಟಿ ರೂ ಮೊತ್ತದ ಚೆಕ್ ವಿತರಣೆ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ 1312 ಮಕ್ಕಳಿಗೆ 1 ಕೋಟಿ ರೂ ಮೊತ್ತದ ಚೆಕ್ ವಿತರಣೆ

Discussion about this post

Recent News

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

July 26, 2026
57
ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

July 25, 2026
56
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

July 26, 2026
ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

July 25, 2026
ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

July 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d