• About us
  • Contact us
  • Disclaimer
Friday, July 17, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!

Coastal Times by Coastal Times
July 17, 2026
in ಕ್ರೈಮ್ ನ್ಯೂಸ್
ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!
39
VIEWS
WhatsappTelegramShare on FacebookShare on Twitter

ಬಂಟ್ವಾಳ : ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಬಿಸಿ ರೋಡ್ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಚೇತನ್‌ನನ್ನು ಬಂಟ್ವಾಳ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಖಾಕಿ ಪಡೆಗೆ ಸಿಕ್ಕಿಬೀಳುವ ಆತಂಕದಲ್ಲಿ ಆರೋಪಿಯು ಇಲಿ ಪಾಷಾಣ (ವಿಷ) ಸೇವಿಸಿದ್ದು, ಸದ್ಯ ಆತನನ್ನು ಪೊಲೀಸ್ ಕಾವಲಿನಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಅಧಿಕೃತವಾಗಿ ತಿಳಿಸಿದ್ದಾರೆ.

ಜುಲೈ 16ರ ಗುರುವಾರ ಸಂಜೆ ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಯುವತಿ ಲಾವಣ್ಯ (21) ಮೇಲೆ ಕತ್ತಿಯಿಂದ ಬರ್ಬರವಾಗಿ ಚೇತನ್ ದಾಳಿ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ಘಟನೆ ನಡೆದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಹಂತಕನ ಪತ್ತೆಗಾಗಿ ವಿಶೇಷ ತನಿಖಾ ಪಡೆಗಳನ್ನು ರಚಿಸಿದ್ದರು.

ಏಕಪಕ್ಷೀಯ ಪ್ರೇಮದ ಹಿನ್ನೆಲೆ – ಹೊಂಚು ಹಾಕಿ ಹತ್ಯೆ: ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹತರಾದ ಯುವತಿ ಹಾಗೂ ಆರೋಪಿ ಚೇತನ್ ಇಬ್ಬರೂ ದೂರದ ಸಂಬಂಧಿಗಳಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಚೇತನ್ ಮೃತ ಯುವತಿಯನ್ನು ಏಕಪಕ್ಷೀಯವಾಗಿ (ಒನ್ ಸೈಡ್) ಪ್ರೀತಿಸುತ್ತಿದ್ದು, ಆಕೆ ಈತನ ಪ್ರೇಮ ನಿವೇದನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಳು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಈತ, ಸಾರ್ವಜನಿಕ ನಿಲ್ದಾಣದಲ್ಲೇ ಹೊಂಚು ಹಾಕಿ ಮನಬಂದಂತೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!: ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಚೇತನ್‌ನನ್ನು ಬಂಧಿಸಲು ಪೊಲೀಸರ ವಿಶೇಷ ತಂಡಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಜಾಲ ಬೀಸಿದ್ದವು. ಪೊಲೀಸರು ತನ್ನನ್ನು ಹಿಡಿಯುವುದು ಖಚಿತ ಎಂದು ಅರಿತ ಆರೋಪಿಯು, ಬಂಧನದಿಂದ ತಪ್ಪಿಸಿಕೊಳ್ಳಲು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

“ಬಿಸಿ ರೋಡ್ ಘಟನೆಯ ಆರೋಪಿಯನ್ನು ನಮ್ಮ ತಂಡಗಳು ಯಶಸ್ವಿಯಾಗಿ ಪತ್ತೆಹಚ್ಚಿವೆ. ಆದರೆ, ಆರೋಪಿಯು ಇಲಿ ಪಾಷಾಣ (ವಿಷ) ತೆಗೆದುಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಆತನನ್ನು ಹೆಚ್ಚಿನ ವೈದ್ಯಕೀಯ ತಪಾಸಣೆ ಹಾಗೂ ತುರ್ತು ಚಿಕಿತ್ಸೆಗಾಗಿ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. ಪ್ರಕರಣದ ಮುಂದಿನ ಹೆಚ್ಚಿನ ವಿವರಗಳನ್ನು ತನಿಖೆಯ ಬಳಿಕ ನೀಡಲಾಗುವುದು,” ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣದ ಅಡಿ ತನಿಖೆ ಮುಂದುವರಿದಿದ್ದು, ಆಸ್ಪತ್ರೆಯಲ್ಲಿ ಚೇತನ್ ಚೇತರಿಸಿಕೊಂಡ ಬಳಿಕ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

Related Posts

ಸುರತ್ಕಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ
ಕ್ರೈಮ್ ನ್ಯೂಸ್

ಸುರತ್ಕಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

July 15, 2026
60
ಉಳ್ಳಾಲ : ಬುರ್ಖಾ ಧರಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಯ ಬಂಧನ
ಕ್ರೈಮ್ ನ್ಯೂಸ್

ಉಳ್ಳಾಲ : ಬುರ್ಖಾ ಧರಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಯ ಬಂಧನ

July 14, 2026
59

Discussion about this post

Recent News

ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!

ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!

July 17, 2026
39
ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

July 17, 2026
12
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!

ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!

July 17, 2026
ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

July 17, 2026
FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಎರಡು ಮ್ಯಾಜಿಕ್‌ ಗೋಲು : ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಎರಡು ಮ್ಯಾಜಿಕ್‌ ಗೋಲು : ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

July 16, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d