• About us
  • Contact us
  • Disclaimer
Thursday, September 24, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬೆಳ್ತಂಗಡಿ: ಪತ್ನಿಗೆ ಉಗ್ರ ಸಂಘಟನೆಯ ಲಿಂಕ್ ಎಂದ ಪತಿ ಮೇಲೆ ಕೇಸ್

Coastal Times by Coastal Times
September 17, 2021
in ಕ್ರೈಮ್ ನ್ಯೂಸ್
ಬೆಳ್ತಂಗಡಿ: ಪತ್ನಿಗೆ ಉಗ್ರ ಸಂಘಟನೆಯ ಲಿಂಕ್ ಎಂದ ಪತಿ ಮೇಲೆ ಕೇಸ್
132
VIEWS
WhatsappTelegramShare on FacebookShare on Twitter

ಬೆಳ್ತಂಗಡಿ: ಪತ್ನಿಗೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ನಾಯಿಕಟ್ಟೆ ನಿವಾಸಿ ಚಿದಾನಂದ ಕೆ.ಆರ್. ವಿರುದ್ಧವೇ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. – ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತಿಯ ವಿರುದ್ದ ಪತ್ನಿ ರಾಜೀರಾಘವನ್ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಚಿದಾನಂದ ಅವರಿಗೆ ಪ್ರಸಕ್ತ ಜಾಮೀನು ಲಭಿಸಿದೆ. – ನನ್ನ ವಿರುದ್ದ ಪತ್ನಿ ಸುಳ್ಳು ಕೇಸು ದಾಖಲಿಸಿದ್ದಾಳೆ ಎಂದು ಚಿದಾನಂದ ಆರೋಪಿಸಿದ್ದಾರೆ. ವಿದೇಶದಿಂದ ಬಂದ ಬಳಿಕ ವಾಪಸ್ ಹೋಗುವುದು ಬೇಡ ಎಂದು ಹೇಳಿದ್ದಕ್ಕೆ ನನ್ನನ್ನು ಗದರಿಸಿದ್ದು, ವಿವಾಹ ವಿಚ್ಛೇದನ ಕೇಳಿದ್ದಳು. ಒಪ್ಪದಿದ್ದಾಗ ಪುತ್ರಿ ಮತ್ತು ನನಗೆ ಮಾನಸಿಕ ಕಿರುಕುಳ ನೀಡಿದ್ದಳು. ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕವಿರುವ ಕೇರಳದ ವ್ಯಕ್ತಿಯೋರ್ವ ನನಗೆ ಬೆದರಿಕೆ ಕರೆ ಮಾಡಿದ್ದ. ಬಳಿಕ ಆ.26ರಂದು ರಾತ್ರಿ ಮೂರು ಮೊಬೈಲ್, 95 ಸಾವಿರ ರೂ. ನಗದು ಹಾಗೂ ತಾಯಿಯ ಚಿನ್ನಾಭರಣ ಕೊಂಡು ಹೋಗಿದ್ದಾಳೆ ಎಂದು ಚಿದಾನಂದ ತಿಳಿಸಿದ್ದಾರೆ.

ಉಗ್ರ ಸಂಪರ್ಕ ಸುಳಿವು ಪತ್ತೆಯಾಗಿಲ್ಲ:
ಚಿದಾನಂದ ಅವರು ಪತ್ನಿ ವಿರುದ್ಧ ಪೊಲೀಸ್ ಅಧೀಕ್ಷಕರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಉಗ್ರ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ, ಆರೋಪಕ್ಕೆ ಪುಷ್ಟಿ ನೀಡುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದೂರಿನಲ್ಲಿ ಹೇಳಿದಂತೆ ಆಕೆ ಪಾಕಿಸ್ತಾನದ ಶಾಲಾ ವಾಹನದಲ್ಲಿ ಕೆಲಸ ಮಾಡುತ್ತಿರಲಿಲ್ಲ. ದುಬೈಯ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪಾಸ್‌ಪೋರ್ಟ್‌ ತಪಾಸಣೆ ಮಾಡಿದಾಗ ದುಬೈ ಬಿಟ್ಟು ಬೇರೆ ಎಲ್ಲಿಗೂ ಪ್ರಯಾಣ ಮಾಡಿಲ್ಲ. ಉಗ್ರ ಸಂಪರ್ಕ ಆರೋಪಕ್ಕೆ ಸಂಬಂಧಿಸಿ ಯಾವುದೇ ಸುಳಿವು ಪತ್ತೆಯಾಗಿಲ್ಲ. ಪತಿ-ಪತ್ನಿಯ ನಡುವಿನ ವೈಮನಸ್ಸಿನಿಂದ ದೂರು ನೀಡಲಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಕ್ಕನ ಮನೆಯಲ್ಲಿ ವಾಸ :
ಪತ್ನಿ ರಾಜೀರಾಘವನ್ ಆ.26ರಂದು ನಾಪತ್ತೆ ಯಾಗಿದ್ದು, ಪತ್ತೆ ಮಾಡಿಕೊಡುವಂತೆ ಧರ್ಮಸ್ಥಳ ಠಾಣೆಗೆ ಚಿದಾನಂದ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಪತ್ತೆ ಮಾಡಿ ಠಾಣೆಗೆ ಕರೆ ತಂದಿದ್ದು, ಈ ಸಂದರ್ಭ ಆಕೆ ಪತಿಯ ಮನೆಗೆ ಹೋಗಲು ಮನಸ್ಸಿಲ್ಲವೆಂದು ಆಕೆಯ ಅಕ್ಕನೊಂದಿಗೆ ಹೋಗಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ” ನಾವು ಕಲಾವಿದರು ಸ್ವಾಭಿಮಾನಿಗಳು ” ಕಲಾ ಚಟುವಟಿಕೆಗಳನ್ನು ನಡೆಸಲು ಅವಕಾಶ ಮಾಡಿಕೊಡಿ

Next Post

ಮಧ್ಯಪ್ರದೇಶ: ಜೀಬ್ರಾ ಕ್ರಾಸಿಂಗ್‌ನಲ್ಲಿ ಡ್ಯಾನ್ಸ್ ಮಾಡಿದ ಯುವತಿ ವಿರುದ್ಧ ಕೇಸ್ ದಾಖಲು

Related Posts

ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ
ಕ್ರೈಮ್ ನ್ಯೂಸ್

ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ

September 24, 2026
2
ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!
ಕ್ರೈಮ್ ನ್ಯೂಸ್

ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!

September 22, 2026
125
Next Post
ಮಧ್ಯಪ್ರದೇಶ: ಜೀಬ್ರಾ ಕ್ರಾಸಿಂಗ್‌ನಲ್ಲಿ ಡ್ಯಾನ್ಸ್ ಮಾಡಿದ ಯುವತಿ ವಿರುದ್ಧ ಕೇಸ್ ದಾಖಲು

ಮಧ್ಯಪ್ರದೇಶ: ಜೀಬ್ರಾ ಕ್ರಾಸಿಂಗ್‌ನಲ್ಲಿ ಡ್ಯಾನ್ಸ್ ಮಾಡಿದ ಯುವತಿ ವಿರುದ್ಧ ಕೇಸ್ ದಾಖಲು

Discussion about this post

Recent News

ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ

ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ

September 24, 2026
2
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

September 23, 2026
43
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ

ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ

September 24, 2026
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

September 23, 2026
ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!

ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!

September 22, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d