ಮಂಗಳೂರು, ಸೆ.16: ಅಳಿಕೆ ಗ್ರಾಮದ ಎರುಂಬು ಮೆಣಸಿನಗಂಡಿಯಲ್ಲಿ ರಸ್ತೆ ಎಂಬಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ಮೂವರನ್ನು ವಿಟ್ಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ವಿಟ್ಲಕಸಬಾ ಗ್ರಾಮದ ಮಂಗಳಪದವು ನಿವಾಸಿ ಸನತ್ ಕುಮಾರ್ (23), ಪೊನ್ನೊಟ್ಟು ನಿವಾಸಿ ಮಹಮ್ಮದ್ ರಾಝಿಕ್ (23), ಮಂಗಳಪದವು ನಿವಾಸಿ ಚೇತನ್ (23) ಬಂಧಿತರು. ಆರೋಪಿಗಳಿಂದ 6.27 ಗ್ರಾಂ ತೂಕದ ಗಾಂಜಾ, 3 ಮೊಬೈಲ್, ಒಂದು ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾದ ಎರ್ಮೆಮಜಲು ನಿವಾಸಿ ಧ್ಯಾನ್ ಕರ್ಕೆರ (23) ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೆ.15ರಂದು ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ರಾಮಕೃಷ್ಣ ಪೊಲೀಸರೊಂದಿಗೆ ಗಸ್ತಿನಲ್ಲಿದ್ದ ಸಂದರ್ಭ ಬಂದ ಖಚಿತ ಮಾಹಿತಿಯಂತೆ, ಸ್ಥಳಕ್ಕೆ ದಾಳಿ ಮಾಡಿದಾಗ 3 ಮಂದಿ ಸಂಶಯಾಸ್ಪದವಾಗಿ ನಿಂತಿರುವುದು ಕಂಡು ಬಂದಿದೆ. ತಪಾಸಣೆ ನಡೆಸಿದಾಗ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮೋಟಾರ್ ಸೈಕಲಿನಲ್ಲಿ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡು ಬಂದಿದೆ. ಇದನ್ನು ಗ್ರಾಹಕರಿಗೆ ಅಕ್ರಮವಾಗಿ ಮಾರಾಟ ಮಾಡಲು ತಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post