ಕೊಚ್ಚಿ: ಕೇರಳದ ಜನಪ್ರಿಯ ಮಾಲ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬುರ್ಖಾ ಧರಿಸಿದ್ದ ಯುವಕನೊಬ್ಬ ಮಹಿಳಾ ಶೌಚಾಲಯಕ್ಕೆ ನುಗ್ಗಿ ವಿಡಿಯೋ ಮಾಡಿದ್ದಾನೆ. ಈ ಘಟನೆ ಕೊಚ್ಚಿಯ ಪ್ರಸಿದ್ಧ ಮಾಲ್‌ನಲ್ಲಿ ಬುಧವಾರ ನಡೆದಿದೆ. 23 ವರ್ಷದ ಬಿಟೆಕ್ ಪದವೀಧರ ಕೊಚ್ಚಿಯ ಪ್ರಸಿದ್ಧ ಲುಲು ಮಾಲ್‌ಗೆ ಭೇಟಿ ನೀಡಿದ್ದಾನೆ. ಅಲ್ಲಿ ಬುರ್ಖಾ ಧರಿಸಿ ಮಾಲ್‌ನಲ್ಲಿರುವ ಮಹಿಳೆಯರ ವಾಶ್‌ರೂಮ್‌ಗೆ ನುಗ್ಗಿ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಮೊಬೈಲ್ ಬಚ್ಚಿಟ್ಟು ವಿಡಿಯೋ ರೆಕಾರ್ಡ್ : ವಾಶ್ ರೂಂನಲ್ಲಿ ಸಣ್ಣ ರಟ್ಟಿನ ಪೆಟ್ಟಿಗೆಯಲ್ಲಿ ಮೊಬೈಲ್ ಇಟ್ಟಿದ್ದ ಆರೋಪಿ, ಸಣ್ಣ ರಂದ್ರ ಕೊರೆದು ವಿಡಿಯೋ ರೆಕಾರ್ಡ್ ಆನ್ ಮಾಡಿದ್ದ. ಬಳಿಕ ಹೊರಗೆ ಬಂದು ವಾಶ್ ರೂಂನ ಮುಖ್ಯ ಬಾಗಿಲಿನ ಮುಂದೆ ನಿಂತಿದ್ದ, ಇದರಿಂದ ಆತನ ವರ್ತನೆಯಲ್ಲಿ ಅನುಮಾನ ಮೂಡಿದ್ದು, ಮಾಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯಿಂದ ಬುರ್ಖಾ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕ ಇನ್ಫೋಪಾರ್ಕ್‌ನ ಪ್ರಮುಖ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಆರೋಪಿ ವಿರುದ್ಧ ವಿರುದ್ಧ ಐಪಿಎಸ್ ಸೆಕ್ಷನ್ 354 (ಸಿ), 419 ಮತ್ತು 66 ಇ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಲಮಸೇರಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು ಆರೋಪಿ ಈ ಹಿಂದೆ ಎಲ್ಲಿಯಾದರೂ ಇಂತಹ ಕೃತ್ಯ ಎಸಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post