ಮಂಗಳೂರು: ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ಇದರ ಆಶ್ರಯದಲ್ಲಿ “ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ ಸೆಪ್ಟೆಂಬರ್ 21 ರಂದು ಭಾನುವಾರ ಬೆಳಿಗ್ಗೆ 8.30 ಕ್ಕೆ ಕುದ್ಮಲ್ ರಂಗರಾವ್ ಪುರಭವನ ಮಂಗಳೂರಿನಲ್ಲಿ ನಡೆಯಲಿದೆ ಎಂದು ಲಯನ್ ರಾಜೇಶ್ ಶೆಟ್ಟಿ ಶಬರಿ ತಿಳಿಸಿದರು. ಅವರು ನಗರದ ಲಯನ್ ಅಶೋಕದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಮಾರು 25 ತಂಡಗಳು ಭಾಗವಹಿಸಲಿದ್ದು, ಸೆಟ್ಟಿಂಗ್ ಸೇರಿ ಒಂದು ತಂಡಕ್ಕೆ 20 ನಿಮಿಷಗಳ ಕಾಲಾವಧಿ ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ನಗದು ಸಹಿತ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಪ್ರಧಾನ ಅತಿಥಿಗಳಾಗಿ ಖ್ಯಾತ ಹಿನ್ನಲೆ ಗಾಯಕಿ ಬಿ.ಕೆ. ಸುಮಿತ್ರ ಭಾಗವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಡಿ ವೇದವ್ಯಾಸ ಕಾಮತ್ ಭಾಗವಹಿಸಲಿದ್ದು, ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಯ ಪ್ರಧಾನ ಸಂಯೋಜಕರಾದ ಕೆ ರಾಜೇಶ್ ಶೆಟ್ಟಿ ಶಬರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಲಯನ್ಸ್ ಜಿಲ್ಲೆ 317 ಡಿ ನಿಕಟಪೂರ್ವ ಜಿಲ್ಲಾ ಗವರ್ನರ್ ಬಿ ಎಂ ಭಾರತಿ, ಲಯನ್ಸ್ ಜಿಲ್ಲೆ 317 ಡಿ ಪ್ರಥಮ ಉಪ ಜಿಲ್ಲಾ ಗವರ್ನರ್ ಎಚ್ ಎಂ ತಾರಾನಾಥ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಕೆ ಗೋವರ್ಧನ್ ಶೆಟ್ಟಿ ಶುಭಾಶಂಸನೆಗೈಯಲಿದ್ದಾರೆ ಎಂದರು. ಸಮಾರಂಭದಲ್ಲಿ ಎಚ್ ಆರ್ ಚಂದ್ರೇಗೌಡ, ಎಂ ಬಾಲಕೃಷ್ಣ ಹೆಗ್ಡೆ, ನ್ಯಾನ್ಸಿ ಮಸ್ಕರೇನಸ್, ಜ್ಯೋತಿ ಎಸ್ ಶೆಟ್ಟಿ, ಎ ಎನ್ ಸುದರ್ಶನ್ ಪಡಿಯಾರ್, ಮೋಹನ ಕೊಪ್ಪಲ, ಕಿಶೋರ್ ಡಿ ಶೆಟ್ಟಿ, ಶ್ರೀನಿಧಿ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಅಧಿಕಾರಿ, ಹರೀಶ್ ಉಜ್ಜೋಡು, ಜ್ಯೋತಿ ಎಸ್ ಶೆಟ್ಟಿ, ಗೋವರ್ದನ್ ಶೆಟ್ಟಿ ಮತ್ತು ಎ ಎನ್ ಸುದರ್ಶನ್ ಪಡಿಯಾರ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post