• About us
  • Contact us
  • Disclaimer
Friday, September 11, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಮಾದಕ ವ್ಯಸನ ಮತ್ತು ಸಾಮಾಜಿಕ ಸಾಮರಸ್ಯದ ಜಾಗೃತಿ ಕಾರ್ಯಕ್ರಮ

Coastal Times by Coastal Times
September 18, 2025
in ಕರಾವಳಿ
ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಮಾದಕ ವ್ಯಸನ ಮತ್ತು ಸಾಮಾಜಿಕ ಸಾಮರಸ್ಯದ ಜಾಗೃತಿ ಕಾರ್ಯಕ್ರಮ
30
VIEWS
WhatsappTelegramShare on FacebookShare on Twitter

ರೋಟರಿ ಶಿಕ್ಷಣ ಸಂಸ್ಥೆಗಳು ಮೂಡುಬಿದಿರೆ ಮತ್ತು ಫೋರಂ ಫಾರ್ ಜಸ್ಟೀಸ್ ಮಂಗಳೂರು , ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ವ್ಯಸನ ಮತ್ತು ಸಾಮಾಜಿಕ ಸಾಮರಸ್ಯದ ಜಾಗೃತಿ ಕಾರ್ಯಕ್ರಮ ರೋಟರಿ ಆಂಗ್ಲಮಾಧ್ಯಮ ಶಾಲೆಯ ಸಮ್ಮಿಲನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ನಾರಾಯಣ ಪಿ. ಎಂ. ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮೂಡುಬಿದಿರೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್. ಎಸ್ ವಿರೂಪಾಕ್ಷಪ್ಪ ಇವರು ಆರೋಗ್ಯವಂತ ಸಮಾಜ ಕಟ್ಟುವುದು ಶಿಕ್ಷಕರ ಮುಖ್ಯ ಗುರಿಯಾಗಬೇಕು. ಮಗುವು ದೈಹಿಕವಾಗಿ,
ಮಾನಸಿಕವಾಗಿ, ಭೌತಿಕವಾಗಿ ಸಮಾಜಮುಖಿ ವ್ಯಕ್ತಿತ್ವ ಬೆಳೆಸುವಲ್ಲಿ ಎಲ್ಲರ ಜವಾಬ್ದಾರಿಯನ್ನು ಒತ್ತಿ ಹೇಳಿ , ಶಿಕ್ಷಣದಿಂದ ಇದು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಅನಂತಕೃಷ್ಣ ರಾವ್ ಇವರು ಅಜ್ಞಾನವೆಂಬ ಅಂಧಕಾರದಿಂದ ಮತ್ತು ಸಂಸ್ಕಾರಯುತ ಜೀವನ ಪದ್ಧತಿ ಇಲ್ಲದಿರುವುದೇ ಮಾದಕ ವ್ಯಸನಕ್ಕೆ ಮುಖ್ಯ ಕಾರಣ. ಇದನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಿಲ್ಲಾ ಸ್ಕೌಟ್ & ಗೈಡ್ಸ್ ಕಮಿಷನರ್ ಆಗಿದ್ದ ಎನ್.ಜಿ. ಮೋಹನ್ ಇವರು ಮಾದಕ ವ್ಯಸನಗಳ ಜಾಗೃತಿಯ ಬಗೆಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ಮಕ್ಕಳಲ್ಲಿ ಕಂಡುಬರುತ್ತಿರುವ ಮಾದಕ ದ್ರವ್ಯ ವ್ಯಸನಗಳ ಚಟವನ್ನು ಹೋಗಲಾಡಿಸಲು ಶಿಕ್ಷಕರು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.

ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ್ ಕುಮಾರ್ ಕದ್ರಿ, ನಿವೃತ್ತ ಜನರಲ್ ಮ್ಯಾನೇಜರ್ MRPL. ಇವರು ಮಾದಕ ವ್ಯಸನ ಮುಕ್ತ ಸಮಾಜವನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯ‌ ಬಗ್ಗೆ ಅರಿವು ಮೂಡಿಸಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ, ನ್ಯಾಯವಾದಿಗಳಾದ ದಯಾನಾಥ್ ಕೋಟ್ಯಾನ್ ಎಲ್ಲಾ ಧರ್ಮಗಳ ಸಾರ ವಾಗಿರುವ ಸಾಮಾಜಿಕ ಸಾಮರಸ್ಯದ ಬಗ್ಗೆ ವಿವರವಾಗಿ ಮಾತನಾಡಿ , ಮಾಧ್ಯಮಗಳ ವೈಭವಿಕರಣ , ನೆರೆಕರೆಯವರೊಂದಿಗಿನ ಸಂಬಂಧ , ಭ್ರಾತೃತ್ವ ಭಾವನೆ ಮೊದಲಾದ ವಿಷಯಗಳ ಬಗ್ಗೆ ಮಾತನಾಡಿ , ಪರಸ್ಪರ ಭ್ರಾತೃತ್ವದ ಭಾವನೆ ಬೆಳೆಸಿಕೊಂಡು ಬದುಕಬೇಕೆಂದು ಕಿವಿ ಮಾತನ್ನು ಹೇಳಿದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾತೀಯತೆ ಎಂಬ ವಿಷಬೀಜವು ಮೊಳಕೆಯೊಡಯದಂತೆ ಮತ್ತು ಸೌಹಾರ್ದಯುತವಾಗಿ ‘ ವಸುದೈವ ಕುಟುಂಬಕಂ – ಜಗತ್ತು ಒಂದು ಕುಟುಂಬ” ಎಂಬಂತೆ ಸಹಬಾಳ್ವೆಯನ್ನು ನಡೆಸುವ ಗುಣವನ್ನು ಬೆಳೆಸಬೇಕು ಎಂದು ತಿಳಿಸಿದರು.

ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಹಾಗೂ ಫೋರಂ ಫಾರ್ ಜಸ್ಟೀಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಜೈನ್, ಇವರು ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಜೆ. ಡಬ್ಲ್ಯೂ. ಪಿಂಟೋ ,ರೋಟರಿ ಆಂಗ್ಲ ಮಾಧ್ಯಮಶಾಲೆಯ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ್ ಜೈನ್, ರೋಟರಿ ಸಿ.ಬಿ. ಎಸ್.ಇ ವಿಭಾಗದ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಮರಾಠೆ, ರೋಟರಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ರವಿ ಕುಮಾರ್ ಮತ್ತು ಆಡಳಿತಾಧಿಕಾರಿ ಪ್ರಫುಲ್ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ, ವಿವಿಧ ವಿದ್ಯಾ ಸಂಸ್ಥೆಗಳ ಶಿಕ್ಷಕರೂ ಸೇರಿ ಸುಮಾರು 50 ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ಶಿಕ್ಷಕಿಯರಾದ ಪ್ರೀತಿಕಾ ಹಾಗೂ ವಿನಯಾ ಇವರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಂಯೋಜಕ ಗಜಾನನ ಮರಾಠೆ ವಂದನಾರ್ಪಣೆಗೈದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರಿನ ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ ಮಾಲಕ ಪ್ರಭಾಕರ ಪೂಂಜಾ ನಿಧನ

Next Post

ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ- ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ

Related Posts

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ
ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

September 10, 2026
10
ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ
ಕರಾವಳಿ

ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ

September 10, 2026
22
Next Post
ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ- ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ

ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ- ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ

Discussion about this post

Recent News

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

September 10, 2026
10
ಮುಂಬೈ ಸರಣಿ ಬಾಂಬ್​ ಸ್ಫೋಟದ ಅಪರಾಧಿ ಅಬು ಸಲೇಮ್ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

ಮುಂಬೈ ಸರಣಿ ಬಾಂಬ್​ ಸ್ಫೋಟದ ಅಪರಾಧಿ ಅಬು ಸಲೇಮ್ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

September 10, 2026
28
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

September 10, 2026
ಮುಂಬೈ ಸರಣಿ ಬಾಂಬ್​ ಸ್ಫೋಟದ ಅಪರಾಧಿ ಅಬು ಸಲೇಮ್ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

ಮುಂಬೈ ಸರಣಿ ಬಾಂಬ್​ ಸ್ಫೋಟದ ಅಪರಾಧಿ ಅಬು ಸಲೇಮ್ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

September 10, 2026
ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ-75 ರ ನೆಲ್ಯಾಡಿ ಸಂತ ಜಾರ್ಜ್ ಹಾಗೂ ಬೆಥನಿ ವಿದ್ಯಾಸಂಸ್ಥೆಗಳ ಬಳಿ- ಯು-ಟರ್ನ್ ನೀಡಲು ಆಗ್ರಹಿಸಿ ನೆಲ್ಯಾಡಿಯಲ್ಲಿ ಪ್ರತಿಭಟನೆ

September 10, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d