• About us
  • Contact us
  • Disclaimer
Friday, August 14, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಎರಡು ಮ್ಯಾಜಿಕ್‌ ಗೋಲು : ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

Coastal Times by Coastal Times
July 16, 2026
in ಕ್ರೀಡಾ ಸುದ್ದಿ
FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಎರಡು ಮ್ಯಾಜಿಕ್‌ ಗೋಲು : ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ
35
VIEWS
WhatsappTelegramShare on FacebookShare on Twitter

ಅಟ್ಲಾಂಟಾ, ಜು.16: ಲಿಯೋನೆಲ್ ಮೆಸ್ಸಿ ಅವರ ನಾಯಕತ್ವದ ಆಟ ಹಾಗೂ ಅಂತಿಮ ಕ್ಷಣಗಳಲ್ಲಿ ದಾಖಲಾದ ಎರಡು ಮ್ಯಾಜಿಕ್‌ ಗೋಲುಗಳ ನೆರವಿನಿಂದ ಅರ್ಜೆಂಟೀನಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 2–1 ಗೋಲುಗಳಿಂದ ರೋಚಕ ಗೆಲುವು ಸಾಧಿಸಿ ಫೈನಲ್‌ ಗೆ ಪ್ರವೇಶಿಸಿತು. ಪ್ರಶಸ್ತಿ ಸುತ್ತಿನಲ್ಲಿ ಅದು ಸ್ಪೇನ್ ತಂಡವನ್ನು ಎದುರಿಸಲಿದೆ.

21 ವರ್ಷಗಳ ಬಳಿಕ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. 1998ರ ಬಳಿಕ ವಿಶ್ವಕಪ್ ನಾಕೌಟ್ ಹಂತದಲ್ಲಿ ನಡೆದ ಮೊದಲ ಪಂದ್ಯ ಇದಾಗಿತ್ತು. 1982ರ ಫಾಕ್‌ಲ್ಯಾಂಡ್ಸ್ (ಮಾಲ್ವಿನಾಸ್) ಯುದ್ಧದ ಹಿನ್ನೆಲೆಯಲ್ಲಿ ಹಾಗೂ ಎರಡೂ ರಾಷ್ಟ್ರಗಳ ನಡುವಿನ ಐತಿಹಾಸಿಕ ಪೈಪೋಟಿಯಿಂದ ಪಂದ್ಯಕ್ಕೆ ವಿಶೇಷ ಮಹತ್ವ ಲಭಿಸಿತ್ತು.

ಮೊದಲ ಅರ್ಧದ ಪಂದ್ಯದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಈ ಹಂತದಲ್ಲಿ ಉಭಯ ತಂಡಗಳ ಜಿದ್ದಾಜಿದ್ದಿನ ಕಾಳಗ ಕಂಡು ಬಂದಿತು. ಆರಂಭದಲ್ಲಿ ಮೆಸ್ಸಿ ಅಷ್ಟು ಆಕ್ಟಿವ್ ಆಗಿ ಕಾಣಿಸಿಕೊಳ್ಳಲಿಲ್ಲ. ಮೆಸ್ಸಿ ಅವರನ್ನು ಕೇಂದ್ರೀಕರಿಸಿಯೇ ಇಂಗ್ಲೆಂಡ್‌ ಯೋಜನೆಯನ್ನು ರೂಪಿಸಿಕೊಂಡಿತ್ತು. ಇಂಗ್ಲೆಂಡ್‌ ತಂಡ ಅಮೋಘ ಆಟವನ್ನು ಪ್ರದರ್ಶಿಸಿತು. ಈ ಹಂತದಲ್ಲಿ ಅರ್ಜೆಂಟೀನಾ ಸುಮಾರು 226 ಪಾಸ್‌ಗಳನ್ನು ನೀಡಿ ಗಮನ ಸೆಳೆದರೆ, ಇಂಗ್ಲೆಂಡ್‌ 191 ಪಾಸ್‌ಗಳನ್ನು ನೀಡಿತು.

ಮೊದಲ ಅರ್ಧದಲ್ಲಿ ಉಭಯ ತಂಡಗಳು ಹಲವು ಬಾರಿ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ತಳ್ಳುವ ಪ್ರಯತ್ನವನ್ನು ಮಾಡಿತು. ಇಂಗ್ಲೆಂಡ್‌ ಒಮ್ಮೆ ಗೋಲು ಬಾರಿಸಲು ಪ್ರಯತ್ನಿಸಿದರೆ, ಅರ್ಜೆಂಟೀನಾ ಎರಡು ಬಾರಿ ಗೋಲು ಪೆಟ್ಟಿಗೆಯ ಹತ್ತಿರ ಚೆಂಡನ್ನು ಒಯ್ದರು ಸಹ ಫಲ ನೀಡಲಿಲ್ಲ.

ಎರಡನೇ ಅವಧಿಯ ಆಟದಲ್ಲಿ ಇಂಗ್ಲೇಂಡ್ ತಂಡ ಆರಂಭದಲ್ಲೇ ಅರ್ಜೆಂಟೀನಾ ತಂಡದ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸಿತು. ಈ ಹಂತದಲ್ಲಿ ಆಂಥೋನಿ ಗಾರ್ಡನ್ ಅವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದರು. ಪರಿಣಾಮ ಇಂಗ್ಲೆಂಡ್‌ ಪಂದ್ಯದಲ್ಲಿ 55ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ಪರಿಣಾಮ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿತು.

ಇಂಗ್ಲೆಂಡ್‌ ಮೊದಲ ಗೋಲು ಬಾರಿಸಿದ ಬಳಿಕ ಅರ್ಜೆಂಟೀನಾ ಕೆಚ್ಚೆದೆಯ ಆಟವನ್ನು ಆಡಿ ಗಮನ ಸೆಳೆಯಿತು. ಈ ಅವಧಿಯಲ್ಲಿ ಅರ್ಜೆಂಟೀನಾ ಬ್ಯಾಕ್‌ ಟು ಬ್ಯಾಕ್‌ ಅಟ್ಯಾಕ್‌ ಮಾಡಿ ಗೋಲು ಬಾರಿಸಲು ತಂತ್ರವನ್ನು ಹೆಣೆದುಕೊಂಡಿತು. ಚಿಕ್ಕ ಚಿಕ್ಕ ಪಾಸ್‌ಗಳ ಮೂಲಕ ಪದೇ ಪದೇ ಗೋಲ್‌ ಪೋಸ್ಟ್‌ ಟಾರ್ಗೆಟ್‌ ಮಾಡಿತು. ಆದರೆ ಇಂಗ್ಲೆಂಡ್ ತಂಡ ಗೋಲ್‌ ಕೀಪರ್ ಅಮೋಘ ಪ್ರದರ್ಶನ ನೀಡಿ ಗೋಲು ನೀಡಿದಂತೆ ತಡೆಯುವಲ್ಲಿ ಸಫಲವಾದರು. ಆದರೆ ಕೊನೆಯ ಕ್ಷಣದಲ್ಲಿ ಗೋಲು ತಡೆಯುವಲ್ಲಿ ವಿಫಲರಾದರು.

ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಮ್ಯಾಜಿಕ್‌: ಆದರೆ ಪಂದ್ಯ ಅಂತ್ಯದ ಕ್ಷಣಗಳಲ್ಲಿ ಅರ್ಜೆಂಟೀನಾ ಅದ್ಭುತ ಪುನರಾಗಮನ ನಡೆಸಿತು. 87ನೇ ನಿಮಿಷದಲ್ಲಿ ಎಂಜೊ ಫೆರ್ನಾಂಡಿಸ್ ಬಲಿಷ್ಠ ಹೊಡೆತದ ಮೂಲಕ ಸಮಬಲದ ಗೋಲು ದಾಖಲಿಸಿದರು. ನಂತರ ಹೆಚ್ಚುವರಿ ಸಮಯದಲ್ಲಿ ಮೆಸ್ಸಿ ನೀಡಿದ ನಿಖರ ಪಾಸ್ ಅನ್ನು ಲೌಟಾರೊ ಮಾರ್ಟಿನೆಜ್ ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಾಕ್ಕೆ 2–1ರ ಮುನ್ನಡೆ ಹಾಗೂ ಫೈನಲ್ ಪ್ರವೇಶ ಖಚಿತಪಡಿಸಿದರು. ಈ ಗೆಲುವಿನೊಂದಿಗೆ ಅರ್ಜೆಂಟೀನಾ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಪ್ರಶಸ್ತಿಗಾಗಿ ಸ್ಪೇನ್ ತಂಡವನ್ನು ಎದುರಿಸಲಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

Next Post

ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

Related Posts

ಕಾಮನ್‌ವೆಲ್ತ್ ಕ್ರೀಡಾಕೂಟ: 57 ಕೆಜಿ ಹಾಗೂ 54 ಕೆಜಿ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆದ್ದ ಪ್ರೀತಿ, ಜೈಸ್ಮಿನ್​!
ಕ್ರೀಡಾ ಸುದ್ದಿ

ಕಾಮನ್‌ವೆಲ್ತ್ ಕ್ರೀಡಾಕೂಟ: 57 ಕೆಜಿ ಹಾಗೂ 54 ಕೆಜಿ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆದ್ದ ಪ್ರೀತಿ, ಜೈಸ್ಮಿನ್​!

August 1, 2026
21
FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ
ಕ್ರೀಡಾ ಸುದ್ದಿ

FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

July 20, 2026
41
Next Post
ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

Discussion about this post

Recent News

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

August 13, 2026
14
ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
37
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

August 13, 2026
ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

August 12, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d