ನವದೆಹಲಿ: ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ 2001ರ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇಂದ್ರೀಯ ತನಿಖಾ ದಳ(CBI) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹತಾ ಅವರ ದ್ವಿಸದಸ್ಯ ಪೀಠ, ರಾಜನ್ ಒಟ್ಟು ಏಳು ಪ್ರಕರಣಗಳಲ್ಲಿ ದೋಷಿಯಾಗಿದ್ದು, 27 ವರ್ಷ ತಲೆಮರೆಸಿಕೊಂಡಿದ್ದ ಎಂಬುದನ್ನು ಉಲ್ಲೇಖಿಸಿದೆ.
“ಇಂತಹ ವ್ಯಕ್ತಿಗೆ ಶಿಕ್ಷೆಯನ್ನು ಏಕೆ ಸ್ಥಗಿತಗೊಳಿಸಲಾಯಿತು?” ಎಂದು ಕೋರ್ಟ್ ಪ್ರಶ್ನಿಸಿತು. ರಾಜನ್‌ರ ವಕೀಲರು “ಸಾಕ್ಷ್ಯವಿಲ್ಲ” ಎಂದು ವಾದಿಸಿದಾಗ, ಪೀಠ ಅದನ್ನು ತಿರಸ್ಕರಿಸಿತು. 71 ಪ್ರಕರಣಗಳಲ್ಲಿ 47ರಲ್ಲಿ CBIಗೆ ಸಾಕ್ಷ್ಯ ಸಿಗದಿರಲು ಕಾರಣ, ಸಾಕ್ಷಿಗಳು ಮುಂದೆ ಬರದಿರುವುದು ಎಂದು ಕೋರ್ಟ್ ಸ್ಪಷ್ಟಪಡಿಸಿತು. ರಾಜನ್ ಈಗಾಗಲೇ ಇತರ ಪ್ರಕರಣದಲ್ಲಿ ಜೈಲು ಶಿಕ್ಷೆಯಲ್ಲಿರುವ ಕಾರಣ, ಜಾಮೀನು ರದ್ದಾಯಿತು.
ಮುಂಬೈನ ಗಾಮದೇವಿಯ ಗೋಲ್ಡನ್ ಕ್ರೌನ್ ಹೋಟೆಲ್‌ನ ಮಾಲೀಕ ಜಯ ಶೆಟ್ಟಿಯನ್ನು ಮೇ 4, 2001ರಂದು ಛೋಟಾ ರಾಜನ್ ಗ್ಯಾಂಗ್‌ನ ಇಬ್ಬರು ಸದಸ್ಯರು ಗುಂಡಿಟ್ಟು ಕೊಂದಿದ್ದರು. ರಾಜನ್ ಗ್ಯಾಂಗ್‌ನ ಹೇಮಂತ್ ಪೂಜಾರಿಯಿಂದ ಶೆಟ್ಟಿಗೆ ವಸೂಲಿ ಕರೆ ಬಂದಿತ್ತು. ಹಣ ನೀಡದಿದ್ದಕ್ಕೆ ಈ ಕೊಲೆ ನಡೆದಿತ್ತು. ಕಳೆದ ವರ್ಷ ವಿಶೇಷ ನ್ಯಾಯಾಲಯವು ರಾಜನ್‌ಗೆ ಆಜೀವ ಕಾರಾಗೃಹ ಶಿಕ್ಷೆ ಮತ್ತು ₹16 ಲಕ್ಷ ದಂಡ ವಿಧಿಸಿತ್ತು.
ರಾಜೇಂದ್ರ ಸದಾಶಿವ್ ನಿಕಾಲ್ಜೆ ಎಂಬ ಛೋಟಾ ರಾಜನ್, ಒಮ್ಮೆ ದಾವೂದ್ ಇಬ್ರಾಹಿಂನ ಆಪ್ತನಾಗಿದ್ದ. 27 ವರ್ಷ ತಲೆಮರೆಸಿಕೊಂಡಿದ್ದ ಆತನನ್ನು 2015ರ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಬಂಧಿಸಿ ಭಾರತಕ್ಕೆ ಗಡಿಪಾರು ಮಾಡಲಾಯಿತು.ಈ ತೀರ್ಪು ಭೂಗತ ಜಗತ್ತಿನ ವಿರುದ್ಧ ಕಾನೂನಿನ ಕಠಿಣತೆಯನ್ನು ತೋರಿಸಿದೆ. ಜಯ ಶೆಟ್ಟಿಯ ಕುಟುಂಬಕ್ಕೆ ನ್ಯಾಯ ಸಿಗುವ ನಿರೀಕ್ಷೆಯನ್ನ ಈ ಆದೇಶ ಬಲಪಡಿಸಿದೆ.
ಈ ಹಿಂದೆ ಜೀವಾವಧಿ ಶಿಕ್ಷೆ ರದ್ದು ಮಾಡಬೇಕು ಮತ್ತು ಮಧ್ಯಂತರ ಜಾಮೀನು ನೀಡುವಂತೆ ಕೋರಿ ರಾಜನ್ ಹೈ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆ ಭೂಗತ ಪಾತಕಿ ಛೋಟಾ ರಾಜನ್‌ಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಅಮಾನತು ಮಾಡಿ, ಜಾಮೀನು ನೀಡಿದೆ. 2001 ರಲ್ಲಿ ಹೋಟೆಲ್ ಉದ್ಯಮಿ ಜಯ ಶೆಟ್ಟಿ ಕೊಲೆ ಪ್ರಕರಣ ವಿಚಾರಣೆ ನಡೆಸಿದ ದ್ವಿ ಸದಸ್ಯ ಪೀಠ ಒಂದು ಲಕ್ಷ ಬಾಂಡ್ನೊಂದಿಗೆ ಜಾಮೀನು ನೀಡಿತ್ತು. ಸೆಂಟ್ರಲ್ ಮುಂಬೈನಲ್ಲಿನ ಗಮ್ದೆವಿಯಲ್ಲಿನ ಗೋಲ್ಡನ್ ಕ್ರೌನ್ ಹೋಟೆಲ್ ಮಾಲೀಕ ಜಯ ಶೆಟ್ಟಿಯನ್ನು ರಾಜನ್ ಗ್ಯಾಂಗ್ 2001ರ ಮೇ 4ರಂದು ಹೋಟೆಲ್‌ನ ಮೊದಲ ಮಹಡಿಯಲ್ಲಿ ಗುಂಡಿಕ್ಕಿ ಕೊಂದಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post