ಮಂಗಳೂರು, ಅ.17: ನಗರದ ಫಳ್ನೀರ್ ನಲ್ಲಿ ಎಂಎಫ್ ಸಿ ಆಹಾರ ಮಳಿಗೆಯ ಮೇಲೆ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದು, 24 ಗಂಟೆಯಲ್ಲಿ ಟ್ರೇಡ್ ಲೈಸನ್ಸ್ ಇನ್ನಿತರ ದಾಖಲೆಗಳನ್ನು ಹಾಜರುಪಡಿಸದೇ ಇದ್ದರೆ ಕೇಂದ್ರಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಂಎಫ್ ಸಿ ಮಳಿಗೆಯಿರುವ ಕಟ್ಟಡದ ಮಾಲಕರ ದೂರಿನಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಒಳಗೆ ಬರುತ್ತಿದ್ದಂತೆ ಮಳಿಗೆಯ ಮಾಲಕರು ತಡೆದು ತೀವ್ರ ಜಟಾಪಟಿ ನಡೆಸಿದ್ದಾರೆ. ನಾವು ತಪಾಸಣೆ ನಡೆಸುವುದಕ್ಕೆ ಆಗಮಿಸಿದ್ದು ಎಂದು ಅಧಿಕಾರಿಗಳು ಹೇಳಿದರೆ, ಹೊಟೇಲ್ ಮಾಲಕರು ಒಳಗೆ ಬಂದು ತಪಾಸಣೆ ನಡೆಸುವುದಕ್ಕೆ ಬಿಡಲ್ಲ ಎಂದು ತಡೆದಿದ್ದಾರೆ. ನಾವು ಎಲ್ಲ ಲೈಸನ್ಸ್ ಇದ್ದುಕೊಂಡೇ ವ್ಯವಹಾರ ನಡೆಸುತ್ತಿದ್ದೇವೆ. ಹೊಟೇಲ್ ಒಳಗಡೆ ಉತ್ತಮ ಸೌಲಭ್ಯವನ್ನೂ ಹೊಂದಿದ್ದೇವೆ ಎಂದು ಮಾಲಕ ಸಿದ್ದಿಕ್ ಹೇಳಿದ್ದು ಅಧಿಕಾರಿ ಸಿಬಂದಿಯನ್ನು ತರಾಟೆಗೆತ್ತಿಕೊಂಡಿದ್ದಾರೆ.
ಕಟ್ಟಡ ಮಾಲೀಕರಿಂದ ಬಂದ ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಳಿಗೆಗೆ ಬೀಗ ಹಾಕಲು ಬಯಸಿದ್ದರು. ಆದರೆ ಸ್ಥಳದಲ್ಲಿದ್ದ ಅಧಿಕಾರಿಗಳು, ಮಳಿಗೆ ಮಾಲೀಕರು ಮತ್ತು ವಕೀಲರ ನಡುವೆ ತೀವ್ರ ವಾಗ್ವಾದದ ನಂತರ, ಆರೋಗ್ಯ ಅಧಿಕಾರಿಗಳು ನೈರ್ಮಲ್ಯ ಪರಿಸ್ಥಿತಿಗಳನ್ನು ಪರಿಶೀಲಿಸಲು ಬಂದಿದ್ದೇವೆ ಎಂದು ಹೇಳಿದರು ಮತ್ತು ಸ್ಥಳ ಪರಿಶೀಲನೆಗೆ ಅವಕಾಶ ನೀಡದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದರು.
ನಮ್ಮ ಆಹಾರ ಮಳಿಗೆ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನಾವು ಟ್ರೇಡ್ ಲೈಸನ್ಸ್ ಗಾಗಿ ಸಲ್ಲಿಸಿರುವ ಅರ್ಜಿಯನ್ನು ಇಲಾಖೆಯಿಂದ ನಿರಾಕರಿಸಿಯೂ ಇಲ್ಲ. 2017ರಿಂದ ಇದೇ ಜಾಗದಲ್ಲಿ ನಾವು ಬಿಸಿನೆಸ್ ಹೊಂದಿದ್ದೇವೆ. ಈಗ ಅಧಿಕಾರಿಗಳು ಕೆಲವು ಬಾಡಿಗೆ ಗೂಂಡಾಗಳನ್ನು ಜೊತೆಗೆ ಕರೆದುಕೊಂಡು ಬಂದಿದ್ದಾರೆ. ಯಾರಿಂದಲೋ ಲಂಚ ಪಡೆದು ದಾಳಿಗೆ ಬಂದಿದ್ದಾರೆ ಎಂದು ಎನ್.ಎಂ.ಎ ಸಿದ್ದಿಕ್ ಆರೋಪ ಮಾಡಿದ್ದಾರೆ. ಕೊನೆಗೆ, 24 ಗಂಟೆಯ ಗಡುವು ಕೊಡುತ್ತೇವೆ, ಸೂಕ್ತ ಟ್ರೇಡ್ ಲೈಸನ್ಸ್ ಇನ್ನಿತರ ದಾಖಲೆ ಪತ್ರಗಳನ್ನು ಇಲಾಖೆಗೆ ಹಾಜರುಪಡಿಸಬೇಕು ಎಂದು ಹೇಳಿ ಅಧಿಕಾರಿಗಳು ಹೊರ ನಡೆದಿದ್ದಾರೆ.
ಅಧಿಕಾರಿಗಳು ವೆಲ್ಡರ್‌ಗಳನ್ನು ಮತ್ತು ಗೂಂಡಾಗಳನ್ನು ಕರೆದು ಕೊಂಡು ಬಂದಿದ್ದಾರೆ ಎಂದು ಮಳಿಗೆ ಮಾಲೀಕ ಎನ್‌ಎಂಎ ಸಿದ್ದಿಕ್ ಆರೋಪಿಸಿದರು. ”ನಮ್ಮ ಅಂಗಡಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ನಾವು ಇಲಾಖೆಗೆ ಸಲ್ಲಿಸಿರುವ ಟ್ರೇಡ್ ಲೈಸೆನ್ಸ್ ಅರ್ಜಿಯನ್ನು ತಿರಸ್ಕರಿಸಲಿಲ್ಲ. 2017ರಿಂದ ಇಲ್ಲಿ ವ್ಯಾಪಾರ ನಡೆಸುತ್ತಿದ್ದು, ಲಂಚ ಪಡೆದು ಅಧಿಕಾರಿಗಳು ದಾಳಿ ನಡೆಸಿದ್ದಾರೆ’ ಎಂದು ಹೇಳಿದರು. ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಸಲಹೆ ಪಡೆಯಬೇಕು ಎಂದರು.
Discussion about this post