ನವದೆಹಲಿ,ನ 17 : ಸಹ ಪ್ರಯಾಣಿಕನ ಪ್ರಾಣ ರಕ್ಷಿಸಿದ ಕೇಂದ್ರ ಸಚಿವ… ಹೃದಯಾಘಾತಕ್ಕೆ ಒಳಗಾದ ಸಹ ಪ್ರಯಾಣಿಕನಿಗೆ ತುರ್ತು ಚಿಕಿತ್ಸೆ ನೀಡಿ ಪ್ರಾಣ ರಕ್ಷಣೆ ಮಾಡಿದ್ದಾರೆ ಕೇಂದ್ರ ಸಚಿವ ಡಾ.ಭಾಗವತ್ ಕೃಷ್ಣ ರಾವ್ ಕರದ್. ಇದು ನಡೆದದ್ದು ಬಸ್ ನಲ್ಲಿಯೋ ಅಥವಾ ರೈಲಿನಲ್ಲಿ ನಡೆದದ್ದಲ್ಲ. ಆಕಾಶದಲ್ಲಿ ಅಂದರೆ ವಿಮಾನ ಪ್ರಯಾಣದಲ್ಲಿ.
ಎಂದಿನಂತೆ ಎಲ್ಲಾ ಪ್ರಯಾಣಿಕರು 6E171 ಇಂಡಿಗೋ ವಿಮಾನವನ್ನು ಏರಿದರು ಪ್ರಯಾಣಿಕರು. ಆ ವಿಮಾನ ಯಾನದಲ್ಲಿ ಕೇಂದ್ರ ಸಚಿವ ಭಾಗವತ್ ಕೃಷ್ಣ ಕೂಡ ಇದ್ದರು. ವಿಮಾನವು ಮೇಲೆರುತ್ತಿದ್ದಂತೆ ಪ್ರಯಾಣಿಕರೊಬ್ಬರಿಗೆ ಇದರ ನೋವು ಕಾಣಿಸಿಕೊಂಡಿತ್ತು.
ತಕ್ಷಣವೇ ಗಗನಸಖಿಯರು ಈ ವಿಮಾನದಲ್ಲಿ ಯಾರಾದರು ವೈದ್ಯರಿದ್ದೀರಾ? ಪ್ರಯಾಣಿಕರೊಬ್ಬರಿಗೆ ಎದೆನೋವು ಕಾಣಿಸಿದೆ. ತಕ್ಷಣವೇ ಚಿಕಿತ್ಸೆ ಬೇಕಾಗಿದೆ ಎನ್ನುವ ಸಂದೇಶವನ್ನು ಮೈಕ್ ಮೂಲಕ ಅನೌನ್ಸ್ ಮಾಡಿದರು.
ತಕ್ಷಣ ಯಾವುದೇ ಯೋಚನೆ ಮಾಡದೆ ಸಚಿವರು ನಾನು ವೈದ್ಯ, ಚಿಕಿತ್ಸೆ ನೀಡಲು ನಾನು ಸಿದ್ದ ಎಂದು ಹೇಳಿ ಎದೆನೋವು ಕಾಣಿಸಿಕೊಂಡ ವ್ಯಕ್ತಿಯ ಬಳಿ ಬಂದು ವಿಮಾನದಲ್ಲಿ ಸಿಕ್ಕಂತಹಾ ಸಲಕರಣೆಗಳನ್ನು ಬಳಸಿ ಎದೆನೋವಿನ ಲಕ್ಷಣಗಳನ್ನು ಸೂಕ್ಷ್ಮವಾಗಿ ಅರಿತು ಅದು ಹೃದಯಾಘಾತವೇ ಆಗಿದೆ ಎಂದು ಪ್ರಥಮ ಚಿಕಿತ್ಸೆಯನ್ನು ನೀಡಲು ಪ್ರಾರಂಭಿಸಿದರು.
ಆ ಗೋಲ್ಡನ್ ಅವರ್ ಎನ್ನುವ ಸಮಯದಲ್ಲಿ ತಕ್ಷಣ ಚಿಕಿತ್ಸೆ ಸಿಕ್ಕಿ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ನಿಲ್ದಾಣವು ತಲುಪಿದ ತಕ್ಷಣ ನೇರವಾಗಿ ಆ ಹೃದಯಾಘಾತದಿಂದ ಬಳಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡಲಾಯಿತು. ಒಂದು ರಾತ್ರಿಯ ಬಳಿಕ ಅಲ್ಲಿಂದ ಗುಣಮುಖರಾಗಿ ಬಿಡುಗಡೆ ಮಾಡಲಾಯಿತು.
ಸಹಸ್ರಬುದ್ಧೆ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಸಚಿವ ಭಾಗವತ್, ‘ವಿನಯ್ ಅವರೇ ಧನ್ಯವಾದಗಳು. ನಾನು ಒಬ್ಬ ವೈದ್ಯನಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಸಹ-ಪ್ರಯಾಣಿಕನಿಗೆ ನಾನು ಸಹಾಯ ಮಾಡಿದ್ದಕ್ಕೆ ಸಂತೋಷವಾಗಿದೆ,’ಎಂದು ಹೇಳಿದ್ದಾರೆ.
‘ತಮ್ಮ ಕಾರ್ಯಕ್ಕಾಗಿ ಸಚಿವ ಭಾಗವತ್ ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಸಹ ಪ್ರಯಾಣಿಕನಿಗೆ ನೆರವಾದ ನಿಮ್ಮ ಈ ನಡೆಯು ಸ್ಫೂರ್ತಿದಾಯಕ,’ ಎಂದು ವಿಮಾನಯಾನ ಸಂಸ್ಥೆ ಧನ್ಯವಾದ ಅರ್ಪಿಸಿದೆ.
ಈ ವಿಷಯ ತಿಳಿದ ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ತನ್ನ ಸಂಪುಟ ಸಹೋದ್ಯೋಗಿ ಸಚಿವ ಡಾ ಭಾಗವತ್ ಕೃಷ್ಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ಕಾರ್ಯವು ನೆಟ್ಟಿಗರ ಪ್ರಶಂಸೆಗೆ ಕಾರಣವಾಗಿದೆ.
Hon. MoS Finance @DrBhagwatKarad, a doctor by profession helped a fellow passenger in a @IndiGo6E flight who complained of giddiness and is a hypotension patient. MoS immediately rushed and helped him out. The co-passenger appreciated the Minister's gesture. pic.twitter.com/goSxsbQjsL
— Amit Chavan (@AmitChavan85) November 16, 2021