ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಂಯುಕ್ತ ಆಶ್ರಯದಲ್ಲಿ ವಿವಿಧ ಸಹಕಾರಿ ಯೂನಿಯನ್ ಗಳ ಸಹಯೋಗದೊಂದಿಗೆ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಕಾರ್ಯಕ್ರಮ ಇಂದು ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.
ಸಹಾಕಾರಿ ಆಂದೋಲನ ಕೇವಲ ಕೆಲವೇ ವ್ಯಕ್ತಿಗಳ ಕಪಿಮುಷ್ಟಿಯಲ್ಲಿ ಇರಬಾರದು ಎಲ್ಲಾ ವರ್ಗದ ಜನರು ಪಕ್ಷಾತೀತವಾಗಿ, ಜಾತಿ, ಧರ್ಮ ಮೀರಿದ ಜನರ ಆಂದೋಲನವಾಗಬೇಕು ಎನ್ನುವುದು ನಮ್ಮ ಗುರಿಯಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಯಾಗಬೇಕಾದರೆ ಹಳ್ಳಿ ಗಾಡಿನ ಜನರ ಆರ್ಥಿಕ ಶಕ್ತಿ ಬಲಗೊಳ್ಳಬೇಕಾಗಿದೆ. ಆಗ ಜಿಡಿಪಿ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಬೇಸಾಯ ಮಾಡುವ ಕುಟುಂಬಗಳಿಗೆ, ಸ್ವ ಸಹಾಯ ಸಂಘಗಳಿಗೆ ಸಹಕಾರ ಕ್ಷೇತ್ರದ ಮೂಲಕ ಸಾಲ ಸಹಾಯ ದೊರೆಯ ಬೇಕಾಗಿದೆ.ರೈತರ ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿಕೊಡಲು ಸಹಕಾರ ಕ್ಷೇತ್ರ ಬಲ ನೀಡಬೇಕಾಗಿದೆ ಎಂದು ರಾಜಣ್ಣ ವಿವರಿಸಿದರು.
ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು ಟಿ ಖಾದರ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಯಾವುದೇ ಜವಾಬ್ದಾರಿಯನ್ನು ವಹಿಸಿದಾಗ ಅದನ್ನು ಇಲ್ಲಿನವರು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಗ್ರಾಮೀಣ ಮಟ್ಟದಲ್ಲಿ ಹತ್ತು ಜನ ಸಹಕಾರಿಗಳು ಸೇರಿ ಜನರಿಗೆ ಬೇಕಾದ ಕಾರ್ಯಕ್ರಮ ಹಮ್ಮಿಕೊಂಡರೆ ಸಹಕಾರಿ ಕ್ಷೇತ್ರ ಬೆಳೆಯಲು ಸಾಧ್ಯವಿದೆ. ವಾಣಿಜ್ಯ ಬ್ಯಾಂಕುಗಳು ಜನರ ಕಿಸೆ ನೋಡಿ ಸಾಲ ಕೊಡುತ್ತವೆ. ಜನರ ಮುಖ ನೋಡಿ ಸಾಲ ಕೊಡುವ ಬ್ಯಾಂಕುಗಳಿದ್ದರೆ ಅವು ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಮಾತ್ರ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಭಾರತದಲ್ಲಿ ಸಹಕಾರಿ ಚಳವಳಿ ಆರಂಭವಾಗಿ 100 ವರ್ಷ ದಾಟಿದ್ದು, ದೇಶದ ಆರ್ಥಿಕ ಚಟುವಟಿಕೆಗೆ ಮಹತ್ವದ ಕೊಡುಗೆ ನೀಡಿದೆ. ಇಂದು ಜಗತ್ತಿನಲ್ಲಿ ಭಾರತವು ಆರ್ಥಿಕತೆಯಲ್ಲಿ 5 ರಿಂದ 3 ನೇ ಸ್ಥಾನಕ್ಕೆ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಸಹಕಾರಿ ರಂಗ. ದಕ್ಷಿಣ ಕನ್ನಡದಲ್ಲಿ ಮೊಳಹಳ್ಳಿ ಶಿವರಾವ್ ಅವರಿಂದ ಆರಂಭವಾದ ಸಹಕಾರಿ ಚಳವಳಿ ಪ್ರಸ್ತುತ ಎಂ ಎನ್ ರಾಜೇಂದ್ರ ಕುಮಾರ್ ಅವರ ಅವಧಿಯಲ್ಲಿ ಉಚ್ಛ್ರಾಯ ಸ್ಥಿತಿಗೇರಿದೆ. ಸಹಕಾರಿ ರಂಗವು ರೈತರನ್ನು ಸಬಲೀಕರಣ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಸಹಕಾರಿ ಚಳವಳಿ ಎಂದರು.
ಕೆಎಂಎಫ್ ವತಿಯಿಂದ ನಂದಿನಿಯ ನೂತನ ಉತ್ಪನ್ನಗಳನ್ನು ಮತ್ತು ಕರಾವಳಿ ಸಹಕಾರಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷರಾದ ಡಾ ಎಂ.ಎನ್.ರಾಜೇಂದ್ರ ಕುಮಾರ್ ರವರು ಮಾತನಾಡುತ್ತಾ, “ದೇಶದ ರೈತರ ಕಟ್ಟ ಕಡೆಯ ರೈತರ ಅಭಿವೃದ್ಧಿ ಗೆ ಕೇಂದ್ರ ರಾಜ್ಯ ಸರಕಾರಗಳು ಸಹಕಾರಿ ರಂಗಕ್ಕೆ ನೆರವು ನೀಡುತ್ತಿರುವುದಕ್ಕೆ ತಾನು ಕೃತಜ್ಞತೆ ಸಲ್ಲಿಸುತ್ತೇನೆ.ನವೋದಯ ಸ್ವ ಸಹಾಯ ಸಂಘಗಳ ಮೂಲಕ ಸ್ವಾವಲಂಬಿ ಗಳಾಗಿ ತಮ್ಮ ಬದುಕು ಕಟ್ಟಿ ಕೊಳ್ಳಲು ಸಹಾಯ ಆಗಿದೆ ಎಂದು ಸಹಕಾರಿ ರಂಗ ವನ್ನು ನೆನಪಿಸಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ವೇದವ್ಯಾಸ ಕಾಮತ್, ಯಶ್ಫಾಲ್ ಸುವರ್ಣ,ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಯಮಿ ರೋಹನ್ ಮೊಂತೆರೊ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷರಾದ ಕೆ. ಪಿ. ಸುಚರಿತ ಶೆಟ್ಟಿ ಅವರು ಗೌರವ ಅತಿಥಿ ಗಳಾಗಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ , ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು,ಶಶಿಕುಮಾರ್ ರೈ ಬಾಲ್ಯೋಟ್ಟು , ಭಾಸ್ಕರ್ ಎಸ್. ಕೋಟ್ಯಾನ್ , ಬಿ.ನಿರಂಜನ್ , ಟಿ.ಜಿ. ರಾಜಾರಾಮ ಭಟ್ , ಎಂ.ವಾದಿರಾಜ ಶೆಟ್ಟಿ , ರಾಜು ಪೂಜಾರಿ, ಎಂ.ಮಹೇಶ್ ಹೆಗ್ಡೆ , ಎಸ್.ಬಿ. ಜಯರಾಮ್ ರೈ, ಮೋನಪ್ಪ ಶೆಟ್ಟಿ , ಹರಿಶ್ಚಂದ್ರ , ಕೆ.ಜೈರಾಜ್ ಬಿ ರೈ , ರಾಜೇಶ್ ರಾವ್ ,ಸದಾಶಿವ ಉಳ್ಳಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ಮಹಾಪ್ರಬಂಧಕ ರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿಯೂನಿಯನ್ ಅಧ್ಯಕ್ಷರುಗಳಾದ ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post