• About us
  • Contact us
  • Disclaimer
Wednesday, March 4, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

9 ತಿಂಗಳ ಬಳಿಕ ಸುರಕ್ಷಿತವಾಗಿ ಬಾಹ್ಯಾಕಾಶದಿಂದ ಧರೆಗಿಳಿದ ಗಗನತಾರೆ ಸುನೀತಾ ವಿಲಿಯಮ್ಸ್

Coastal Times by Coastal Times
March 19, 2025
in ರಾಷ್ಟ್ರೀಯ ಸುದ್ದಿ
9 ತಿಂಗಳ ಬಳಿಕ ಸುರಕ್ಷಿತವಾಗಿ ಬಾಹ್ಯಾಕಾಶದಿಂದ ಧರೆಗಿಳಿದ ಗಗನತಾರೆ ಸುನೀತಾ ವಿಲಿಯಮ್ಸ್
76
VIEWS
WhatsappTelegramShare on FacebookShare on Twitter

ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಒಂಬತ್ತು ತಿಂಗಳ ನಂತರ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗಿಳಿದರು. ಇಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿತ್ತು. ಕೆಲವೇ ದಿನಗಳ ಈ ಕಾರ್ಯಾಚರಣೆ ಒಂಬತ್ತು ತಿಂಗಳಿಗೆ ವಿಸ್ತರಣೆಗೊಂಡಿತ್ತು.

ಹಾಗಾಗಿ, 59 ವರ್ಷದ ಸುನೀತಾ ವಿಲಿಯಮ್ಸ್ ಮತ್ತು 62 ವರ್ಷದ ಬುಚ್ ವಿಲ್ಮೋರ್ ಭೂಮಿಗೆ ಮರಳುವುದನ್ನು ಕಾಯಲಾಗುತ್ತಿತ್ತು. ಈ ಕಾಯುವಿಕೆ ಇದೀಗ ಇಬ್ಬರೂ ಸುರಕ್ಷಿತವಾಗಿ ಮರಳುವುದರೊಂದಿಗೆ ಕೊನೆಗೊಂಡಿದೆ.

ಜೂನ್ 2024ರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅವರೊಂದಿಗೆ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಕೂಡಾ ಮರಳಿದ್ದಾರೆ. ಐಎಸ್‌ಎಸ್‌ ಕ್ರೂ-9 ಸದಸ್ಯರನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆ ಫ್ಲೋರಿಡಾದ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಿತು.

ಕ್ರೂ-9 ಮಾರ್ಚ್ 18, 2025ರಂದು ಬೆಳಗ್ಗೆ 10:35ಕ್ಕೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ಮುಚ್ಚಿ ಅನ್‌ಡಾಕ್ ಮಾಡುವ ಮೂಲಕ ಭೂಮಿಯ ಕಡೆಗೆ ಪ್ರಯಾಣ ಪ್ರಾರಂಭಿಸಿತು. ಅದಾದ ನಂತರ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಇದರಿಂದಾಗಿ ನೌಕೆ ಭೂಮಿಯ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ, ಗೊತ್ತುಪಡಿಸಿದ ಸ್ಥಳದಲ್ಲಿಳಿಯಲು ಸಾಧ್ಯವಾಯಿತು.

ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿಗಳ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈಗ ಅವರು ಹ್ಯೂಸ್ಟನ್‌ನಲ್ಲಿರುವ ನಾಸಾದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಳ ಪ್ರಧಾನ ಕಚೇರಿಯಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಾರೆ.

ನಾಸಾ ಮತ್ತು ಸ್ಪೇಸ್‌ಎಕ್ಸ್ ಅಧಿಕಾರಿಗಳು ಜಂಟಿಯಾಗಿ ವಿಶೇಷ ಮಾಧ್ಯಮಗೋಷ್ಠಿ ಆಯೋಜಿಸಿದ್ದಾರೆ. ಈ ಮಾಧ್ಯಮಗೋಷ್ಠಿ ನಾಸಾದ ಉಚಿತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ NASA+ (ಹಿಂದೆ NASA TV ಎಂದು ಕರೆಯಲಾಗುತ್ತಿತ್ತು)ನಲ್ಲಿ ನೇರಪ್ರಸಾರವಿದೆ. ಆಸಕ್ತರು ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ನಾಸಾದ ಅಧಿಕೃತ ವೆಬ್‌ಸೈಟ್‌ನಲ್ಲಿ (plus.nasa.gov) ನೋಡಬಹುದು.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದರು. ಕೇವಲ ಒಂದು ವಾರದ ಮಟ್ಟಿಗೆ ಅಲ್ಲಿಗೆ ಪ್ರಯಾಣಿಸಿದ್ದರು. ಆದರೆ ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನೀತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು.

ಸುನೀತಾ ತಮ್ಮ ವೃತ್ತಿಜೀವನದಲ್ಲಿ 9 ವಿಭಿನ್ನ ಬಾಹ್ಯಾಕಾಶ ನಡಿಗೆ (Space Walk) ಒಳಗೊಂಡಂತೆ 62 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಅನುಭವಿ ಗಗನಯಾತ್ರಿಯಾಗಿದ್ದ ಸುನೀತಾ ಅವರನ್ನು ಐಎಸ್‌ಎಸ್‌ನಲ್ಲಿ ಮೂರು ತಿಂಗಳು ಕಳೆದ ನಂತರ ನಿಲ್ದಾಣದ ಕಮಾಂಡರ್ ಆಗಿ ನೇಮಿಸಲಾಯಿತು. ಮತ್ತು ಈ ತಿಂಗಳ ಆರಂಭದವರೆಗೂ ಅವರು ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ದೇಶದಲ್ಲಿ ಕೈಗೆ ಸಿಗದಂತೆ ಚಿನ್ನದ ದರ ಏರಿಕೆ ಕಾಣುತ್ತಿದೆ: ಇದೇ ಮೊದಲ ಬಾರಿಗೆ 90 ಸಾವಿರದ ಗಡಿದಾಟಿದ ಚಿನ್ನ

Next Post

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಅವೈಜ್ಞಾನಿಕ ಕಾಮಗಾರಿಗೆ ವಿರೋಧಿಸಿ ಮಾರ್ಚ್ 20 ರಂದು ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ: ಎಂ.ಕೆ. ಪೌಲೋಸ್

Related Posts

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ
ರಾಷ್ಟ್ರೀಯ ಸುದ್ದಿ

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

March 1, 2026
10
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ
ಕ್ರೈಮ್ ನ್ಯೂಸ್

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
51
Next Post
ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಅವೈಜ್ಞಾನಿಕ ಕಾಮಗಾರಿಗೆ ವಿರೋಧಿಸಿ ಮಾರ್ಚ್ 20 ರಂದು ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ: ಎಂ.ಕೆ. ಪೌಲೋಸ್

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಅವೈಜ್ಞಾನಿಕ ಕಾಮಗಾರಿಗೆ ವಿರೋಧಿಸಿ ಮಾರ್ಚ್ 20 ರಂದು ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ: ಎಂ.ಕೆ. ಪೌಲೋಸ್

Discussion about this post

Recent News

ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್)ನಲ್ಲಿ ಪ್ರಥಮ ರ‍್ಯಾಂಕ್

ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್)ನಲ್ಲಿ ಪ್ರಥಮ ರ‍್ಯಾಂಕ್

March 4, 2026
15
ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
100
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್)ನಲ್ಲಿ ಪ್ರಥಮ ರ‍್ಯಾಂಕ್

ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್)ನಲ್ಲಿ ಪ್ರಥಮ ರ‍್ಯಾಂಕ್

March 4, 2026
ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

March 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d