ಕೊಲ್ಲಂ : ಕೇರಳದಲ್ಲಿ ಮಹಿಳೆಯ ನಿಗೂಢ ಕೊಲೆಗೆ ಸಂಬಂಧಿಸಿದಂತೆ ಗೂಗಲ್ ಸರ್ಚ್ ಹಿಸ್ಟರಿಯಿಂದ ಕೊಲೆಗಾರ ಯಾರೆಂಬುದು ಗೊತ್ತಾಗಿದೆ. ಕೇರಳದ ಕೊಲ್ಲಂ ಕೋರ್ಟ್ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 33 ವರ್ಷದ ಸಂಗೀತ ಶಿಕ್ಷಕ ಪ್ರಶಾಂತ್ ನಂಬಿಯಾರ್ ತನ್ನ ಸ್ನೇಹಿತೆ ಸುಚಿತ್ರಾ ಪಿಳ್ಳೈ(42)ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಮಾರ್ಚ್ 20, 2020ರಂದು ಪಾಲಕ್ಕಾಡ್ ವ್ಯಕ್ತಿಯೊಬ್ಬರು ತಮ್ಮ ಹೆಂಡತಿಯನ್ನು ಕೊಲ್ಲುವುದು ಹೇಗೆ ಎಂದು ಗೂಗಲ್ನಲ್ಲಿ ಸರ್ಚ್ ಮಾಡಿದ್ದರು, ಅಷ್ಟೇ ಅಲ್ಲದೆ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಕೂಡ ಸರ್ಚ್ ಮಾಡಿ, ಹಲವು ಅಂತಹ ಸಿನಿಮಾಗಳನ್ನು ವೀಕ್ಷಿಸಿದ್ದರು. ಮಹಿಳೆಯನ್ನು ಕೊಲೆ ಮಾಡಿದ ಬಳಿಕ ತುಂಡು ತುಂಡಾಗಿ ಕತ್ತರಿಸಿ ಮನೆಯ ಹಿಂಭಾಗ ಗುಂಡಿ ತೋಟಿ ಅದರಲ್ಲಿ ಹೂತು ಹಾಕಿದ್ದರು.
ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ -1 ಸೋಮವಾರ ಅದೇ ಜಿಲ್ಲೆಯ ನಡುವಿಲಕ್ಕರ ಗ್ರಾಮದ ಸುಚಿತ್ರಾ ಕೊಲೆ ಪ್ರಕರಣದಲ್ಲಿ ಪ್ರಶಾಂತ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಶಾಂತ್‌ಗೆ 14 ವರ್ಷಗಳ ಜೈಲು ಶಿಕ್ಷೆ ಮತ್ತು 2.5 ಲಕ್ಷ ರೂ. ದಂಡ ವಿಧಿಸಿದೆ. ಇಬ್ಬರ ನಡುವೆ 2019ರಿಂದ ಸಂಬಂಧವಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಕೊಲೆಯ ಹಿಂದಿರುವ ಕಾರಣ : ಸುಚಿತ್ರಾ ಪಿಳ್ಳೆ ಮೂಲತಃ ಕೊಲ್ಲಂ ನಿವಾಸಿಯಾಗಿದ್ದಳು. ಗಂಡನಿಂದ ಬೇರ್ಪಟ್ಟು ಒಬ್ಬಂಟಿಯಾಗಿ ಪಾಲಕ್ಕಾಡಿನ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಳು. ವೃತ್ತಿಯಲ್ಲಿ ಬ್ಯೂಟಿಶಿಯನ್ ಕಲಿಯುವ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಜೊತೆಗೆ, ತಾನೇ ಬ್ಯೂಟಿಶಿಯನ್ ಆಗಿಯೂ ಕೆಲಸ ಮಾಡುತ್ತಿದ್ದಳು. ಆರೋಪಿ ಪ್ರಶಾಂತ್ ನಂಬ್ಯಾರ್ ಗೆ ತನ್ನ ಪತ್ನಿಯ ಮೂಲಕ ಸುಚಿತ್ರಾ ಪರಿಚಯ ಆಗಿತ್ತು. 2019ರ ಆರಂಭದಲ್ಲಿ ತನ್ನ ಮಗುವಿನ ನಾಮಕರಣ ಸಮಾರಂಭಕ್ಕೆ ಬಂದಿದ್ದ ಸುಚಿತ್ರಾ ಪಿಳ್ಳೆ ಸಂಪರ್ಕಕ್ಕೆ ಬಂದಿದ್ದಳು. ಪ್ರಶಾಂತ್ ನಂಬ್ಯಾರ್ ಪತ್ನಿಗೆ ದೂರದ ಸಂಬಂಧಿಯೂ ಆಗಿದ್ದಳು. ವಯಸ್ಸಿನಲ್ಲಿ ಹಿರಿಯಳಾಗಿದ್ದರಿಂದ ‘ಚೇಚಿ’ (ಅಕ್ಕ) ಎಂದೇ ಪ್ರಶಾಂತ್ ಆಕೆಯನ್ನು ಕರೆಯತೊಡಗಿದ್ದ.ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು
ಚೇಚಿ ಜೊತೆಗಿನ ಕನೆಕ್ಷನ್ ಗರ್ಲ್ ಫ್ರೆಂಡ್ ಆಗುವಷ್ಟರ ಮಟ್ಟಿಗೆ ಬೆಳೆದಿತ್ತು. ಖಾಸಗಿ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿದ್ದ ಪ್ರಶಾಂತ್ ನಂಬ್ಯಾರ್, ತನ್ನ ಕುಟುಂಬಕ್ಕೆ ತಿಳಿಯದ ರೀತಿ ಸುಚಿತ್ರಾ ಪಿಳ್ಳೆ ಜೊತೆ ಬೆರೆಯತೊಡಗಿದ್ದ. ಹಣಕಾಸಿನಲ್ಲಿ ಸ್ವಲ್ಪಮಟ್ಟಿಗೆ ಗಟ್ಟಿ ಕುಳವಾಗಿದ್ದ ಸುಚಿತ್ರಾ ಪಿಳ್ಳೆ ಈ ನಡುವೆ ಪ್ರಶಾಂತ್ ನಂಬ್ಯಾರ್ ಗೆ 2.56 ಲಕ್ಷ ರೂಪಾಯಿ ಹಣವನ್ನು ವಿವಿಧ ಸಂದರ್ಭಗಳಲ್ಲಿ ನೀಡಿದ್ದಳು.ವರ್ಷದ ನಂತರ, ಸುಚಿತ್ರಾ ಹಣ ಕೇಳತೊಡಗಿದ್ದಳು. ಸುಚಿತ್ರಾ ಎರಡು ಬಾರಿ ವಿಚ್ಛೇದನ ಪಡೆದಿದ್ದರು, ಅದಕ್ಕಾಗಿಯೇ ಅವರು ಮತ್ತೆ ಮದುವೆಯಾಗಲು ಸಿದ್ಧರಿರಲಿಲ್ಲ, ಆದರೆ ತಾಯಿಯಾಗಲು ಬಯಸಿದ್ದರು ಎಂದು ಹೇಳಲಾಗುತ್ತಿದೆ. ಆಕೆ ಪ್ರಶಾಂತ್‌ನನ್ನು ತನ್ನ ಮಗುವಿಗೆ ತಂದೆಯಾಗುವಂತೆ ಕೇಳಿಕೊಂಡಿದ್ದಾಳೆ. ಆದರೆ ಮಗುವಾದರೆ ತಮ್ಮ ವಿಚಾರ ಬಯಲಿಗೆ ಬರುತ್ತದೆ ಎಂದು ಆತ ಭಯಗೊಂಡಿದ್ದ. ಇದರಿಂದ ಬೇಸತ್ತು ಕೊನೆಗೆ ಸುಚಿತ್ರಾಳನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದ, ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ಕೆಲವು ದಿನಗಳ ಕಾಲ ಒಟ್ಟಿಗೆ ಇರೋಣ ಎಂದು ಹೇಳಿದ್ದ, ಹೆಂಡತಿ ಮಗುವನ್ನು ಕೊಲ್ಲಂನಲ್ಲಿರುವ ಮನೆ ಹಾಗೂ ತಂದೆ-ತಾಯಿಯನ್ನು ಕೋಯಿಕ್ಕೋಡ್ಗೆ ಕಳುಹಿಸಿದ್ದ. ಇಬ್ಬರ ವಾಟ್ಸಾಪ್ ಸಂದೇಶಗಳು ಕೂಡ ಪೊಲೀಸರಿಗೆ ಸಿಕ್ಕಿದೆ.
ತರಗತಿಗೆ ಹಾಜರಾಗಲು ಕೊಚ್ಚಿಗೆ ಹೋಗುವುದಾಗಿ ಮನೆಯವರಿಗೆ ತಿಳಿಸಿದ್ದಾಳೆ. ಮಧ್ಯಾಹ್ನ, ಅನಾರೋಗ್ಯದಿಂದ ಬಳಲುತ್ತಿರುವ ಸಂಬಂಧಿಯನ್ನು ಭೇಟಿ ಮಾಡಲು ಅಲಪ್ಪುಳಕ್ಕೆ ಹೋಗುವುದಾಗಿ ಹೇಳಿ ಅಕಾಡೆಮಿಯಿಂದ ಹೊರಟರು. ಅಂದು ಸಂಜೆ ಕೊಲ್ಲಂನ ನಿರ್ಜನ ಹೆದ್ದಾರಿಯಿಂದ ಪ್ರಶಾಂತ್ ಅವಳನ್ನು ಕರೆದುಕೊಂಡು 270 ಕಿಮೀ ದೂರದ ಪಾಲಕ್ಕಾಡ್‌ಗೆ ಕರೆದೊಯ್ದಿದ್ದ, ನಂತರ ಇಬ್ಬರೂ ಮಾರ್ಚ್ 20 ರವರೆಗೆ ಪ್ರಶಾಂತ್ ಮನೆಯಲ್ಲಿಯೇ ಇದ್ದರು.
ಹತ್ಯೆ ಮಾಡಿದ ಬಳಿಕ ಪ್ರಶಾಂತ್ ಸುಚಿತ್ರಾಳ ದೇಹದಲ್ಲಿರುವ ಚಿನ್ನಾಭರಣಗಳನ್ನು ತೆಗೆದಿದ್ದಾನೆ. ಪೊಲೀಸರ ಪ್ರಕಾರ, ಅವನು ಅವಳ ಕಾಲುಗಳನ್ನು ಮೊಣಕಾಲುಗಳ ಕೆಳಗೆ ಕತ್ತರಿಸಿ ಮನೆಯ ಹಿಂದೆ ಹೊಂಡವನ್ನು ತೆಗೆದು, ಅಲ್ಲಿ ಆಕೆಯ ದೇಹದ ಭಾಗಗಳನ್ನು ಹೂತಿದ್ದ. ಅಲ್ಲದೆ ನಾಯಿಗಳು ಮೃತದೇಹವನ್ನು ಅಗೆಯಲು ಸಾಧ್ಯವಾಗದಂತೆ ಗುಂಡಿಯನ್ನು ಕಲ್ಲು, ಸಿಮೆಂಟ್ ಕಲ್ಲುಗಳಿಂದ ಮುಚ್ಚಲಾಗಿದೆ. ಅದರ ನಂತರ ಅವನು ಅವಳ ಬಟ್ಟೆಗಳನ್ನು ಮತ್ತು ರಕ್ತದಿಂದ ಕಲೆಯಾಗಿದ್ದ ಎಲ್ಲಾ ವಸ್ತುಗಳನ್ನು ಸುಟ್ಟುಹಾಕಿದ್ದ.
ಸುಚಿತ್ರಾ ಕುಟುಂಬದವರು ಮಗಳಿಗಾಗಿ ಕಾಯುತ್ತಿದ್ದರು, ಬ್ಯೂಟಿಷಿಯನ್ ಅಕಾಡೆಮಿಯಲ್ಲಿ ವಿಚಾರಿಸಿದಾಗ ಆಕೆ ಸುಳ್ಳು ಹೇಳಿ ಹೋಗಿರುವುದು ತಿಳಿದಿತ್ತು ಬಳಿಕ ಪೊಲೀಸರಿಗೆ ದೂರು ನೀಡಿದ್ದರು.
ಗೂಗಲ್ ಸರ್ಚ್ ಹಿಸ್ಟರಿಯಿಂದ ಗೊತ್ತಾಯ್ತು ಕೊಲೆಗಾರ ಯಾರೆಂದು : ಪೊಲೀಸರು ಪ್ರಶಾಂತ್ ಅವರ ಕಾಲ್ ಹಿಸ್ಟರಿ ನೋಡಿ ಬಂಧಿಸಿದ್ದಾರೆ. ಆರೋಪಿ ಸಾಮಾಜಿಕ ಮಾಧ್ಯಮದ ಎಲ್ಲಾ ಖಾತೆಗಳಿಂದ ತನ್ನ ಚಾಟ್ ಅಳಿಸಿದ್ದ, ಆದರೂ ಸೈಬರ್ ಪೊಲೀಸರ ಸಹಾಯದಿಂದ ಪ್ರಶಾಂತನ ಮೊಬೈಲ್ ತೆಗೆದು ಸರ್ಚ್ ಮಾಡಿದಾಗ, ಆತ ಗೂಗಲ್ ನಲ್ಲಿ ಸರ್ಚ್ ಮಾಡಿದ್ದ ವಿಚಾರಗಳು ಗಮನ ಸೆಳೆದಿದ್ದವು. ಸುಚಿತ್ರಾ ನಾಪತ್ತೆಯಾಗಿದ್ದ ಮಾರ್ಚ್ 17ರ ಸಂದರ್ಭದಲ್ಲಿಯೇ ತನ್ನ ಪತ್ನಿಯನ್ನು ಸದ್ದಿಲ್ಲದೆ ಕೊಲೆ ಮಾಡುವುದು ಹೇಗೆ, ಮೃತದೇಹವನ್ನು ಯಾರಿಗೂ ತಿಳಿಯದಂತೆ ಮಣ್ಣು ಮಾಡುವುದು ಹೇಗೆ ಎಲ್ಲವನ್ನೂ ಇಂಟರ್ನೆಟ್ನಲ್ಲಿ ಸರ್ಚ್ ಮಾಡಿದ ವಿಚಾರವೂ ಪೊಲೀಸರಿಗೆ ತಿಳಿದುಬಂದಿತ್ತು. ಪೊಲೀಸರು ಇದೇ ಸುಳಿವನ್ನು ಆಧರಿಸಿ ಪ್ರಶಾಂತ್ ನಂಬ್ಯಾರ್ ನನ್ನು ಬೆಂಡೆತ್ತಿದಾಗ, ನಿಜ ವಿಚಾರ ಹೊರಬಂದಿದೆ. ಇವೆಲ್ಲವನ್ನೂ ಕೋರ್ಟಿಗೆ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ದು ವಿಚಾರಣೆ ವೇಳೆ ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ. ಸಣ್ಣ ವಿಚಾರಕ್ಕೆ ಚೇಚಿ ಚೇಚಿ ಎನ್ನುತ್ತಿದ್ದ ಮಹಿಳೆಯನ್ನು ಭಯಾನಕವಾಗಿ ಕೊಂದು ಮುಗಿಸಿದ್ದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಅಷ್ಟೇ ಅಲ್ಲ, ಕೋರ್ಟಿನಲ್ಲಿ ಎರಡೇ ವರ್ಷದಲ್ಲಿ ವಿಚಾರಣೆ ಮುಗಿಸಿ ನ್ಯಾಯಾಧೀಶರು ಗರಿಷ್ಠ ಶಿಕ್ಷೆ ನೀಡುವಂತೆ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post