• About us
  • Contact us
  • Disclaimer
Saturday, July 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಳ್ಳನ ಹಿಡಿಯಲು ‘ಬಾರಾತಿ’ ವೇಷ ಬದಲಿಸಿ ಮದುವೆ ಮನೆಗೆ ಹೋದ ಪೊಲೀಸರು! ಇಂಟ್ರಸ್ಟಿಂಗ್ ಸ್ಟೋರಿ

Coastal Times by Coastal Times
May 18, 2023
in ಕ್ರೈಮ್ ನ್ಯೂಸ್
ಕಳ್ಳನ ಹಿಡಿಯಲು ‘ಬಾರಾತಿ’ ವೇಷ ಬದಲಿಸಿ ಮದುವೆ ಮನೆಗೆ ಹೋದ ಪೊಲೀಸರು! ಇಂಟ್ರಸ್ಟಿಂಗ್ ಸ್ಟೋರಿ
167
VIEWS
WhatsappTelegramShare on FacebookShare on Twitter

ಮುಂಬೈ: ಪೊಲೀಸರು ಸಿನಿಮೀಯ ರೀತಿಯಲ್ಲಿ ಕಳ್ಳನನ್ನು  ಬಂಧಿಸಿದ ಘಟನೆಯೊಂದು  ನಡೆದಿದೆ. ಮದುವೆಯಲ್ಲಿ ಸಂಬಂಧಿಗಳಂತೆ ವೇಷ ಧರಿಸಿ ಬಂದಿದ್ದ ಪೊಲೀಸರು ಕಳ್ಳನನ್ನ ಬಲೆಗೆ ಬೀಳಿಸಿದ್ದಾರೆ. ಮುಂಬೈನ ಹಳ್ಳಿಯೊಂದರಲ್ಲಿ ನಡೆದ ಘಟನೆ ಇದಾಗಿದೆ. ಇದೊಂದು ಇಂಟರೆಸ್ಟಿಂಗ್ ಸ್ಟೋರಿ. 15 ತಿಂಗಳ ಹಿಂದೆ ಬರೋಬ್ಬರಿ 50 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದ ಕಳ್ಳನಿಗೆ ಪೊಲೀಸರು ಬಲೆ ಬೀಸಿದ್ದರು.   ಹಳ್ಳಿಯೊಂದರಲ್ಲಿ ನಡೆದ ವಿವಾಹದಲ್ಲಿ ಪೊಲೀಸರು ಖದೀಮನಿಗೆ ಖೋಳ ತೊಡಿಸಿದ್ದಾರೆ. ಯವತ್ಮಾಲ್ ಜಿಲ್ಲೆಯ ದರ್ವಾ ತಾಲೂಕಿನ ಸೈಖೇಡಾ ಗ್ರಾಮದಲ್ಲಿ ನಡೆದ ಮದುವೆಯಲ್ಲಿ  ಪೊಲೀಸರು ಸಂಬಂಧಿಗಳ ವೇಷದಲ್ಲಿ ಬಂದು ಕಳ್ಳನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದಾದರ್ ಪೊಲೀಸ್ ಠಾಣೆಯ ಅಧಿಕಾರಿಗಳು ಮದುವೆಯಲ್ಲಿ ಬರಾತಿಸ್​ ವೇಷ ಧರಿಸಿ ಬಂದು, ವರ್ಲಿಯಲ್ಲಿನ ಮನೆಯೊಂದರಲ್ಲಿ 50 ಲಕ್ಷ ನಗದು ಕಳವು ಮಾಡಿ, 15 ತಿಂಗಳಿಂದ ತಲೆಮರೆಸಿಕೊಂಡಿದ್ದ ದೇವ್ಕರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇದಕ್ಕಾಗಿ ಪೊಲೀಸರು ಮೊದಲೇ ತಯಾರಿ ಮಾಡಿಕೊಂಡಿದ್ದರು. ಆರೋಪಿ ದೇವ್ಕರ್ ಸಂಬಂಧಿಯಾದ ಖಾರ್ ನಿವಾಸಿ ವಿನೋದ್ ದೇವ್ಕರ್, ಚಲನವಲನಗಳನ್ನು ಪತ್ತೆ ಹಚ್ಚಿ, ಮದುವೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಇದು ಆರೋಪಿ ದೇವ್ಕರ್  ಸೋದರ ಸೊಸೆಯ ಮದುವೆ ಎಂದು ಗೊತ್ತಾದ ಕೂಡಲೇ ಪೊಲೀಸರು, ಕಳ್ಳನಿಗಾಗಿ ಪ್ಲಾನ್ ಮಾಡಿದ್ರು. ಅದರಂತೆ ಮದುವೆಯಲ್ಲಿ ವೇಷ ಧರಿಸಿ ಬಂದು ಖದೀಮನನ್ನು ಬಂಧಿಸಿದ್ದಾರೆ.

ಮದುವೆಯಲ್ಲಿ ಪ್ಯಾಗ್ರಿಸ್ ವೇಷ ಧರಿಸಿ ಬಂದಿದ್ದ ಪೊಲೀಸರ ತಂಡ

ಮೇ 15 ರಂದು ಸೈಖೇಡಾ ಗ್ರಾಮದಲ್ಲಿ ಮದುವೆ ಇರುವ ಬಗ್ಗೆ ಪೊಲೀಸರು ಖಚಿತಪಡಿಸಿಕೊಂಡಿದ್ದರು. ನಂತರ ಪೊಲೀಸ್ ತಂಡ, ಗ್ರಾಮಕ್ಕೆ ಬಂದು, ಖದೀಮನನ್ನ ಗುರುತಿಸಿ, ಬಂಧಿಸಲಾಗಿದೆ ಎಂದು ದಾದರ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಸಾಗಡೆ ಹೇಳಿದ್ದಾರೆ. ಸದ್ಯ ಆರೋಪಿ ದೇವ್ಕರ್ ನನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 22 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇನ್ನು ಆರೋಪಿ ದೇವ್ಕರ್, ಮಾರ್ಚ್ 17, 2022 ರಂದು ವರ್ಲಿಯ ವೀರ್ ನಾರಿಮನ್ ರಸ್ತೆಯಲ್ಲಿರುವ ಸಂದೀಪ್ ಜಗನ್ನಾಥ್ ದೇಸಾಯಿ ಅವರ ನಿವಾಸದಲ್ಲಿ ಕಳ್ಳತನ ಮಾಡಿದ್ದ.

ಸಂದೀಪ್ ಜಗನ್ನಾಥ್ ದೇಸಾಯಿ ಕುಟುಂಬವು ಪನ್ವೆಲ್‌ ನಲ್ಲಿರುವ ಫಾರ್ಮ್‌ಹೌಸ್​ಗೆ​ ಪೂಜೆಗೆ ಹೋಗಿದ್ದ ಸಮಯದಲ್ಲಿ ಕಳ್ಳ ದೇವ್ಕರ್ 50 ಲಕ್ಷ ನಗದು ದೋಚಿ ಪರಾರಿಯಾಗಿದ್ದ. ಆರೋಪಿ ನಕಲಿ ಕೀ ಬಳಸಿ ಮನೆ ದೋಚಿರುವುದು ಗೊತ್ತಾಗಿದೆ. ಈ ಸಂಬಂಧ ಪೊಲೀಸರು ಮನೆಯೊಳಗಿರುವ ಜನರದ್ದೇ ಪಾತ್ರವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಘಟನೆ ಸಂಬಂಧ ಸಂದೀಪ್ ಜಗನ್ನಾಥ್ ದೇಸಾಯಿ ಕುಟುಂಬದ ಕಾರು ಚಾಲಕ ಪ್ರದೀಪ್ ಕಾನಡೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ದೇವ್ಕರ್​ಗೆ ನಕಲಿ ಕೀಲಿ ಒದಗಿಸಲು ಕಾರು ಚಾಲಕ ಪ್ರದೀಪ್ ಕಾನಡೆ ಸಹಾಯ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ದಾದರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಮುಗುತ್ರಾವ್ ಹೇಳಿದ್ದಾರೆ.

ಇನ್ನು ಪೊಲೀಸರು, ಬಹಳ ದಿನಗಳಿಂದ ಆರೋಪಿ ದೇವ್ಕರ್ ಮತ್ತು ತಂಡವನ್ನು ಹಿಡಿಯಲು ಪ್ಲಾನ್ ರೂಪಿಸಿತ್ತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿ ದೇವ್ಕರ್ ಗಾಗಿ ಹುಡುಕಾಟ ನಡೆಸಿದ್ದರು. ಸದ್ಯ ದೇವ್ಕರ್ ಸಂಬಂಧಿಕರಾದ ರಾಹುಲ್ ಕುರಾದ್ಕರ್, ಮನೀಶ್ ಪರಬ್, ಭೂಷಣ್ ಪವಾರ್ ಮತ್ತು ಮಂಗಳಾ ಕುರಾಡ್ಕರ್ ರನ್ನು ಬಂಧಿಸಿದ್ದಾರೆ. ಅವರ ಬಳಿ ಕದ್ದ ಹಣದ ದೊಡ್ಡ ಮೊತ್ತವಿತ್ತು. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ರು. ಆರೋಪಿ ದೇವ್ಕರ್, ರಾಜಸ್ಥಾನದಲ್ಲಿ ಕಾರ್ ಶೋರೂಮ್ ಅನ್ನು ಪ್ರಾರಂಭಿಸಿ, ಹಣವನ್ನು ಸ್ವೀಕರಿಸುವ ಮೂಲಕ ಮತ್ತು ಕಾರುಗಳನ್ನು ವಿತರಿಸದೆ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಕೇದಾರನಾಥ ಧಾಮದಲ್ಲಿ 60 ಕ್ವಿಂಟಾಲ್ ತೂಕದ ಭವ್ಯವಾದ ಕಂಚಿನ ‘ಓಂ’ ಪ್ರತಿಮೆ ಸ್ಥಾಪನೆ

Next Post

ಗೂಗಲ್ ಸರ್ಚ್​ ಹಿಸ್ಟರಿಯಿಂದ ಗೊತ್ತಾಯ್ತು ಕೊಲೆಗಾರ ಯಾರೆಂದು ‘ಚೇಚಿ’ ಎನ್ನುತ್ತಲೇ ಬ್ಯೂಟಿಶಿಯನ್ ಲೇಡಿಯನ್ನು ಕೊಂದು ಮುಗಿಸಿದ್ದ ಮ್ಯೂಸಿಕ್ ಟೀಚರ್

Related Posts

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ
ಕ್ರೈಮ್ ನ್ಯೂಸ್

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
57
ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ನಲ್ಲಿ ನಡೆದ ಕಳ್ಳತನ ಪ್ರಕರಣ -ಪ್ರಮುಖ ಆರೋಪಿಯ ಬಂಧನ
ಕ್ರೈಮ್ ನ್ಯೂಸ್

ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ನಲ್ಲಿ ನಡೆದ ಕಳ್ಳತನ ಪ್ರಕರಣ -ಪ್ರಮುಖ ಆರೋಪಿಯ ಬಂಧನ

July 23, 2026
57
Next Post
ಗೂಗಲ್ ಸರ್ಚ್​ ಹಿಸ್ಟರಿಯಿಂದ ಗೊತ್ತಾಯ್ತು ಕೊಲೆಗಾರ ಯಾರೆಂದು ‘ಚೇಚಿ’ ಎನ್ನುತ್ತಲೇ ಬ್ಯೂಟಿಶಿಯನ್ ಲೇಡಿಯನ್ನು ಕೊಂದು ಮುಗಿಸಿದ್ದ ಮ್ಯೂಸಿಕ್ ಟೀಚರ್

ಗೂಗಲ್ ಸರ್ಚ್​ ಹಿಸ್ಟರಿಯಿಂದ ಗೊತ್ತಾಯ್ತು ಕೊಲೆಗಾರ ಯಾರೆಂದು ‘ಚೇಚಿ’ ಎನ್ನುತ್ತಲೇ ಬ್ಯೂಟಿಶಿಯನ್ ಲೇಡಿಯನ್ನು ಕೊಂದು ಮುಗಿಸಿದ್ದ ಮ್ಯೂಸಿಕ್ ಟೀಚರ್

Discussion about this post

Recent News

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
57
ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

July 24, 2026
43
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

July 24, 2026
ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d