ಮಂಗಳೂರು: ‘ಹಿಂದೂ ವಿರೋಧಿ ವಿಚಾರ ಬಂದಾಗ ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ. ನೀವು ಯಾವ ಲೆಕ್ಕ?’ ಎಂದು ಮುಖ್ಯಮಂತ್ರಿ ವಿರುದ್ಧ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಮಂಗಳೂರು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ, ದೇವಸ್ಥಾನ ಒಡೆದ ವಿಚಾರವನ್ನು ಖಂಡಿಸುತ್ತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆನಂತರ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಕೇವಲ ನಾಟಕ ಮಾತ್ರ. ಇವರಿಗೆ ಅಷ್ಟು ಅಭಿಮಾನ ಇದ್ದರೆ ಬಿಜೆಪಿಗೆ ಬೆಂಬಲ ನೀಡಬಾರದು. ದೇವಸ್ಥಾನ ಒಡೆದಿರುವ ವಿಚಾರವನ್ನು ಸಣ್ಣ ತಪ್ಪು ಅನ್ನುತ್ತಿದ್ದಾರೆ. ಇವರಿಗೆ ದೇವಸ್ಥಾನ ಒಡೆದು ಹಾಕಿದ್ದು ಸಣ್ಣ ತಪ್ಪಾದರೆ, ಮತ್ತೆ ಯಾವುದು ದೊಡ್ಡ ತಪ್ಪು. ಬೊಮ್ಮಾಯಿ ಅವರೇ, ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ. ನೀವು ಯಾವ ಲೆಕ್ಕ. ನಿಮ್ಮನ್ನು ಹಾಗೇ ಬಿಡುತ್ತೇವೆ ಎಂದುಕೊಂಡಿರಾ ಎಂದು ಪ್ರಶ್ನೆ ಮಾಡಿದ್ದರು.
ಸಮರ್ಥನೆ: ‘ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ನೀಡಿದ ಹೇಳಿಕೆ ಸರಿಯಾಗಿದೆ’ ಎಂದು ಸಮರ್ಥಿಸಿಕೊಂಡಿರುವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಪವಿತ್ರನ್, ‘ಮಹಾಸಭಾದಿಂದ ಉಚ್ಚಾಟಿತ ವ್ಯಕ್ತಿಯ ಪ್ರಚೋದನೆಯಿಂದ ಬಿಜೆಪಿ ಈ ಷಡ್ಯಂತ್ರ ಮಾಡುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಇಲ್ಲದವರ ವಿರುದ್ಧವೂ ಎಫ್ಐಆರ್ ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post