• About us
  • Contact us
  • Disclaimer
Tuesday, June 3, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಾಲಗಾರರ ಕಾಟ ; ಬೆಂಕಿ ಹಚ್ಚಿಕೊಂಡು ಉಡುಪಿ ಮೂಲದ ತಾಯಿ, ಒಂದೇ ಕುಟುಂಬದ ಮೂವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ,ಆತ್ಮಹತ್ಯೆ ಶಂಕೆ

Coastal Times by Coastal Times
March 20, 2024
in ಕ್ರೈಮ್ ನ್ಯೂಸ್
ಸಾಲಗಾರರ ಕಾಟ ; ಬೆಂಕಿ ಹಚ್ಚಿಕೊಂಡು ಉಡುಪಿ ಮೂಲದ ತಾಯಿ, ಒಂದೇ ಕುಟುಂಬದ ಮೂವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ,ಆತ್ಮಹತ್ಯೆ ಶಂಕೆ
131
VIEWS
WhatsappTelegramShare on FacebookShare on Twitter

ಬೆಂಗಳೂರು: ಜೆ‌.ಪಿ.ನಗರದ ಮೂರನೇ ಹಂತದಲ್ಲಿ ಒಂದೇ ಕುಟುಂಬದ ಮೂವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಸುಕನ್ಯಾ (48), ಮಕ್ಕಳಾದ ನಿಖಿತ್ (28) ಹಾಗೂ ನಿಶ್ಚಿತ್ (28) ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ: ಆರ್ಥಿಕ ಸಂಕಷ್ಟ ತಾಳಲಾರದೇ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಡುಪಿಯ ಅಂಬಲಪಾಡಿ ಮೂಲದ ಈ ಕುಟುಂಬ ಜೆ.ಪಿ.ನಗರದ ಮೂರನೇ ಹಂತದಲ್ಲಿ ವಾಸವಿತ್ತು. ಮನೆಯಲ್ಲಿ ಸುಕನ್ಯಾ, ಪತಿ ಜಯಾನಂದ, ಅವಳಿ ಮಕ್ಕಳಾದ ನಿಶ್ಚಿತ್ ಹಾಗೂ ನಿಕಿತ್ ವಾಸವಿದ್ದರು.

ಸ್ವಂತ ಉದ್ಯಮ ನಡೆಸುತ್ತಿದ್ದ ಜಯಾನಂದ್ ಅವರಿಗೆ ಕೋವಿಡ್ ಲಾಕ್​ಡೌನ್ ಸಂದರ್ಭದಲ್ಲಿ ನಷ್ಟವಾಗಿತ್ತು ಎನ್ನಲಾಗಿದೆ. ಆ ನಂತರ ಕುಟುಂಬ ನಿರ್ವಹಣೆಗಾಗಿ ಸಾಕಷ್ಟು ಸಾಲ‌ ಮಾಡಿಕೊಂಡಿದ್ದರಿಂದ, ಸುಕನ್ಯಾ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಇಬ್ಬರು ಮಕ್ಕಳಲ್ಲಿ ಓರ್ವ ಮಗ ನಿಶ್ಚಿತ್ ಮನೆಯಿಂದಲೇ ವರ್ಕ್ ಫ್ರಮ್ ಹೋಂ ಮಾಡುತ್ತಿದ್ದ. ನಾಲ್ಕೈದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದುದರಿಂದ ಜಯಾನಂದ್ ಸಹ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು.

ಇಂದು ಬೆಳಗ್ಗೆ ಪತಿಗೆ ಹಾಲು, ದಿನಪತ್ರಿಕೆ ಕೊಟ್ಟು ರೂಂ ಬಾಗಿಲು ಲಾಕ್ ಮಾಡಿದ್ದ ಸುಕನ್ಯಾ ಹಾಲ್‌ನಲ್ಲಿ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮೂರು ಶವಗಳ ಮೈ-ಕೈಗೆ ಎಲೆಕ್ಟ್ರಿಕ್ ಕೇಬಲ್ ಸುತ್ತಿರುವುದು ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ‌

ನಿಕಿತ್ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ. ಸಾಲ ಜಾಸ್ತಿಯಾದ ಹಿನ್ನೆಲೆಯಲ್ಲಿ ಮನೆಗೆ ಸಾಲಗಾರರು ಬರುತ್ತಿದ್ದರು. ಹದಿನೈದು ವರ್ಷಗಳಿಂದ ಒಂದೇ ಮನೆಯಲ್ಲಿ ಕುಟುಂಬ ಬಾಡಿಗೆಗೆ ಇತ್ತು. ಕಳೆದ ಕೆಲ ತಿಂಗಳಿನಿಂದ ಬಾಡಿಗೆ ಕಟ್ಟಲು ಕುಟುಂಬ ಒದ್ದಾಡುತ್ತಿತ್ತು. ಮಂಗಳವಾರ ಸಾಲಗಾರರು ಮನೆ ಬಳಿ ಬಂದು ಸಾಲ ಪಾವತಿಸುವಂತೆ ಒತ್ತಡ ಹೇರಿದ್ದಾರೆ. ಈ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಜಯಾನಂದ ಅವರು ಮನೆಯಲ್ಲಿಯೇ ಇದ್ದುದಾಗಿ ಹೇಳಿದ್ದಾರೆ. ಆದ್ದರಿಂದ ಸಾವಿಗೆ ನಿಖರ ಕಾರಣದ ಕುರಿತು ತನಿಖೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಇದು ಆತ್ಮಹತ್ಯೆಯೇ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ. ಜೆ.ಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿರುವುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

Share this:

  • Facebook
  • X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ತುಂಬಿದ ಮಂಜಿ ಬೋಟ್​​ ಮುಳುಗಡೆ: ಮೀನುಗಾರರಿಂದ 8 ಜನರ ರಕ್ಷಣೆ

Next Post

ಆಂಡ್ರಾಯ್ಡ್ ಉತ್ಕೃಷ್ಟ ಸ್ಮಾರ್ಟ್​ಫೋನ್​ಗಳಿಗಾಗಿ (Snapdragon 8s Gen 3) ಚಿಪ್ ಬಿಡುಗಡೆ ಮಾಡಿದ ಕ್ವಾಲ್ಕಾಮ್

Related Posts

‘ನಿನ್ನನ್ನು ಹೇಗೆ ಕೊಲ್ಲುತ್ತೇವೆಂದು ಅಲ್ಲಾನಿಗೂ ಗೊತ್ತಿಲ್ಲ’ ಹಿಂದೂ ಮುಖಂಡನಿಗೆ ಜೈಷ್ ಉಗ್ರ ಸಂಘಟನೆ ಹೆಸರಿನಲ್ಲಿ ಬೆದರಿಕೆ
ಕ್ರೈಮ್ ನ್ಯೂಸ್

‘ನಿನ್ನನ್ನು ಹೇಗೆ ಕೊಲ್ಲುತ್ತೇವೆಂದು ಅಲ್ಲಾನಿಗೂ ಗೊತ್ತಿಲ್ಲ’ ಹಿಂದೂ ಮುಖಂಡನಿಗೆ ಜೈಷ್ ಉಗ್ರ ಸಂಘಟನೆ ಹೆಸರಿನಲ್ಲಿ ಬೆದರಿಕೆ

May 30, 2025
124
ದರೋಡೆಗೆ ಹೊಂಚು ಹಾಕಿದ್ದ ಮಂಗಳೂರಿನ ‘ಗರುಡಾ ಗ್ಯಾಂಗ್’ ಹೆಡೆಮುರಿ ಕಟ್ಟಿದ ಕಾರವಾರ ಪೊಲೀಸರು
ಕ್ರೈಮ್ ನ್ಯೂಸ್

ದರೋಡೆಗೆ ಹೊಂಚು ಹಾಕಿದ್ದ ಮಂಗಳೂರಿನ ‘ಗರುಡಾ ಗ್ಯಾಂಗ್’ ಹೆಡೆಮುರಿ ಕಟ್ಟಿದ ಕಾರವಾರ ಪೊಲೀಸರು

May 29, 2025
110
Next Post
ಆಂಡ್ರಾಯ್ಡ್ ಉತ್ಕೃಷ್ಟ ಸ್ಮಾರ್ಟ್​ಫೋನ್​ಗಳಿಗಾಗಿ (Snapdragon 8s Gen 3) ಚಿಪ್ ಬಿಡುಗಡೆ ಮಾಡಿದ ಕ್ವಾಲ್ಕಾಮ್

ಆಂಡ್ರಾಯ್ಡ್ ಉತ್ಕೃಷ್ಟ ಸ್ಮಾರ್ಟ್​ಫೋನ್​ಗಳಿಗಾಗಿ (Snapdragon 8s Gen 3) ಚಿಪ್ ಬಿಡುಗಡೆ ಮಾಡಿದ ಕ್ವಾಲ್ಕಾಮ್

Discussion about this post

Recent News

ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮರು ಯುವಕರ ಗಡಿಪಾರು

ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮರು ಯುವಕರ ಗಡಿಪಾರು

June 2, 2025
2
ಬಂಟ್ವಾಳ: 2.1 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ (ಎಡಭಾಗವನ್ನು) ಸಂಚಾರಕ್ಕೆ ಮುಕ್ತ

ಬಂಟ್ವಾಳ: 2.1 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ (ಎಡಭಾಗವನ್ನು) ಸಂಚಾರಕ್ಕೆ ಮುಕ್ತ

June 2, 2025
46
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮರು ಯುವಕರ ಗಡಿಪಾರು

ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮರು ಯುವಕರ ಗಡಿಪಾರು

June 2, 2025
ಬಂಟ್ವಾಳ: 2.1 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ (ಎಡಭಾಗವನ್ನು) ಸಂಚಾರಕ್ಕೆ ಮುಕ್ತ

ಬಂಟ್ವಾಳ: 2.1 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ (ಎಡಭಾಗವನ್ನು) ಸಂಚಾರಕ್ಕೆ ಮುಕ್ತ

June 2, 2025
ಪುತ್ತೂರು: ಬಿಜೆಪಿ ಮುಖಂಡ ಅರುಣ್ ಪುತ್ತಿಲ ಗಡೀಪಾರಿಗೆ ನೋಟಿಸ್, ಜೂ.6ರಂದು ವಿಚಾರಣೆಗೆ ಹಾಜರಾಗಲು ಸೂಚನೆ

ಪುತ್ತೂರು: ಬಿಜೆಪಿ ಮುಖಂಡ ಅರುಣ್ ಪುತ್ತಿಲ ಗಡೀಪಾರಿಗೆ ನೋಟಿಸ್, ಜೂ.6ರಂದು ವಿಚಾರಣೆಗೆ ಹಾಜರಾಗಲು ಸೂಚನೆ

June 2, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d