ಮಂಗಳೂರು, ಸೆ.20: ಮಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ, ಬೆದರಿಕೆ, ಹಫ್ತಾ ವಸೂಲಿ ಹೀಗೆ ಹತ್ತಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪಡೀಲ್ ಫೈಸಲ್ ನಗರನಿವಾಸಿ ತಲ್ಲತ್ (39) ಬಂಧಿತ ವ್ಯಕ್ತಿ. ಗೋವಾ, ಮುಂಬೈನಲ್ಲಿದ್ದುಕೊಂಡೇ ರೌಡಿಸಂ ಲೋಕವನ್ನು ನಿಯಂತ್ರಿಸುತ್ತಿದ್ದ . ತಲ್ಲತ್ ಗ್ಯಾಂಗ್ ಲೀಡರ್ ಆಗಿದ್ದ ಎನ್ನಲಾಗಿದೆ. ಕಳೆದ 20 ವರ್ಷಗಳಿಂದ ತಲ್ಲತ್ ಮಂಗಳೂರಿನಲ್ಲಿ ಅಪರಾಧ ಎದುರಿಸುತ್ತಿದ್ದಾನೆ.
ಇತ್ತೀಚೆಗೆ ತಲ್ಲತ್ ಮುಂಬೈನಿಂದ ಊರಿಗೆ ಬಂದಿದ್ದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೊಟ್ಟಾರದಲ್ಲಿದ್ದಾಗ ಬಂಧಿಸಿದ್ದಾರೆ. ಬಳಿಕ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಲ್ಲತ್ ವಿರುದ್ಧ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಕೊಣಾಜೆ, ಬರ್ಕೆ, ಮುಂಬೈ ಮುಂತಾದ ಕಡೆಗಳಲ್ಲಿ ಹಲ್ಲೆ, ಜೀವ ಬೆದರಿಕೆ, ಹಫ್ತಾ ವಸೂಲಿ, ದರೋಡೆ, ಕೊಲೆಯತ್ನ, ಕೊಲೆ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ, ಅಪಹರಣ ಹೀಗೆ ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
Discussion about this post