ಮಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಕಾರಣ ಕೆಲವು ಸ್ಥಳಗಳಲ್ಲಿ ಶಬ್ಧ ಮಾಲಿನ್ಯ ಕಡಿಮೆ ಮಾಡುವ ಸಲುವಾಗಿ “ಹಾರ್ನ್ ನಿಷೇಧಿತ ಪ್ರದೇಶ” (No Horn Zone) ಗಳನ್ನು ಮಂಗಳೂರು ಪೊಲೀಸರು ಗುರುತಿಸಿದ್ದಾರೆ.
ವಾಹನ ಹಾರ್ನ್ ಶಬ್ಧದ ಕಾರಣದಿಂದ ಸರ್ಕಾರಿ ಕಛೇರಿಗಳ ಕೆಲಸ ಕಾರ್ಯಗಳ, ಶಾಲಾ ಕಾಲೇಜು ವಿದ್ಯಾರ್ಥಿಗಳ ಮತ್ತು ಆಸ್ಪತ್ರೆಗಳಲ್ಲಿನ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಹಾಗೂ ಶಬ್ದ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ ಮಂಗಳೂರು ನಗರದ ನಿರ್ದಿಷ್ಟ ಪ್ರದೇಶಗಳನ್ನು ಹಾರ್ನ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ಹಾರ್ನ್ ನಿಷೇಧಿತ ಪ್ರದೇಶಗಳು ಹೀಗಿವೆ:
1. ರಾವ್ ಆ್ಯಂಡ್ ರಾವ್ ವೃತ್ತದ ಸಮೀಪದ ಮೈದಾನ 3ನೇ ಅಡ್ಡ ರಸ್ತೆಯಿಂದ ಲೇಡಿಗೋಶನ್ ಆಸ್ಪತ್ರೆವರೆಗೆ.
2. ಲೇಡಿಗೋಶನ್ ಆಸ್ಪತ್ರೆಯಿಂದ ಕ್ಲಾಕ್ ಟವರ್‌ವರೆಗೆ.
3. ಲೇಡಿಗೋಶನ್ ಆಸ್ಪತ್ರೆಯಿಂದ ಕಲ್ಪನಾ ಸ್ವೀಟ್ಸ್ ವರೆಗೆ.
ಹಂಪನಕಟ್ಟೆ ಜಂಕ್ಷನ್ :
1. ಹಂಪನಕಟ್ಟೆ ಜಂಕ್ಷನ್‍ನಿಂದ ಮಿಲಾಗ್ರಿಸ್ ಚರ್ಚ್‌ವರೆಗಿನ ಪ್ರದೇಶ.
2. ಮಿಲಾಗ್ರಿಸ್ ಚರ್ಚ್ ಬಳಿಯ ವೆನ್‌ಲಾಕ್ ಆಸ್ಪತ್ರೆಯ ಗೇಟ್‌ನಿಂದ ಮುತ್ತಪ್ಪ ಗುಡಿಯವರೆಗೆ.
3. ಹಂಪನಕಟ್ಟೆ ಜಂಕ್ಷನ್‌ನಿಂದ ಮಿನಿ ವಿಧಾನಸೌಧ ಕಟ್ಟಡದವರೆಗೆ.
ಡಾ.ಅಂಬೇಡ್ಕರ್ ವೃತ್ತದ ಸುತ್ತಲಿನ ಪ್ರದೇಶ :
1. ಅಂಬೇಡ್ಕರ್ ವೃತ್ತದಿಂದ ಬಲ್ಮಠ ಜಂಕ್ಷನ್ ಕಡೆಗೆ 50 ಮೀಟರ್ ಪ್ರದೇಶ.
2.. ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ವೃತ್ತದ ಕಡೆಗೆ 50 ಮೀಟರ್ ಪ್ರದೇಶ.
3. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ವೃತ್ತದ ಕಡೆಗೆ 50 ಮೀಟರ್ ಪ್ರದೇಶ.
4. ಬಾವುಟ ಗುಡ್ಡದಿಂದ ಅಂಬೇಡ್ಕರ್ ವೃತ್ತದವರೆಗೆ.
5. ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಉತ್ತರ ಬದಿಯ ಕಂಪೌಂಡ್ ಸಮೀಪದಿಂದ ಬಿಷಪ್ ವಿಕ್ಟರ್ ತಿರುವಿನವರೆಗೆ
6. ದೇರಳಕಟ್ಟೆ ಯೇನಪೋಯ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀಟರ್ ಪ್ರದೇಶ
7. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀಟರ್ ಪ್ರದೇಶ
ಈ ಸ್ಥಳಗಳಲ್ಲಿ ವಾಹನ ಚಾಲಕರು ವಾಹನಗಳ ಹಾರ್ನ್ ಬಳಸುವುದನ್ನು ನಿಷೇಧಿಸಲಾಗಿದೆ.
ಉಲ್ಲಂಘಿಸಿದರೆ? : ಭಾರತೀಯ ಮೋಟಾರು ವಾಹನ ಅಧಿನಿಯಮ (ತಿದ್ದುಪಡಿ) 2019 ರ ಕಲಂ 194 (ಎಫ್) ರಂತೆ ಹಾರ್ನ್ ನಿಷೇಧಿಸಿದ ಸಂಚಾರ ಸೂಚನಾ ಫಲಕ ಇರುವ ಪ್ರದೇಶದಲ್ಲಿ ಹಾರ್ನ್ ಬಳಸಿದ್ದಲ್ಲಿ ಅಂತಹ ವಾಹನ ಚಾಲಕರ ಮೇಲೆ ಮೊದಲನೆಯ ಉಲ್ಲಂಘನೆಗೆ ರೂ 1000/- ದಂಡವನ್ನು ಹಾಗೂ ಎರಡನೆ ಹಾಗೂ ನಂತರದ ಪ್ರತಿ ಉಲ್ಲಂಘನೆಗೆ ರೂ 2000/- ದಂಡವನ್ನು ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post