• About us
  • Contact us
  • Disclaimer
Wednesday, September 9, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕೋಟೆಕಾರು ಬ್ಯಾಂಕ್‌ ದರೋಡೆ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಮಂಗಳೂರು ಕ್ರೈಂ ಬ್ರ್ಯಾಂಚ್‌ ಪೊಲೀಸರಿಂದ ಗುಂಡೇಟು

Coastal Times by Coastal Times
January 21, 2025
in ಕ್ರೈಮ್ ನ್ಯೂಸ್
ಕೋಟೆಕಾರು ಬ್ಯಾಂಕ್‌ ದರೋಡೆ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಮಂಗಳೂರು ಕ್ರೈಂ ಬ್ರ್ಯಾಂಚ್‌ ಪೊಲೀಸರಿಂದ ಗುಂಡೇಟು
215
VIEWS
WhatsappTelegramShare on FacebookShare on Twitter

ಉಳ್ಳಾಲ: ರಾಜ್ಯದಲ್ಲಿ ಸದ್ದು ಮಾಡಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ (ಜ.21) ನಡೆದಿದೆ. ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿದೆ. ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್‌ ನಗರ ನಿವಾಸಿ ಕಣ್ಣನ್‌ ಮಣಿ (36) ಎಂಬಾತನ ಮೇಲೆ ಮಂಗಳೂರು ಸಿಟಿ ಕ್ರೈಂ ಬ್ರ್ಯಾಂಚ್‌ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಜ.17 ರಂದು ಉಳ್ಳಾಲದ ಕೆ.ಸಿ. ರೋಡ್​ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ನಲ್ಲಿ ಪಿಸ್ತೂಲ್ ತೋರಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ನಗದು ದರೋಡೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿರುವ ಸಮಯದಲ್ಲಿ ಈ ಘಟನೆ ನಡೆದಿತ್ತು.

ಆರೋಪಿಗಳಲ್ಲಿ ಮೂವರನ್ನು ನಿನ್ನೆ(ಸೋಮವಾರ) ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು. ತಮಿಳುನಾಡಿನಲ್ಲಿ ಮುರುಗುಂಡಿ ಥೇವರ್, ಮುಂಬೈನ ಯೋಸುವ ರಾಜೇಂದ್ರನ್ ಮತ್ತು ಕಣ್ಣನ್ ಮಣಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ಮುಂಬೈನ ಚೆಂಬೂರಿನ ತಿಲಕ್ ನಗರದ ನಿವಾಸಿ ಮಣಿ ಅವರ ಪುತ್ರ ಕಣ್ಣನ್ ಮಣಿ (36) ಎಂಬ ಆರೋಪಿ ವಶಕ್ಕೆ ಪಡೆದು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ, ಕಣ್ಣನ್ ಮಣಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆ ವೇಳೆ ಪೊಲೀಸರು ಆತನ ಕಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಕಮಿಷನರ್​ ಹೇಳಿದ್ದೇನು?: ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್​ ಅನುಪನ್ ಅಗರ್ವಾಲ್, “ಆರೋಪಿಗಳು ನೀಡಿದ ಮಾಹಿತಿಯ ಪ್ರಕಾರ, ಇಂದು ಸಂಜೆ 4:20ರ ಸುಮಾರಿಗೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸಿ. ರಸ್ತೆಯ ಅಲಂಕಾರು ಗುಡ್ಡೆ ಬಳಿ ಸ್ಥಳ ಪರಿಶೀಲನೆ ನಡೆಸಲಾಯಿತು. ಆರೋಪಿಗಳು ಮತ್ತು ಉಳ್ಳಾಲ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಹೆಚ್.ಎನ್. ಮತ್ತು ತನಿಖಾ ತಂಡದ ಸದಸ್ಯರ ಸಮ್ಮುಖದಲ್ಲಿ ತಪಾಸಣೆ ನಡೆಸಲಾಯಿತು” ಎಂದರು.

“ತಪಾಸಣೆಯ ಸಮಯದಲ್ಲಿ, ಆರೋಪಿ ಕಣ್ಣನ್ ಮಣಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಸ್ಥಳದಲ್ಲಿ ದೊರೆತ ಮುರಿದ ಬಿಯರ್ ಬಾಟಲಿಯನ್ನು ಬಳಸಿ ಬೆಂಗಾವಲು ಸಿಬ್ಬಂದಿ ಅಂಜನಪ್ಪ ಮತ್ತು ನಿತಿನ್ ಮೇಲೆ ದಾಳಿ ಮಾಡಿದನು. ಆರೋಪಿಗಳು ತನಿಖಾ ಅಧಿಕಾರಿ ಉಳ್ಳಾಲ ಪೊಲೀಸ್ ನಿರೀಕ್ಷಕರನ್ನೂ ತಳ್ಳಿ, ಅವರಿಗೆ ಇರಿದು ಹಾಕಲು ಪ್ರಯತ್ನಿಸಿದರು. ಜೊತೆಗಿದ್ದ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರು ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಿದ ಎಚ್ಚರಿಕೆಯ ಹೊರತಾಗಿಯೂ, ಆರೋಪಿ ತನ್ನ ಹಲ್ಲೆ ಮುಂದುವರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು” ಎಂದು ಹೇಳಿದರು.

“ಈ ಕಾರಣದಿಂದ ಸಿಸಿಬಿ ಪೊಲೀಸ್ ನಿರೀಕ್ಷಕರು ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಅವನನ್ನು ನಿಗ್ರಹಿಸಿ ವಶಕ್ಕೆ ಪಡೆದರು. ಘಟನೆಯಲ್ಲಿ ಉಳ್ಳಾಲ ಪೊಲೀಸ್ ನಿರೀಕ್ಷಕ ಬಾಲಕೃಷ್ಣ, ಸಿಸಿಬಿ ಘಟಕದ ಪಿಸಿ ಅಂಜನಪ್ಪ ಮತ್ತು ಉಳ್ಳಾಲ ಪೊಲೀಸ್ ನಿರೀಕ್ಷಕ ನಿತಿನ್ ಅವರಿಗೆ ಗಾಯಗಳಾಗಿವೆ. ಗಾಯಗೊಂಡ ಸಿಬ್ಬಂದಿ ಮತ್ತು ಆರೋಪಿಗಳನ್ನು ತಕ್ಷಣ ಚಿಕಿತ್ಸೆಗಾಗಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ; ತಮಿಳುನಾಡಿನಲ್ಲಿ ಮುರುಗಂಡಿ, ಮುಂಬೈಯ ರಾಜೇಂದ್ರನ್, ಕಣ್ಣನ್ ಮಣಿ ಮೂವರು ಅರೆಸ್ಟ್

Next Post

ಅಮೃತಾ ಆಸ್ಪತ್ರೆ ಕೊಚ್ಚಿ ಇವರಿಂದ ಮಂಗಳೂರಿನಲ್ಲಿ ಜನ್ಮಜಾತ ಹೃದಯರೋಗ ಸಮಸ್ಯೆ ಇರುವ ಮಕ್ಕಳಿಗಾಗಿ ಬೃಹತ್ ಉಚಿತ ಚಿಕಿತ್ಸಾ ಶಿಬಿರ

Related Posts

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ
ಕ್ರೈಮ್ ನ್ಯೂಸ್

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

September 8, 2026
59
ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ
ಕ್ರೈಮ್ ನ್ಯೂಸ್

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ

September 5, 2026
30
Next Post
ಅಮೃತಾ ಆಸ್ಪತ್ರೆ ಕೊಚ್ಚಿ ಇವರಿಂದ ಮಂಗಳೂರಿನಲ್ಲಿ ಜನ್ಮಜಾತ ಹೃದಯರೋಗ ಸಮಸ್ಯೆ ಇರುವ ಮಕ್ಕಳಿಗಾಗಿ ಬೃಹತ್ ಉಚಿತ ಚಿಕಿತ್ಸಾ ಶಿಬಿರ

ಅಮೃತಾ ಆಸ್ಪತ್ರೆ ಕೊಚ್ಚಿ ಇವರಿಂದ ಮಂಗಳೂರಿನಲ್ಲಿ ಜನ್ಮಜಾತ ಹೃದಯರೋಗ ಸಮಸ್ಯೆ ಇರುವ ಮಕ್ಕಳಿಗಾಗಿ ಬೃಹತ್ ಉಚಿತ ಚಿಕಿತ್ಸಾ ಶಿಬಿರ

Discussion about this post

Recent News

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

September 8, 2026
36
ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

September 8, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

September 8, 2026
ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

September 8, 2026
ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

September 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d