• About us
  • Contact us
  • Disclaimer
Wednesday, September 9, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

Coastal Times by Coastal Times
July 21, 2026
in ಕರಾವಳಿ
ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ
32
VIEWS
WhatsappTelegramShare on FacebookShare on Twitter

ಮಂಗಳೂರು, ಜು.20: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ಠಾಣೆಗಳ ಅಪರಾಧ ಪ್ರಕರಣಗಳ ಪತ್ತೆ ಕಾರ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾರ್ಯದಕ್ಷತೆಯನ್ನು ಮೆರೆದ 29 ಪೊಲೀಸ್ ಅಧಿಕಾರಿಗಳು ಮತ್ತು 118 ಸಿಬ್ಬಂದಿಯನ್ನು ಗುರುತಿಸಿ ಸೋಮವಾರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

24 ಎಲ್‌ಪಿಸಿ (Long Pending Cases) ಪ್ರಕರಣಗಳ ಮತ್ತು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್‌ಬಿಡಬ್ಲ್ಯು (NBW) ವಾರಂಟ್ ಹೊಂದಿದ್ದ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. 2026ನೇ ಸಾಲಿನಲ್ಲಿ ಸೊತ್ತು ಕಳವುಗಳ ಪೈಕಿ 88 ಪ್ರಕರಣಗಳ ಆರೋಪಿಗಳನ್ನು ಬಂಧಿಸಿ 1.20 ಕೋ.ರೂ. ಮೌಲ್ಯದ ಕಳವಾದ ಸೊತ್ತು ಗಳನ್ನು ವಶಪಡಿಸಲಾಗಿದೆ.

ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದಲ್ಲಿ ತೊಡಗಿದ್ದ ಪೆಡ್ಲರ್‌ಗಳ ವಿರುದ್ಧ 84 ಪ್ರಕರಣಗಳನ್ನು ದಾಖಲಿಸಿ, 142 ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 346 ಪ್ರಕರಣಗಳನ್ನು ದಾಖಲಿಸಿ 443 ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಪೆಡ್ಲರ್‌ಗಳ ಕುರಿತು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಸೈಬರ್ ಅಪರಾಧಗಳು ನಡೆಯದಂತೆ ನಗರ ವ್ಯಾಪ್ತಿಯಲ್ಲಿ ಜಾಗೃತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರ ಪರಿಣಾಮ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದ್ದು, ಪ್ರಸಕ್ತ ಸಾಲಿನಲ್ಲಿ ಸೈಬರ್ ವಂಚನೆ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಸೈಬರ್ ವಂಚನೆ ನಡೆದ ತಕ್ಷಣ 1930 ಸಹಾಯ ವಾಣಿಗೆ ಕರೆ ಮಾಡುವ ಮೂಲಕ ತ್ವರಿತ ಕ್ರಮ ಕೈಗೊಂಡು, ವಂಚನೆಗೊಳಗಾದ ಹಣವನ್ನು ಮರುಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳನ್ನು ಕೂಡ ಗೌರವಿಸಲಾಯಿತು.

ಸಾಮಾಜಿಕ ಜಾಲತಾಣಗಳ ಮೇಲೆ ಇಲಾಖೆಯು ನಿರಂತರ ನಿಗಾ ವಹಿಸಿದ್ದು, ದ್ವೇಷ ಭಾಷಣ, ಅಪಪ್ರಚಾರ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಹರಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪರಿಣಾಮಕಾರಿ ಅಧಿಕಾರಿ/ಸಿಬ್ಬಂದಿಗಳು ಕ್ರಮ ಕೈಗೊಂಡಿರುತ್ತಾರೆ. ಪ್ರಮುಖ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಾಗಿ, ತನಿಖಾ ಸಹಾಯಕರಾಗಿ ಹಾಗೂ ನ್ಯಾಯಾಲಯದ ಕರ್ತವ್ಯ ಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಗುಣಮಟ್ಟದ ತನಿಖೆ ನಡೆಸುವ ಮೂಲಕ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾ ಗುವಂತೆ ಶ್ರಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ಗೌರವಿಸಲಾಯಿತು. ಹಾಗೂ 112 ತುರ್ತು ಸ್ಪಂದನೆ ಸಹಾಯ ವಾಣಿಯ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ನಗರದ ನಿಸ್ತಂತು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು ಎಂದು ಪೊಲೀಸ್ ಆಯುಕ್ತಾಲಯ ಪ್ರಕಟನೆಯಲ್ಲಿ ತಿಳಿಸಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

Next Post

ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

Related Posts

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ
ಕರಾವಳಿ

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

September 8, 2026
37
ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ
ಕರಾವಳಿ

ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

September 8, 2026
28
Next Post
ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

Discussion about this post

Recent News

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

September 8, 2026
37
ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

September 8, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ;ಕೊಲೆ, ಡ್ರಗ್ಸ್, ಕೋಕಾ ಆರೋಪಿಗಳಿಂದ 10 ಸ್ಮಾರ್ಟ್‌ಫೋನ್‌ಗಳು ಜಪ್ತಿ

September 8, 2026
ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

September 8, 2026
ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

September 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d