• About us
  • Contact us
  • Disclaimer
Tuesday, July 21, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

Coastal Times by Coastal Times
July 21, 2026
in ರಾಷ್ಟ್ರೀಯ ಸುದ್ದಿ
ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು
41
VIEWS
WhatsappTelegramShare on FacebookShare on Twitter

ನವದೆಹಲಿ: ಉಕ್ರೇನ್‌ನ ಒಡೆಸಾ ಬಂದರಿನಿಂದ ಹೊರಡುತ್ತಿದ್ದ ಎಂವಿ ಗೋಲ್ಡನ್ ಲಿಯೋ ಎಂಬ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ನಾಲ್ವರು ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯನ್ನು ಸೋಮವಾರ ಭಾರತ ಖಂಡಿಸಿದೆ.

ವಿದೇಶಾಂಗ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ, ಜುಲೈ 19ರಂದು ಸಂಜೆ ಒಡೆಸಾ ಬಂದರಿನಿಂದ ಹೊರಡುವಾಗ ಹಡಗಿನ ಮೇಲೆ ದಾಳಿ ನಡೆಸಲಾಗಿದೆ. ಘಟನೆ ನಡೆದ ವೇಳೆ 5 ಮಂದಿ ಭಾರತೀಯ ಪ್ರಜೆಗಳೂ ಸೇರಿದಂತೆ 17 ಸಿಬ್ಬಂದಿ ಹಡಗಿನಲ್ಲಿದ್ದರು. ಲಭ್ಯವಿರುವ ಮಾಹಿತಿ ಪ್ರಕಾರ, ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಒಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದೆ.

ಕೇರಳದ 26 ವರ್ಷದ ನಾವಿಕ ಅಖಿಲ್ ಜೋಯನ್ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬರು. ಕಾಸರಗೋಡಿನ ವೆಲ್ಲರಿಕುಂಡುವಿನ ಎಕೆಜಿ ನಗರದವರಾದ ಇವರು ಕಳೆದ ಐದು ವರ್ಷಗಳಿಂದ ನಾವಿಕನಾಗಿ ಕೆಲಸ ಮಾಡುತ್ತಿದ್ದರು. ಆಹಾರ ಧಾನ್ಯಗಳನ್ನು ಸಾಗಿಸುತ್ತಿದ್ದ ಗಿನಿಯಾ-ಬಿಸ್ಸೌ ಧ್ವಜದ ಎಂವಿ ಗೋಲ್ಡನ್ ಲಿಯೋ ಹಡಗಿನಲ್ಲಿದ್ದ ಸಿಬ್ಬಂದಿಯಲ್ಲಿ ಇವರು ಒಬ್ಬರಾಗಿದ್ದರು. ಈ ಹಡಗಿನಲ್ಲಿ ಭಾರತ ಮತ್ತು ಸಿರಿಯಾದ ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

“ಉಕ್ರೇನ್‌ನಲ್ಲಿರುವ ನಮ್ಮ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ಹಾಗೂ ಆಡಳಿತಾತ್ಮಕ ಸಹಾಯವನ್ನು ಒದಗಿಸಲು ನಿರಂತರ ಶ್ರಮಿಸುತ್ತಿದೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಹಾಗೇ, ವಿದೇಶಾಂಗ ಸಚಿವಾಲಯವು ಮೃತರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಗಾಯಗೊಂಡಿರುವ ನಾವಿಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.

ದಾಳಿಯನ್ನು ತೀವ್ರವಾಗಿ ಖಂಡಿಸಿದ ಭಾರತ: ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಈ ಹಿಂಸಾಚಾರವನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ನಾಗರಿಕ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು ಮತ್ತು ಅವರ ಜೀವಕ್ಕೆ ಆಪತ್ತು ತರುವುದು ತೀವ್ರ ಖಂಡನೀಯ ಎಂದು ಭಾರತ ಹೇಳಿದೆ. ಮುಕ್ತ ಸಮುದ್ರಯಾನದ ಸ್ವಾತಂತ್ರ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಅಡ್ಡಿಪಡಿಸುವ ಇಂತಹ ಕೃತ್ಯಗಳು ಅತ್ಯಂತ ವಿಷಾದಕರವಾಗಿದ್ದು, ಇಂತಹ ದಾಳಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಚಿವಾಲಯವು ತನ್ನ ಅಧಿಕೃತ ಹೇಳಿಕೆಯಲ್ಲಿ ಹೇಳಿದೆ.

UPDATE: First responders now on scene of the burning vessel — but it may be too late for this badly damaged ship. Another ship pulled alongside to assist.
A violent day in Odesa: at least two fast-flying rockets heard streaking over the city centre, unimpeded. #Ukraine #Odesa pic.twitter.com/fD53dfo1rX

— Michael Bociurkiw (@WorldAffairsPro) July 19, 2026

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

Next Post

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

Related Posts

ಅಮರನಾಥ ಯಾತ್ರಿಕ ರಾತ್ರಿ ಫುಟ್​ಪಾತ್​ ಮೇಲೆ ಮಲಗಿದ್ದಾಗ ಹಾವು ಕಡಿದು ಸಾವು
ರಾಷ್ಟ್ರೀಯ ಸುದ್ದಿ

ಅಮರನಾಥ ಯಾತ್ರಿಕ ರಾತ್ರಿ ಫುಟ್​ಪಾತ್​ ಮೇಲೆ ಮಲಗಿದ್ದಾಗ ಹಾವು ಕಡಿದು ಸಾವು

July 7, 2026
57
ವಯನಾಡ್​ ಸುರಂಗ ಯೋಜನಾ ಸ್ಥಳದಲ್ಲಿ ಭೀಕರ ಭೂಕುಸಿತ; ಮೂವರು ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
ರಾಷ್ಟ್ರೀಯ ಸುದ್ದಿ

ವಯನಾಡ್​ ಸುರಂಗ ಯೋಜನಾ ಸ್ಥಳದಲ್ಲಿ ಭೀಕರ ಭೂಕುಸಿತ; ಮೂವರು ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

July 7, 2026
47
Next Post
ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

Discussion about this post

Recent News

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

July 21, 2026
22
ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

July 21, 2026
41
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

ಮಂಗಳೂರು: ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್‌ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ

July 21, 2026
ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

ಉಕ್ರೇನ್‌ನ ಒಡೆಸಾದಲ್ಲಿ ವಾಣಿಜ್ಯ ನೌಕೆ ಮೇಲೆ ಕ್ಷಿಪಣಿ ದಾಳಿ; ಕೇರಳದ ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಸಾವು

July 21, 2026
FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

July 20, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d