ಇರಾನ್ : ಇರಾನ್‌ನ ಕಠಿಣ ಹಿಜಾಬ್ ಕಾನೂನುಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕಾಗಿ ಕಳೆದ ವಾರ ಟೆಹ್ರಾನ್‌ನಲ್ಲಿ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾದ 22 ವರ್ಷದ ಯುವತಿ ಮಹ್ಸಾ ಅಮಿನಿ ಎಂಬುವರು ಕೋಮಾಕ್ಕೆ ಜಾರಿ ಬಳಿಕ ಸಾವನ್ನಪ್ಪಿದ್ದರು. ಆಕೆಯ ಸಾವನ್ನು ವಿರೋಧಿಸಿ ಇರಾನ್‌ನಲ್ಲಿ ಭಾರಿ ಪ್ರಮಾಣ ಪ್ರತಿಭಟನೆ ನಡೆಯುತ್ತಿದ್ದು ವಿಶ್ವಾದ್ಯಂತ ಇರಾನ್ ಮಹಿಳೆಯರ ಹಕ್ಕುಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ತಲೆಕೂದಲು ಕತ್ತರಿಸಿ ಇರಾನ್ ಮಹಿಳೆಯರಿಂದ ತೀವ್ರ ಆಕ್ರೋಶ: ಅಮಿನಿ ಹತ್ಯೆಯನ್ನು ವಿರೋಧಿಸಿದ ಇರಾನ್ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿಕೊಂಡು, ಹಿಜಾಬ್ ತೆಗೆದು ಖಂಡನೆ ವ್ಯಕ್ತಪಡಿಸುವ ಮೂಲಕ ಭಾರಿ ಆಕ್ರೋಶ ಹೊರಹಾಕಿದ್ದಾರೆ. 2005 ರಲ್ಲಿ ಜಾರಿಗೆ ತಂದ ನಿಯಮಗಳ ಪ್ರಕಾರ, ದೇಶದ ನೈತಿಕ ಪೊಲೀಸರು ಹಿಜಾಬ್ ಕಾನೂನುಗಳನ್ನು ಹೇರುವ ಜವಾಬ್ದಾರಿ ಹೊಂದಿದ್ದಾರೆ. ಅಯತೊಲ್ಲಾ ಖಮೇನಿಯ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್ 1979 ರಲ್ಲಿ ಜನಾಭಿಪ್ರಾಯ ಸಂಗ್ರಹಿದ ಬಳಿಕ ದೇಶದಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಅಂದರೆ ತಲೆಯನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು.
‘ಲಿಂಗ ತಾರತಮ್ಯದ ಕ್ರಮದಿಂದ ಬೇಸತ್ತು ಹೋಗಿದ್ದೇವೆ’: ಅಂದಿನಿಂದ ದೇಶದಲ್ಲಿ ಕಠಿಣ ಇಸ್ಲಾಮಿಕ್ ಕಾನೂನುಗಳು ಜಾರಿಯಲ್ಲಿವೆ. ಮಹಿಳೆಯರು ತಮ್ಮ ಮನೆಯಿಂದ ಹೊರ ಹೋದಾಗ ಬಟ್ಟೆಯಿಂದ ತಲೆ ಮುಚ್ಚಿಕೊಳ್ಳುವುದು ಕಡ್ಡಾಯ. ಚಿಕ್ಕ ವಯಸ್ಸಿನಿಂದಲೇ ನಾವು ಹಿಜಾಬ್ ಧರಿಸದೇ ಹೋದರೆ ನಮಗೆ ಶಾಲೆಗೆ ಹೋಗುವ ಅವಕಾಶವಿಲ್ಲ ಮತ್ತು ನೌಕರಿಯೂ ಸಿಗುವುದಿಲ್ಲ, ಲಿಂಗ ತಾರತಮ್ಯದ ಈ ಆಳ್ವಿಕೆಯಿಂದ ನಾವು ಬೇಸತ್ತು ಹೋಗಿದ್ದೇವೆ ಎಂದು ಪ್ರತಿಭಟನಾನಿರತ ಕೆಲ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
In Kerman's Azadi Square tonight, a woman sits on top of a utility box, takes off her headscarf and cuts her hair as people chant "death to the dictator" on the fifth night of protests in Iran over the death of #MahsaAmini in custody of morality police.pic.twitter.com/3zZuZkkom1
— Shayan Sardarizadeh (@Shayan86) September 20, 2022
ಜಗತ್ತಿನೆಲ್ಲೆಡೆಯಿಂದ ಹಿಜಾಬ್‌ಗೆ ವಿರೋಧ: ಇಸ್ಲಾಮಿಕ್ ಕಾನೂನು ಅಳವಡಿಕೆ ಕುರಿತು ಭುಗಿಲೆದ್ದ ಪ್ರತಿಭಟನೆಗೆ ಇತರೆ ದೇಶಗಳಲ್ಲಿ ನೆಲೆಸಿರುವ ಇರಾನಿಯನ್ ಮಹಿಳೆಯರೂ ಸಹ ಬೆಂಬಲ ಸೂಚಿಸಿದ್ದಾರೆ. ಇರಾನಿನ ಪತ್ರಕರ್ತ ಮಸಿಹ್ ಅಲಿನೆಜಾದ್ ಸದ್ಯಕ್ಕೆ ಯುಎಸ್ನಲ್ಲಿ ನೆಲೆಸಿದ್ದು, ಅವರನ್ನು 1994 ರಲ್ಲಿ ಟೆಹ್ರಾನ್‌ನಲ್ಲಿ ಸರ್ಕಾರಿ ವಿರೋಧಿ ಕರಪತ್ರಗಳನ್ನು ಮುದ್ರಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಇರಾನಿನ ಮಹಿಳೆಯರಿಗೆ ಸಂಬಂಧಿಸಿದ ಹಿಜಾಬ್ ನಿಯಮಗಳು ಮತ್ತು ಇತರೆ ಹಕ್ಕುಗಳ ವಿರುದ್ಧ ಅವರು ಧ್ವನಿಯೆತ್ತಿದ್ದರು. ಕುತೂಹಲಕಾರಿ ವಿಷಯವೇನೆಂದ್ರೆ, ಅಲ್ಲಿ ಕೇವಲ ಹಿಜಾಬ್ ನಿಯಮಗಳಷ್ಟೇ ಮಹಿಳೆಯರ ಮೇಲೆ ಹೇರಲಾಗುತ್ತಿಲ್ಲ, ಜೊತೆಗೆ ಮಹಿಳೆಯರು ಒಬ್ಬಂಟಿಯಾಗಿ ಹಾಡುಗಳನ್ನು ಹಾಡುವುದಕ್ಕೂ ಸಹ ಕಡಿವಾಣ ಹಾಕಲಾಗಿದೆ.
ಇರಾನ್ ಮಹಿಳೆಯರಿಂದ ನಿರ್ಭೀತ ಆಕ್ರೋಶ, ಪ್ರತಿಭಟನೆ: ಮಹ್ಸಾ ಅವರ ಸಾವಿನ ಬಳಿಕ ಇರಾನಿನ ಮಹಿಳೆಯರು ಸರ್ಕಾರದ ಬಗ್ಗೆ ಮತ್ತು ಮಾನವ ಹಕ್ಕುಗಳ ನೀತಿಗಳ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ಬಹಿರಂಗಪಡಿಸುತ್ತಿದ್ದಾರೆ. ರಾಷ್ಟ್ರದ ಕಟ್ಟುನಿಟ್ಟಾದ ಧಾರ್ಮಿಕ ನಿಯಮಗಳನ್ನು ಧಿಕ್ಕರಿಸಿ ಬರೀ ತಲೆ ಮತ್ತು ತಲೆಗೆ ರುಮಾಲು ಸುತ್ತಿರುವುದನ್ನು ಬೀಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಸರ್ಕಾರದ ವಿರುದ್ಧ ನಿರ್ಭೀತಿಯಿಂದ ಇರಾನ್ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಧಾನ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post