• About us
  • Contact us
  • Disclaimer
Saturday, May 9, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಂಚಾರಿ ಪೊಲೀಸ್ ಎಂದು ಹೇಳಿಕೊಂಡು ದಂಡ ವಸೂಲಿ ಮಾಡುತ್ತಿದ್ದ ಅರಣ್ಯ ಅಧಿಕಾರಿಗೆ ಸಾರ್ವಜನಿಕರಿಂದ ಥಳಿತ

Coastal Times by Coastal Times
September 21, 2022
in ರಾಜ್ಯ
ಸಂಚಾರಿ ಪೊಲೀಸ್ ಎಂದು ಹೇಳಿಕೊಂಡು ದಂಡ ವಸೂಲಿ ಮಾಡುತ್ತಿದ್ದ ಅರಣ್ಯ ಅಧಿಕಾರಿಗೆ ಸಾರ್ವಜನಿಕರಿಂದ ಥಳಿತ
55
VIEWS
WhatsappTelegramShare on FacebookShare on Twitter

ಬಳ್ಳಾರಿ: ಬಳ್ಳಾರಿ ವಿಭಾಗದ ಅರಣ್ಯ ಅಧಿಕಾರಿಯೊಬ್ಬರು ರಾಜ್ಯ ಅರಣ್ಯ ಇಲಾಖೆಗೆ ಮುಜುಗರ ಉಂಟು ಮಾಡುವಂತೆ ಮಾಡಿದ್ದು, ತಾನು ಬಳ್ಳಾರಿ ಸಂಚಾರಿ ಪೋಲೀಸರಂತೆ ಪೋಸು ಕೊಟ್ಟು, ವಾಹನ ಸವಾರರಿಂದ ಹಣ ವಸೂಲಿ ಮಾಡಿದ್ದಕ್ಕೆ ಸಾರ್ವಜನಿಕರು ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.  ಪೊಲೀಸ್‌ ಅಧಿಕಾರಿಯ ಬಗ್ಗೆ ಅನುಮಾನಗೊಂಡ ಸಾರ್ವಜನಿಕರು, ಆರೋಪಿ ಉಪ ವಲಯ ಅರಣ್ಯಾಧಿಕಾರಿಯನ್ನು ಹಿಡಿದ ಥಳಿಸಿದ ಘಟನೆ ಸೋಮವಾರ ಬಳ್ಳಾರಿ ನಗರದಲ್ಲಿ ವರದಿಯಾಗಿದೆ.ಆರೋಪಿ ಅಧಿಕಾರಿ ಭಾನುವಾರ ‘ಡ್ಯೂಟಿ’ಯಲ್ಲಿದ್ದು, ಹಲವು ವಾಹನ ಚಾಲಕರಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಬಳ್ಳಾರಿಯ ಮೋತಿ ಸರ್ಕಲ್‌ನ ಸ್ಥಳೀಯರು ಮತ್ತು ಉದ್ಯಮಿಗಳು ಮಾಹಿತಿ ನೀಡಿದ್ದಾರೆ. “ಸೋಮವಾರವೂ ಅವರು ಸಂಚಾರಿ ಪೋಲೀಸ್ ರೀತಿ ಪೋಸ್ ನೀಡುವುದನ್ನು ಮುಂದುವರೆಸಿದ್ದರು ಮತ್ತು ಕಾನೂನು ಉಲ್ಲಂಘಿಸುವ ವಾಹನ ಚಾಲಕರಿಂದ ಹಣ ವಸೂಲಿ ಮಾಡಿದರು. ಸ್ವಲ್ಪ ಸಮಯದ ನಂತರ ಅವರು ಕ್ಯಾಂಟೀನ್‌ಗೆ ಬಂದು ಹಣಕ್ಕಾಗಿ ಬೇಡಿಕೆಯಿಟ್ಟರು. ತಾವು ಈ ಪ್ರದೇಶಕ್ಕೆ ಹೊಸಬರೇ? ಎಂದು ಕ್ಯಾಂಟೀನ್ ಮಾಲೀಕರು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಅವರು ನಕಲಿ ಐಡಿ ಹೊಂದಿದ್ದರು ಮತ್ತು ಹೋಟೆಲ್‌ನಲ್ಲಿ ಕುಳಿತಿದ್ದ ಜನರಿಗೆ ಗನ್(ಆಟಿಕೆ ಗನ್) ತೋರಿಸಿದರು”ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಅವರು ಬಂದೂಕು ತೋರಿಸಿದ ನಂತರ ಸಾರ್ವಜನಿಕರು ಆಕ್ರೋಶಗೊಂಡರು ಮತ್ತು ಕೆಲವರು ಅವರನ್ನು ಹಿಡಿದು ಗನ್ ಕಿತ್ತುಕೊಂಡರು. ಆದರೆ ಅದು ಆಟಿಕೆ ಗನ್ ಎಂದು ತಿಳಿಯಿತು. ನಂತರ ಅವರು ನಕಲಿ ಪೊಲೀಸ್ ಅಧಿಕಾರಿ ಎಂದು ಶಂಕಿಸಿ ಅವರನ್ನು ಥಳಿಸಲು ಪ್ರಾರಂಭಿಸಿದರು. ಆದರೆ ಬಳ್ಳಾರಿ ಜಿಲ್ಲೆಯ ವಿಜಿಲೆನ್ಸ್ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಅವರನ್ನು ರಕ್ಷಿಸಿತು. ಪೊಲೀಸರು ಅರಣ್ಯ ಅಧಿಕಾರಿಯನ್ನು ವಶಕ್ಕೆ ಪಡೆದು ಗಾಂಧಿನಗರ ಠಾಣೆಗೆ ಕರೆದೊಯ್ದಿದ್ದಾರೆ. ಅರಣ್ಯಾಧಿಕಾರಿ ವಿರುದ್ಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  “ಕ್ಯಾಂಟೀನ್ ಮಾಲೀಕರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ, ಪೊಲೀಸರಂತೆ ಪೋಸ್ ಕೊಟ್ಟು ಲಂಚಕ್ಕೆ ಬೇಡಿಕೆಯಿಟ್ಟ ಅರಣ್ಯಾಧಿಕಾರಿ ವಿರುದ್ಧ ಕೇಸ್ ದಾಖಲಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ನಾವು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುತ್ತೇವೆ ಎಂದು ಬಳ್ಳಾರಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಲಷ್ಕರ್‌ ಎ ತಯ್ಯಬಾ ಹಾಗೂ ತಾಲಿಬಾನ್ ಪರವಾಗಿ ಗೋಡೆ ಬರಹ ಬರೆದಿದ್ದವ ಐಸಿಸ್ ಸಂಘಟನೆ ಜೊತೆ ನಂಟು; ಶಿವಮೊಗ್ಗದಲ್ಲಿ ಇಬ್ಬರ ಬಂಧನ

Next Post

ಮುಸ್ಲಿಂ ರಾಷ್ಟ್ರದಲ್ಲಿ ಕಡ್ಡಾಯ ಹಿಜಾಬ್ ಧರಿಸುವ ನೀತಿಯ ವಿರೋಧಿಸಿ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿ ಪ್ರತಿಭಟನೆ

Related Posts

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ
ರಾಜ್ಯ

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

April 30, 2026
22
ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,
ರಾಜ್ಯ

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,

February 14, 2026
72
Next Post
ಮುಸ್ಲಿಂ ರಾಷ್ಟ್ರದಲ್ಲಿ ಕಡ್ಡಾಯ ಹಿಜಾಬ್ ಧರಿಸುವ ನೀತಿಯ ವಿರೋಧಿಸಿ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿ ಪ್ರತಿಭಟನೆ

ಮುಸ್ಲಿಂ ರಾಷ್ಟ್ರದಲ್ಲಿ ಕಡ್ಡಾಯ ಹಿಜಾಬ್ ಧರಿಸುವ ನೀತಿಯ ವಿರೋಧಿಸಿ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿ ಪ್ರತಿಭಟನೆ

Discussion about this post

Recent News

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

May 9, 2026
62
ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

May 8, 2026
50
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

May 9, 2026
ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

May 8, 2026
ಮಂಗಳೂರು- ತಣ್ಣೀರುಬಾವಿಗೆ ಸಂಪರ್ಕಿಸುವ ನೂತನ ಸೇತುವೆ ಸೆಪ್ಟೆಂಬರ್ ಅಂತ್ಯಕ್ಕೆ ಲೋಕಾರ್ಪಣೆ – ಸಚಿವ ದಿನೇಶ್ ಗುಂಡೂರಾವ್

ಮಂಗಳೂರು- ತಣ್ಣೀರುಬಾವಿಗೆ ಸಂಪರ್ಕಿಸುವ ನೂತನ ಸೇತುವೆ ಸೆಪ್ಟೆಂಬರ್ ಅಂತ್ಯಕ್ಕೆ ಲೋಕಾರ್ಪಣೆ – ಸಚಿವ ದಿನೇಶ್ ಗುಂಡೂರಾವ್

May 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d