• About us
  • Contact us
  • Disclaimer
Wednesday, July 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮುಸ್ಲಿಂ ರಾಷ್ಟ್ರದಲ್ಲಿ ಕಡ್ಡಾಯ ಹಿಜಾಬ್ ಧರಿಸುವ ನೀತಿಯ ವಿರೋಧಿಸಿ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿ ಪ್ರತಿಭಟನೆ

Coastal Times by Coastal Times
September 21, 2022
in ವಿದೇಶಿ ಸುದ್ದಿ
ಮುಸ್ಲಿಂ ರಾಷ್ಟ್ರದಲ್ಲಿ ಕಡ್ಡಾಯ ಹಿಜಾಬ್ ಧರಿಸುವ ನೀತಿಯ ವಿರೋಧಿಸಿ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿ ಪ್ರತಿಭಟನೆ
58
VIEWS
WhatsappTelegramShare on FacebookShare on Twitter

ಇರಾನ್ : ಇರಾನ್‌ನ ಕಠಿಣ ಹಿಜಾಬ್ ಕಾನೂನುಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕಾಗಿ ಕಳೆದ ವಾರ ಟೆಹ್ರಾನ್‌ನಲ್ಲಿ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾದ 22 ವರ್ಷದ ಯುವತಿ ಮಹ್ಸಾ ಅಮಿನಿ ಎಂಬುವರು ಕೋಮಾಕ್ಕೆ ಜಾರಿ ಬಳಿಕ ಸಾವನ್ನಪ್ಪಿದ್ದರು. ಆಕೆಯ ಸಾವನ್ನು ವಿರೋಧಿಸಿ ಇರಾನ್‌ನಲ್ಲಿ ಭಾರಿ ಪ್ರಮಾಣ ಪ್ರತಿಭಟನೆ ನಡೆಯುತ್ತಿದ್ದು ವಿಶ್ವಾದ್ಯಂತ ಇರಾನ್​ ಮಹಿಳೆಯರ ಹಕ್ಕುಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ತಲೆಕೂದಲು ಕತ್ತರಿಸಿ ಇರಾನ್ ಮಹಿಳೆಯರಿಂದ ತೀವ್ರ ಆಕ್ರೋಶ: ಅಮಿನಿ ಹತ್ಯೆಯನ್ನು ವಿರೋಧಿಸಿದ ಇರಾನ್ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿಕೊಂಡು, ಹಿಜಾಬ್ ತೆಗೆದು ಖಂಡನೆ ವ್ಯಕ್ತಪಡಿಸುವ ಮೂಲಕ ಭಾರಿ ಆಕ್ರೋಶ ಹೊರಹಾಕಿದ್ದಾರೆ. 2005 ರಲ್ಲಿ ಜಾರಿಗೆ ತಂದ ನಿಯಮಗಳ ಪ್ರಕಾರ, ದೇಶದ ನೈತಿಕ ಪೊಲೀಸರು ಹಿಜಾಬ್ ಕಾನೂನುಗಳನ್ನು ಹೇರುವ ಜವಾಬ್ದಾರಿ ಹೊಂದಿದ್ದಾರೆ. ಅಯತೊಲ್ಲಾ ಖಮೇನಿಯ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್ 1979 ರಲ್ಲಿ ಜನಾಭಿಪ್ರಾಯ ಸಂಗ್ರಹಿದ ಬಳಿಕ ದೇಶದಲ್ಲಿ ಮಹಿಳೆಯರು ಹಿಜಾಬ್​ ಧರಿಸುವುದು ಅಂದರೆ ತಲೆಯನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು.

‘ಲಿಂಗ ತಾರತಮ್ಯದ ಕ್ರಮದಿಂದ ಬೇಸತ್ತು ಹೋಗಿದ್ದೇವೆ’: ಅಂದಿನಿಂದ ದೇಶದಲ್ಲಿ ಕಠಿಣ ಇಸ್ಲಾಮಿಕ್ ಕಾನೂನುಗಳು ಜಾರಿಯಲ್ಲಿವೆ. ಮಹಿಳೆಯರು ತಮ್ಮ ಮನೆಯಿಂದ ಹೊರ ಹೋದಾಗ ಬಟ್ಟೆಯಿಂದ ತಲೆ ಮುಚ್ಚಿಕೊಳ್ಳುವುದು ಕಡ್ಡಾಯ. ಚಿಕ್ಕ ವಯಸ್ಸಿನಿಂದಲೇ ನಾವು ಹಿಜಾಬ್ ಧರಿಸದೇ ಹೋದರೆ ನಮಗೆ ಶಾಲೆಗೆ ಹೋಗುವ ಅವಕಾಶವಿಲ್ಲ ಮತ್ತು ನೌಕರಿಯೂ ಸಿಗುವುದಿಲ್ಲ, ಲಿಂಗ ತಾರತಮ್ಯದ ಈ ಆಳ್ವಿಕೆಯಿಂದ ನಾವು ಬೇಸತ್ತು ಹೋಗಿದ್ದೇವೆ ಎಂದು ಪ್ರತಿಭಟನಾನಿರತ ಕೆಲ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

In Kerman's Azadi Square tonight, a woman sits on top of a utility box, takes off her headscarf and cuts her hair as people chant "death to the dictator" on the fifth night of protests in Iran over the death of #MahsaAmini in custody of morality police.pic.twitter.com/3zZuZkkom1

— Shayan Sardarizadeh (@Shayan86) September 20, 2022

 ಜಗತ್ತಿನೆಲ್ಲೆಡೆಯಿಂದ ಹಿಜಾಬ್‌ಗೆ ವಿರೋಧ: ಇಸ್ಲಾಮಿಕ್ ಕಾನೂನು ಅಳವಡಿಕೆ ಕುರಿತು ಭುಗಿಲೆದ್ದ ಪ್ರತಿಭಟನೆಗೆ ಇತರೆ ದೇಶಗಳಲ್ಲಿ ನೆಲೆಸಿರುವ ಇರಾನಿಯನ್​ ಮಹಿಳೆಯರೂ ಸಹ ಬೆಂಬಲ ಸೂಚಿಸಿದ್ದಾರೆ. ಇರಾನಿನ ಪತ್ರಕರ್ತ ಮಸಿಹ್ ಅಲಿನೆಜಾದ್ ಸದ್ಯಕ್ಕೆ ಯುಎಸ್​ನಲ್ಲಿ ನೆಲೆಸಿದ್ದು, ಅವರನ್ನು 1994 ರಲ್ಲಿ ಟೆಹ್ರಾನ್‌ನಲ್ಲಿ ಸರ್ಕಾರಿ ವಿರೋಧಿ ಕರಪತ್ರಗಳನ್ನು ಮುದ್ರಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಇರಾನಿನ ಮಹಿಳೆಯರಿಗೆ ಸಂಬಂಧಿಸಿದ ಹಿಜಾಬ್ ನಿಯಮಗಳು ಮತ್ತು ಇತರೆ ಹಕ್ಕುಗಳ ವಿರುದ್ಧ ಅವರು ಧ್ವನಿಯೆತ್ತಿದ್ದರು. ಕುತೂಹಲಕಾರಿ ವಿಷಯವೇನೆಂದ್ರೆ, ಅಲ್ಲಿ ಕೇವಲ ಹಿಜಾಬ್​ ನಿಯಮಗಳಷ್ಟೇ ಮಹಿಳೆಯರ ಮೇಲೆ ಹೇರಲಾಗುತ್ತಿಲ್ಲ, ಜೊತೆಗೆ ಮಹಿಳೆಯರು ಒಬ್ಬಂಟಿಯಾಗಿ ಹಾಡುಗಳನ್ನು ಹಾಡುವುದಕ್ಕೂ ಸಹ ಕಡಿವಾಣ​ ಹಾಕಲಾಗಿದೆ.

ಇರಾನ್ ಮಹಿಳೆಯರಿಂದ ನಿರ್ಭೀತ ಆಕ್ರೋಶ, ಪ್ರತಿಭಟನೆ: ಮಹ್ಸಾ ಅವರ ಸಾವಿನ ಬಳಿಕ ಇರಾನಿನ ಮಹಿಳೆಯರು ಸರ್ಕಾರದ ಬಗ್ಗೆ ಮತ್ತು ಮಾನವ ಹಕ್ಕುಗಳ ನೀತಿಗಳ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ಬಹಿರಂಗಪಡಿಸುತ್ತಿದ್ದಾರೆ. ರಾಷ್ಟ್ರದ ಕಟ್ಟುನಿಟ್ಟಾದ ಧಾರ್ಮಿಕ ನಿಯಮಗಳನ್ನು ಧಿಕ್ಕರಿಸಿ ಬರೀ ತಲೆ ಮತ್ತು ತಲೆಗೆ ರುಮಾಲು ಸುತ್ತಿರುವುದನ್ನು ಬೀಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಸರ್ಕಾರದ ವಿರುದ್ಧ ನಿರ್ಭೀತಿಯಿಂದ ಇರಾನ್ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಧಾನ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಸಂಚಾರಿ ಪೊಲೀಸ್ ಎಂದು ಹೇಳಿಕೊಂಡು ದಂಡ ವಸೂಲಿ ಮಾಡುತ್ತಿದ್ದ ಅರಣ್ಯ ಅಧಿಕಾರಿಗೆ ಸಾರ್ವಜನಿಕರಿಂದ ಥಳಿತ

Next Post

ಕಿಟಕಿ ಮುರಿದು ರಾತ್ರೋರಾತ್ರಿ ಹಾಸ್ಟೆಲ್ ನಿಂದ ಪರಾರಿಯಾದ ವಿದ್ಯಾರ್ಥಿನಿಯರು!

Related Posts

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ
ವಿದೇಶಿ ಸುದ್ದಿ

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

July 15, 2026
17
ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ
ವಿದೇಶಿ ಸುದ್ದಿ

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

March 1, 2026
77
Next Post
ಕಿಟಕಿ ಮುರಿದು ರಾತ್ರೋರಾತ್ರಿ ಹಾಸ್ಟೆಲ್ ನಿಂದ ಪರಾರಿಯಾದ ವಿದ್ಯಾರ್ಥಿನಿಯರು!

ಕಿಟಕಿ ಮುರಿದು ರಾತ್ರೋರಾತ್ರಿ ಹಾಸ್ಟೆಲ್ ನಿಂದ ಪರಾರಿಯಾದ ವಿದ್ಯಾರ್ಥಿನಿಯರು!

Discussion about this post

Recent News

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
68
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
36
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

July 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d