• About us
  • Contact us
  • Disclaimer
Monday, July 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ: 3ನೇ ಅಪರಾಧಿ ಅರಾಫತ್ ಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್

Coastal Times by Coastal Times
April 22, 2026
in ಕ್ರೈಮ್ ನ್ಯೂಸ್
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ: 3ನೇ ಅಪರಾಧಿ ಅರಾಫತ್ ಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್
8
VIEWS
WhatsappTelegramShare on FacebookShare on Twitter

ಬೆಂಗಳೂರು:2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ಸಮೀಪ ತುಂಗಾ ನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಅರಾಫತ್ ಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಈಗಾಗಲೇ ಇಬ್ಬರು ಅಪರಾಧಿಗಳಿಗೆ ತಲಾ 6 ವರ್ಷ ಶಿಕ್ಷೆ ವಿಧಿಸಲಾಗಿದೆ.

ತೀರ್ಥಹಳ್ಳಿ ಮೂಲದ ಅರಾಫತ್ ಅಲಿಯನ್ನು ಕೀನ್ಯಾ ನೈರೊಬಿಯಾದಿಂದ ದೆಹಲಿಗೆ ಬಂದಾಗ ಎನ್ಐಎ ಅಧಿಕಾರಿಗಳು 2023ರಲ್ಲಿ ಬಂಧಿಸಿದ್ದರು. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಕುರಿತು ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.

ವಾದ-ಪ್ರತಿವಾದ ಆಲಿಸಿದ ನ್ಯಾ.ಕೆಂಪರಾಜು, ಅಪರಾಧಿಗೆ 6 ವರ್ಷ ಸಜೆ ಹಾಗೂ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ 2025ರಲ್ಲಿ ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಒಟ್ಟು ಮೂವರಿಗೆ ಸಜೆಯಾಗಿದ್ದು, ಉಳಿದ 9 ಮಂದಿ ಶಂಕಿತರ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪರಾಧಿ ಅರಾಫತ್ ನನ್ನ 2019ರಲ್ಲಿ ಬೆಂಗಳೂರಿನಲ್ಲಿ ಇದೇ ಪ್ರಕರಣದ ಶಂಕಿತ ಮುಸಾವೀರ್ ಹುಸೇನ್ ಶಾಹೀಬ್ (ಎ-11) ಹಾಗೂ ಅಬ್ದುಲ್ ಮತೀನ್ ತಾಹ (ಎ-12) ಅವರನ್ನು ಭೇಟಿ ಮಾಡಿ ಉಗ್ರ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದರು. ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯ ಸದಸ್ಯನಾಗಿ ನೇಮಿಸಿಕೊಂಡಿದ್ದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ನಾಶಪಡಿಸಿ ಅಶಾಂತಿ ಸೃಷ್ಟಿ ಹಾಗೂ ಹಿಂದುತ್ವವನ್ನು ಕುಗ್ಗಿಸುವ ಉದ್ದೇಶ ಹಿನ್ನೆಲೆಯಲ್ಲಿ ಉಗ್ರ ಕೃತ್ಯಗಳಿಗೆ ಒಳಸಂಚು ರೂಪಿಸಿದ್ದ.

ಅರಾಫತ್​ ಅಲಿ, ಯುವಕರನ್ನು ಐಸಿಸ್​ ಸಂಘಟನೆಗೆ ನೇಮಕಾತಿ ಜವಾಬ್ದಾರಿ ಹೊತ್ತುಕೊಂಡಿದ್ದ. ಇದೇ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಶಾರೀಕ್ ಹಾಗೂ ಮಾಜ್ ಮುನೀರ್ ನನ್ನ ಉಗ್ರ ಸಂಘಟನೆಗೆ ಸೇರಿಸಿ ಸಕ್ರಿಯನಾಗಿಸಿದ್ದ. ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬಾಂಬ್​ ಸ್ಫೋಟ, ಕೇಂದ್ರದ ಸಿಎಎ ಹಾಗೂ ಎನ್ಆರ್ ಸಿ ವಿರೋಧಿಸಿ ಕದ್ರಿ ಗೋಡೆಗಳ ಮೇಲೆ ಆಕ್ಷೇಪಾರ್ಹ ಬರಹ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ನಿರಂತರ ಸಂಪರ್ಕದಲ್ಲಿದ್ದು, ಹಣಕಾಸಿನ ನೆರವು ಒದಗಿಸಿದ್ದ. ಸಂಚಿನ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿದ್ದ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ಧಾರೆ.

ಎನ್ಐಎ ಅಧಿಕಾರಿಗಳು ಉಗ್ರರ ಹಿಂದೂ ಮಾಡ್ಯೂಲ್ ಬೇಧಿಸಿ ಮುಸಾವೀರ್ ಹಾಗೂ ಅಬ್ದುಲ್ ಮತೀನ್‌ನೊಂದಿಗೆ ನಂಟು ತಿಳಿಯುತ್ತಿದ್ದಂತೆ ಬಂಧನ ಭೀತಿಯಿಂದ ಅರಾಫತ್ 2020ರಲ್ಲಿ ವಿದೇಶಕ್ಕೆ ಪಲಾಯನ ಮಾಡಿದ್ದ. ವಿದೇಶದಲ್ಲಿದ್ದುಕೊಂಡೇ ಕರ್ನಲ್ ಹಾಗೂ ಹ್ಯಾಂಡ್ಲರ್​ಗಳ ಮೂಲಕ ಶಂಕಿತ ಉಗ್ರರಿಗೆ ಫಂಡಿಂಗ್ ಮಾಡುತ್ತಿದ್ದ. ಐಎಸ್ ಸಂಘಟನೆ ಪ್ರಚಾರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಭಯೋತ್ಪಾದಕ ಕೃತ್ಯಗಳಿಗೆ ವಿದೇಶದಲ್ಲೇ ಸಂಚು ರೂಪಿಸುತ್ತಿದ್ದ. 2024ರಲ್ಲಿ ದಿ ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುಸಾವೀರ್ ಹಾಗೂ ಅಬ್ದುಲ್ ಮತೀನ್‌ನನ್ನು 2024ರಲ್ಲಿ ಪಶ್ಚಿಮ ಬಂಗಾಳದ ಲಾಡ್ಜ್‌ವೊಂದರಲ್ಲಿ ಪೊಲೀಸರು ಬಂಧಿಸಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಅಮೃತಾನಂದಮಯಿ ದೇವಿ ಅಮ್ಮ ಮಂಗಳೂರಿಗೆ ಪೂರ್ವಭಾವಿ ಸಾಮೂಹಿಕ ಪ್ರಾರ್ಥನಾ ಸಭೆ ಹಾಗೂ ಶಿವಶಕ್ತಿ ಹೋಮ

Next Post

ಮಂಗಳೂರು: ಭಾರಿ ಗಾಳಿ-ಮಳೆಗೆ ಅಶ್ವತ್ಥ ಮರದ ಗೆಲ್ಲು ಮುರಿದು ಮನೆ, ವಾಹನಗಳಿಗೆ ಹಾನಿ, ಅತ್ತಾವರದಲ್ಲಿ ತಡೆಗೋಡೆ ಕುಸಿದು ಕಾರುಗಳು ಜಖಂ

Related Posts

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್
ಕ್ರೈಮ್ ನ್ಯೂಸ್

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

July 26, 2026
61
ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ
ಕ್ರೈಮ್ ನ್ಯೂಸ್

ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

July 25, 2026
98
Next Post
ಮಂಗಳೂರು: ಭಾರಿ ಗಾಳಿ-ಮಳೆಗೆ ಅಶ್ವತ್ಥ ಮರದ ಗೆಲ್ಲು ಮುರಿದು ಮನೆ, ವಾಹನಗಳಿಗೆ ಹಾನಿ, ಅತ್ತಾವರದಲ್ಲಿ ತಡೆಗೋಡೆ ಕುಸಿದು ಕಾರುಗಳು ಜಖಂ

ಮಂಗಳೂರು: ಭಾರಿ ಗಾಳಿ-ಮಳೆಗೆ ಅಶ್ವತ್ಥ ಮರದ ಗೆಲ್ಲು ಮುರಿದು ಮನೆ, ವಾಹನಗಳಿಗೆ ಹಾನಿ, ಅತ್ತಾವರದಲ್ಲಿ ತಡೆಗೋಡೆ ಕುಸಿದು ಕಾರುಗಳು ಜಖಂ

Discussion about this post

Recent News

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

July 26, 2026
61
ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

July 25, 2026
61
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

ಸಮಾಜಸೇವೆ ಸೋಗಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಡ್ರಗ್ಸ್​ ದಂಧೆ ಮಾಡುತ್ತಿದ್ದ ಜಲೀಲ್ ಬಾಬಾ ; ಮೊಬೈಲ್ ಸ್ವಿಚ್ಚ್ ಆಫ್ ಮಾಡಿ ಆರೋಪಿ ಎಸ್ಕೇಪ್

July 26, 2026
ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಷನ್‌ನಿಂದ ಸನ್ಮಾನ

July 25, 2026
ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

ಮಂಗಳೂರು: ಲಾಲ್ ಬಾಗ್ ಬಳಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ – ಆರೋಪಿಗಾಗಿ ಶೋಧ

July 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d