ಜಗತ್ತಿನಲ್ಲಿ ಅತೀ ಹೆಚ್ಚು ಯುವಶಕ್ತಿಗಳನ್ನು ಹೊಂದಿದ ರಾಷ್ಟ್ರವಾಗಿದೆ ಭಾರತ. ಈ ದೇಶದ ಯುವ ಸಂಪನ್ಮೂಲದ ಬೌದ್ಧಿಕ ಸಾಮರ್ಥ್ಯ, ಕೌಶಲ್ಯ, ಆಸಕ್ತಿ ಮತ್ತು ಸಮಯವನ್ನು ಸದ್ಭಳಕೆ ಮಾಡಲು ಅವರಿಗೆ ಶಿಕ್ಷಣ ಮತ್ತು ತರಬೇತಿ ನೀಡುತ್ತಿರುವ ಪುತ್ತೂರು ಕಮ್ಯೂನಿಟಿ ಸೆಂಟರಿನ ಕಾರ್ಯ ಶ್ಲಾಘನೀಯ ಎಂದು ಇತ್ತೀಚೆಗೆ ಭಾರತೀಯ ಸೈನ್ಯದಿಂದ ನಿವೃತ್ತರಾದ ಯೋಧ ವಿಜಯಕುಮಾರ್ ಪಡ್ಡಯ್ಯೂರು ಅಭಿಪ್ರಾಯ ಪಟ್ಟರು. ಅವರು ಸೆಂಟರಿಗೆ ಭೇಟಿ ಕೊಟ್ಟು ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು, ನೀವು ಬಲಿಷ್ಠ ಭಾರತದ ನಿರ್ಮಾಣಕ್ಕೆ ನಿಮ್ಮ ಜ್ಞಾನ ಮತ್ತು ಆಸಕ್ತಿಯನ್ನು ಬಳಸಬೇಕು, ಅದಕ್ಕಾಗಿ ನಿಮಗೆ ಬೇಕಾಗಿರುವ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನಾವು ನೀಡಲಿದ್ದೇವೆ ಎಂದರು.
ಕಮ್ಯುನಿಟಿ ಸೆಂಟರಿನ ಅಧ್ಯಕ್ಷರಾದ ಅಮ್ಜದ್ ಖಾನ್ ಪೊಳ್ಯ ಅವರು ವಿಜಯಕುಮಾರ್ ಮತ್ತು ನಾವು ಬಾಲ್ಯದ ಸ್ನೇಹಿತರು, ಜೊತೆಯಾಗಿ ಕ್ರಿಕೇಟ್ ಆಡಿದವರು, ನಮ್ಮ ಬಾಲ್ಯದ ಕಾಲದಲ್ಲಿ ನಮಗೆ ಬೇಕಾದಷ್ಟು ಅವಕಾಶಗಳು ಇತ್ತು. ಹಾಗಾಗಿ, ನಾನು ಉಧ್ಯಮದಲ್ಲಿ, ವಿಜಯ್ ಸೈನ್ಯದಲ್ಲಿ ಸೇರಿದರು. ಈಗ ಅವಕಾಶಗಳು ಸ್ಪರ್ಧಾತ್ಮಕವಾಗಿದೆ. ಸಮಾಜದ ಸಹಭಾಗಿತ್ವ ಮತ್ತು ಸಹಕಾರ ಕಡಿಮೆ ಇದೆ. ಹೀಗಾಗಿ ನೀವು ವಿಜ್ಞಾನ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಅತ್ಯಂತ ಕಷ್ಟಕರ ಸನ್ನಿವೇಶ ಎದುರಿಸಬೇಕಾದೀತು, ಹಾಗಾಗಿ, ನಿಮ್ಮ ಮೆದುಳಿನ ಯೋಚನೆ, ಆಸಕ್ತಿಗಳನ್ನು ಭವಿಷ್ಯದ ಸವಾಲನ್ನು ಎದುರಿಸಲು ರೂಪಿಸಬೇಕು ಎಂದರು. ಸೆಂಟರಿನ ಯೋಜನೆಯನ್ನು ವೀಕ್ಷಿಸಿದ ವಿಜಯಕುಮಾರ್ ಎಲ್ಲಾ ಸಮುದಾಯದ ವಿದ್ಯಾರ್ಥಿಗಳನ್ನೂ ಪ್ರೋತ್ಸಾಹಿಸುವ ಪ್ರಯತ್ನ ಇನ್ನಷ್ಟೂ ಹೆಚ್ಚಬೇಕು, ಯಾವುದೇ ಅಗತ್ಯಕ್ಕೂ ನನ್ನನ್ನು ಸಂಪರ್ಕಿಸಿ ನಾನು ಜೊತೆಗಿರುತ್ತೇನೆ ಎಂದು ಭರವಸೆ ನೀಡಿದರು.
Discover more from Coastal Times Kannada
Subscribe to get the latest posts sent to your email.
Discussion about this post