ಮಂಗಳೂರು, ಡಿ.22 : ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ದ.ಕ. ಜಿಲ್ಲೆಗೆ ಅನ್ವಯವಾಗುವಂತೆ ನಿಯಂತ್ರಣ ಕ್ರಮಗಳನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೊರಡಿಸಿದ್ದಾರೆ.
ದ.ಕ. ಜಿಲ್ಲಾಡಳಿತರ ಮಾರ್ಗಸೂಚಿಯಲ್ಲಿ ಏನಿದೆ:
* ಚರ್ಚ್ ಆವರಣದಲ್ಲಿ ಸಾಂಪ್ರಾದಾಯಿಕ ಪ್ರಾರ್ಥನೆ
* ಸಾಮೂಹಿಕ ಚಟುವಟಿಕೆಗಳಲ್ಲಿ ಕೋವಿಡ್ ನಿಯಮ ಕಡ್ಡಾಯ
* ಆಚರಣೆ, ಪ್ರಾರ್ಥನೆಗಳನ್ನು ಯಾವುದೇ ಸಾರ್ವಜನಿಕ, ರಸ್ತೆ, ಉದ್ಯಾನವದಲ್ಲಿ ಮಾಡುವಂತಿಲ್ಲ
* ಕ್ಲಬ್, ಪಬ್, ರೆಸ್ಟೋರೆಂಟ್, ಹೋಟೆಲ್, ಉದ್ಯಾನವನ, ಖಾಸಗಿ ಸ್ಥಳಗಳಲ್ಲಿ ಡಿಜೆ,
* ಆರ್ಕೆಸ್ಟ್ರಾ, ಸಮೂಹ ನೃತ್ಯ ಮುಂತಾದ ವಿಶೇಷ ಕಾರ್ಯಕ್ರಮಕ್ಕೆ ಅವಕಾಶವಿಲ್ಲ
* ಸಾರ್ವಜನಿಕ ಸ್ಥಳ, ರಸ್ತೆ, ಉದ್ಯಾನವನ, ಮೈದಾನದಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ
* ಪಬ್, ಹೋಟೆಲ್, ರೆಸ್ಟೋರೆಂಟ್, ಕ್ಲಬ್ ಎಂದಿನಂತೆ ಕಾರ್ಯನಿರ್ವಹಿಸಬಹುದು
* ಸಿಬ್ಬಂದಿಗಳು ಆರ್ ಟಿಪಿಸಿಆರ್ ನೆಗೆಟಿವ್, 2 ಲಸಿಕೆ ಪಡೆದಿರಬೇಕು
* ಪಬ್, ಹೋಟೆಲ್, ರೆಸ್ಟೋರೆಂಟ್, ಕ್ಲಬ್ ಪ್ರವೇಶಿಸುವ ಸಾರ್ವಜನಿಕರು 2 ಡೋಸ್ ಲಸಿಕೆ ಪಡೆದಿರಬೇಕು
* 2 ಡೋಸ್ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಬೇಕು
* ಅಪಾರ್ಟ್ ಮೆಂಟ್ ಅಸೋಷಿಯೇಶನ್ ಗಳಲಿ ಕೋವಿಡ್ ನಿಯಮದೊಂದಿಗೆ ಆಚರಣೆಗೆ ಅವಕಾಶ
* ಗುಂಪು ನೃತ್ಯಕ್ಕಾಗಿ ಡಿಜೆ, ಡ್ಯಾನ್ಸ್ ಫ್ಲೋರ್ ನಂತರ ವಿಶೇಷ ಕಾರ್ಯಕ್ರಮ ನಡೆಸುವಂತಿಲ್ಲ
* ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಬಳಸುವುದು ಕಡ್ಡಾಯವಾಗಿರುತ್ತದೆ
* ಕಾನೂನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ
Discover more from Coastal Times Kannada
Subscribe to get the latest posts sent to your email.
Discussion about this post