ಕಲಬುರಗಿ, ಡಿ.20: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೇವರ್ಗಿ ಪಟ್ಟಣದ ಶಾಂತಾನಗರದಲ್ಲಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ಹಾಸ್ಟೆಲ್ ಬಾತ್ ರೂಮ್ನಲ್ಲಿ ಯುವಕನೊಬ್ಬ ಕ್ಯಾಮರಾ ಇಟ್ಟ ಘಟನೆ ನಡೆದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹಾಸ್ಟೆಲ್ಗೆ ಹೊಂದಿಕೊಂಡಂತಿರುವ ಮನೆಯಲ್ಲಿ ವಾಸವಾಗಿದ್ದ ಸಲೀಂ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ. ಬಂಧಿತ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಕ್ಯಾಮೆರಾ ಇಟ್ಟು, ಆ ಕ್ಯಾಮೆರಾಗೆ ವೈಪೈ (WiFi) ಮೂಲಕ ಸಂಪರ್ಕ ಪಡೆದು ಮನೆಯಲ್ಲೇ ಕುಳಿತು ನೋಡುತ್ತಿದ್ದನಂತೆ.
ಪೊಲೀಸರಿಗೆ ವಿದ್ಯಾರ್ಥಿನಿರ ದೂರು: ಜೇವರ್ಗಿ ತಾಲೂಕಿನ ಅಲ್ಪಸಂಖ್ಯಾತ ಹಾಸ್ಟೆಲ್ ನಲ್ಲಿ ಘಟನೆ ನಡೆದಿದ್ದು, ಇಂದು ಬಾತ್ ರೂಮ್ ನಲ್ಲಿ ಕ್ಯಾಮೆರಾ ಇರುವುದನ್ನು ವಿದ್ಯಾರ್ಥಿನಿಯರು ಗಮನಿಸಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಬಾತ್ ರೂಮ್ ನಿಂದ ಹೊರಬಂದು ಆರೋಪಿಯನ್ನು ಹಿಡಿದು ವಿದ್ಯಾರ್ಥಿನಿಯರು ಪೊಲೀಸರಿಗೆ ನೀಡಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಆರೋಪಿ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ಆ ಬಳಿಕ ಪೊಲೀಸರಿಗೆ ವಿದ್ಯಾರ್ಥಿನಿಯರು ದೂರು ನೀಡಿದ್ದು, ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅಲ್ಪಸಂಖ್ಯಾತ ಹಾಸ್ಟೆಲ್ ಗೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮನೆಯಲ್ಲೇ ಲೈವ್ ನೋಡ್ತಿದ್ದ ಆರೋಪಿ?: ಆರೋಪಿ ಸಲೀಂ ಹಾಸ್ಟೆಲ್ ಕಟ್ಟಡಕ್ಕೆ ಹೊಂದಿಕೊಂಡಿದ್ದ ಮನೆಯಲ್ಲಿ ವಾಸವಾಗಿದ್ದನಂತೆ. ಆನ್ಲೈನ್ನಲ್ಲಿ ಕ್ಯಾಮೆರಾ ಖರೀದಿ ಮಾಡಿದ್ದ ಆರೋಪಿ ಪೈಪ್ ಮೂಲಕ ವಿದ್ಯಾರ್ಥಿನಿರ ಹಾಸ್ಟೆಲ್ ಬಾತ್ ರೂಮ್ನಲ್ಲಿ ಫಿಕ್ಸ್ ಮಾಡಿದ್ದನಂತೆ. ಅದಕ್ಕೆ ವೈಪೈ ಕನೆಕ್ಟ್ ಮಾಡಿ ಮನೆಯಲ್ಲೇ ಕುಳಿತುಕೊಂಡು ಲೈವ್ ವಿಕ್ಷೀಸುತ್ತಿದ್ದನಂತೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಲೀಂನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಬಳಿ ಬಾಲಕಿಯರ ಖಾಸಗಿ ವಿಡಿಯೋ ಇವೆಯಾ ಎಂಬ ಕುರಿತಾಗಿಯೂ ವಿಚಾರಣೆ ಮುಂದುವರೆದಿದೆ.
Discussion about this post