ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.
ಕೆಲವು ಮಾಧ್ಯಮಗಳ ವರದಿ ಪ್ರಕಾರ ಸಹಜವಾಗಿ ಮಗು ಪಡೆಯುವುದಕ್ಕೆ ಪ್ರಿಯಾಂಕಾಗೆ ಆರೋಗ್ಯ ಸಮಸ್ಯೆಗಳಿರಲಿಲ್ಲ. ಆದರೆ, ಅವರಿಗೆ 39 ವಯಸ್ಸು. ಹೀಗಾಗಿ ಈ ವಯಸ್ಸಿನಲ್ಲಿ ಗರ್ಭಧರಿಸಿ ಮಗು ಪಡೆಯಲು ಹೋದರೆ ತೊಂದರೆ ಆಗಬಹುದು ಎಂದು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ ಎನ್ನಲಾಗಿದೆ.
ಆದರೆ, ಈ ಬಗ್ಗೆ ಪ್ರಿಯಾಂಕಾ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಮಗುವಿನ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ, ‘ನಾವು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದೇವೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಈಗ ನಮ್ಮ ಕುಟುಂಬದ ಮೇಲೆ ಗಮನ ಹರಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ಏನಿದು ಬಾಡಿಗೆ ತಾಯ್ತನ?
- ಕೆಲವು ಪ್ರಕರಣಗಳಲ್ಲಿ ಮಕ್ಕಳಾಗದ ದಂಪತಿಗಾಗಿ (ಅಥವಾ ಮಕ್ಕಳನ್ನು ಬಯಸುವ ಪುರುಷ ಇಲ್ಲವೆ ಮಹಿಳೆಗಾಗಿ) ಬೇರೊಬ್ಬ ಮಹಿಳೆ ಗರ್ಭ ಧರಿಸಿ, ಮಗುವನ್ನು ಹೆತ್ತು ಕೊಡುವ ಪ್ರಕ್ರಿಯೆಯೇ ಬಾಡಿಗೆ ತಾಯ್ತನ
- ಮಗು ಬೇಕೆಂದು ಇಚ್ಛಿಸಿದ ದಂಪತಿಯ ಪರವಾಗಿ ಗರ್ಭವನ್ನು ಧರಿಸಿ, ಒಂಬತ್ತು ತಿಂಗಳವರೆಗೆ ಭ್ರೂಣದ ಬೆಳವಣಿಗೆಗೆ ಸಹಕರಿಸಿ, ಹೆರಿಗೆ ಮಾಡಿಸಿಕೊಂಡ ಬಳಿಕ ಮಗುವನ್ನು ಅದರ ಪಾಲಕರಿಗೆ ಒಪ್ಪಿಸಲು ಬಾಡಿಗೆ ತಾಯಿ ಮತ್ತು ಅದರ ಪಾಲಕರ ಮಧ್ಯೆ ಮೊದಲೇ ಒಪ್ಪಂದ ಏರ್ಪಟ್ಟಿರುತ್ತದೆ. (ಕೆಲವು ಸೆಲಿಬ್ರಿಟಿಗಳು ತಮ್ಮ ಅಂಗಸೌಷ್ಟವ ಹಾಳಾಗುತ್ತದೆ ಎಂದು ಈ ಅವಕಾಶ ಬಳಸಿಕೊಳ್ಳುತ್ತಾರೆ)
- ದೈಹಿಕವಾಗಿ ಅಥವಾ ವೈದ್ಯಕೀಯವಾಗಿ ಮಕ್ಕಳನ್ನು ಪಡೆಯಲು ಸಾಧ್ಯವೇ ಇಲ್ಲದ ದಂಪತಿಯು ಮಗು ಹೊಂದುವ ತನ್ನ ಆಸೆಯನ್ನು ಬಾಡಿಗೆ ತಾಯ್ತನದ ಮೂಲಕ ಈಡೇರಿಸಿಕೊಳ್ಳಲು ಸಾಧ್ಯ
- ಬಾಡಿಗೆ ತಾಯ್ತನದಲ್ಲಿ ಎರಡು ವಿಧ: ಒಂದು ಸಾಂಪ್ರದಾಯಿಕ (traditional) ಬಾಡಿಗೆ ತಾಯ್ತನವಾದರೆ, ಮತ್ತೊಂದು ಗರ್ಭಧಾರಣೆ (gestational) ಬಾಡಿಗೆ ತಾಯ್ತನ
Discover more from Coastal Times Kannada
Subscribe to get the latest posts sent to your email.
Discussion about this post