• About us
  • Contact us
  • Disclaimer
Monday, April 20, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಇದರ ಚುನಾವಣೆ ಕಾನೂನು ಬದ್ಧವಾಗಿ ನಡೆದಿದೆ ; ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್

Coastal Times by Coastal Times
March 23, 2023
in ಕರಾವಳಿ
ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಇದರ ಚುನಾವಣೆ ಕಾನೂನು ಬದ್ಧವಾಗಿ ನಡೆದಿದೆ ; ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್
69
VIEWS
WhatsappTelegramShare on FacebookShare on Twitter

ಮಂಗಳೂರು ;  ದ.ಕನ್ನಡ ಜಿಲ್ಲೆಯ ಪ್ರತಿಷ್ಠಿತ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಇದರ ಚುನಾವಣೆ ಕಾನೂನು ಬದ್ಧವಾಗಿ ಚುನಾವಣೆ ನಡೆದಿದೆ. ಇದರಲ್ಲಿ ಸಮಾಜದ ಮುಸ್ಲಿಂ ರಾಜಕೀಯ ಮುಖಂಡರಾಗಲಿ ಅಥವಾ ಯಾವುದೇ ಪಕ್ಷದ ರಾಜಕೀಯ ವ್ಯಕ್ತಿಗಳಾಗಲಿ ಹಸ್ತಕ್ಷೇಪ ಮಾಡಿರುವುದಿಲ್ಲ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ತಿಳಿಸಿದ್ದಾರೆ.

ದ.ಕ.ಜಿಲ್ಲಾ ವಕ್ಫ್ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಜುಮ್ಮಾ ಮಸ್ಟೀದಿ ಮತ್ತು ಸೈಯ್ಯದ್ ಶರೀಪುಲ್ ಮದನಿ ದರ್ಗಾ ಇದರ ಆಡಳಿತವನ್ನು ವಕ್ಸ್ ಕಾಯಿದೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಸ್ವಯಂ ಘೋಷಿತ ಅಧ್ಯಕ್ಷರಾದ ಶ್ರೀ ಹಾಜಿ ಅಬ್ದುಲ್ ರಶೀದ್ ರವರ ಆಡಳತ ಸಮಿತಿ ಅಧಿಕಾರ ನಡೆಸುತ್ತಾ ಬಂದಿರುತ್ತಾರೆ. ಅದಲ್ಲದೆ ಸ್ಥಳೀಯವಾಗಿ ಭಯದ ವಾತಾವರಣ ಹುಟ್ಟಿಸಿ ಇದರ ಹತ್ತಿರ ಬರದಂತೆ ನೋಡಿಕೊಂಡಿದ್ದರು. ಈ ಮಧ್ಯೆ ಕರ್ನಾಟಕ ರಾಜ್ಯ ವಕ್ಸ್ ಮಂಡಳಿ ಶ್ರೀ ಇಬ್ರಾಹಿಂ ಗೂನಡ್ಕ ಅವರನ್ನು ಆಡಳಿತ ಅಧಿಕಾರಿಯಾಗಿ ನೇಮಕ ಮಾಡಿತ್ತು. ಆಗಲೂ ಸಹ ಅಧಿಕಾರ ಹಸ್ತಾಂತರ ಮಾಡದೇ ಮಾನ್ಯ ಉಚ್ಚ ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಿ (ಸಂಖ್ಯೆ : 51434/2019) 4 ವರ್ಷಗಳ ಕಾಲ ಸ್ವಯಂ ಘೋಷಿತವಾಗಿ ಕಾರ್ಯಭಾರ ಮಾಡುತ್ತಾ ಬಂದಿರುತ್ತಾರೆ.

ಈ ಎಲ್ಲಾ ಸೂಕ್ಷ್ಮತೆಯನ್ನು ಅರಿತು ಕೊಂಡ ಕರ್ನಾಟಕ ರಾಜ್ಯ ವಕ್ಸ್ ಮಂಡಳಿ ವಕ್ಸ್ ಕಾಯಿದೆ ಮತ್ತು ವಕ್ಸ್ ನಿಯಮಗಳ ಪ್ರಕಾರ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ಇತ್ಯಾರ್ಥ ಪಡಿಸಲು ಶತ ಪ್ರಯತ್ನ ಮಾಡಿ 2022 ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ಆಡಳಿತ ಅವಧಿ ಮುಕ್ತಾಯವಾಗಿರುವುದರಿಂದ ಪ್ರಕರಣ ನಡೆಸುವುದು ಸೂಕ್ತವಲ್ಲವೆಂದು ಭಾವಿಸಿ ಪ್ರಕರಣವನ್ನು ವಿಲೇವಾರಿ ಮಾಡಿರುತ್ತಾರೆ. ಹೀಗಿದ್ದು ಸದ್ರಿ ಸಂಸ್ಥೆಗೆ ರಾಜ್ಯ ವಕ್ಸ್ ಮಂಡಳಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬಹುದಾಗಿತ್ತು. ಆದರೆ ಸದ್ರಿ ಸಂಸ್ಥೆಗೆ ಆಡಳಿತ ಅಧಿಕಾರಿ ನೇಮಿಸುವುದರಿಂದ ಸುಮ್ಮನೆ ಗೊಂದಲ ಗಲಾಟೆಗೆ ಆಸ್ಪದ ನೀಡುವುದು ಬೇಡವೆಂಬ ಸದುದ್ದೇಶದಿಂದ ಜಿಲ್ಲಾ ವಕ್ಸ್ ಅಧಿಕಾರಿ, ಜಿಲ್ಲಾ ವಕ್ಸ್ ಅಧ್ಯಕ್ಷರೊಂದಿಗೆ ಚರ್ಚಿಸಿ ಸದ್ರಿ ಸಂಸ್ಥೆಯ ಬೈಲಾ ನೊಂದಾವಣಿಗೆ ಅರ್ಜಿ ಸಲ್ಲಿಸಲು ಸೂಚಿಸಿದರೂ ಕೂಡಾ ಅವರು ಸಲ್ಲಿಸಿರುವುದಿಲ್ಲ. ಆದ್ದರಿಂದ ವಕ್ಸ್ ಕಾಯಿದೆ 1995 (ತಿದ್ದುಪಡಿ ಕಾಯಿದೆ 2013)ರ ನಿಯಮ 69(1) ಹಾಗೂ ಕರ್ನಾಟಕ ವಕ್ಸ್ ನಿಯಮ 2017ರ ನಿಯಮ 48ರ ಪ್ರಕಾರ ನಮೂನೆ 42ರಲ್ಲಿ ಬೈಲಾ ಸಲ್ಲಿಸಿ ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯಿಂದ ಅನುಮೋದನೆ ಪಡೆಯಲಾಗಿದೆ.

ಅದರಂತೆ ಕರ್ನಾಟಕ ರಾಜ್ಯ ವಕ್ಸ್ ಮಂಡಳ ಬೆಂಗಳೂರು ಇವರು ದಕ್ಷಿಣ ಕನ್ನಡ ಜಿಲ್ಲಾ ವಕ್ಸ್ ಅಧಿಕಾರಿಯನ್ನು ಚುನಾವಣೆ ನೊಂದಾವಣಿ ಅಧಿಕಾರಿಯನ್ನಾಗಿ ನೇಮಕ ಮಾಡಿರುತ್ತಾರೆ. ಈ ಆದೇಶದಂತೆ ಜುಮ್ಮಾ ಮಸೀದಿ ಮತ್ತು ಹಜರತ್ ಸೈಯದ್ ಮೊಹಮ್ಮದ್ ಶರೀಪುಲ್ ಮದನಿ ದರ್ಗಾ ಉಳ್ಳಾಲ ಇದರ ಮಹಾ ಸಭೆಯ ಸದಸ್ಯತ್ವ ನೊಂದಾಯಿಸಲು ಆದೇಶ ಹೊರಡಿಸಲಾಗಿದೆ.

ಈ ಮಧ್ಯೆ ದರ್ಗಾದ ಸ್ವಯಂ ಘೋಷಿತ ಸಮೀತಿಯ ಅಧ್ಯಕ್ಷರಾದ ಶ್ರೀ ಹಾಜಿ ಅಬ್ದುಲ್ ರಶೀದ್ ಇವರು ಹಿಂಬಾಗಿಲಿನಿಂದ ಅಬ್ದುಲ್ ಮಲ್ಲಕ್ ಹಮೀದ್ ಇವರ ಹೆಸರಿನಲ್ಲಿ ಸದಸ್ಯತ್ವ ನೊಂದಾವಣಿ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ (ಪ್ರಕರಣ ಸಂಖ್ಯೆ 1946/2023) ಚುನಾವಣೆ ತಡೆಹಿಡಿಯಲು ಪ್ರಯತ್ನಿಸಿದ್ದರು. ಆದರೆ ಸದ್ರಿ ಪ್ರಕರಣವನ್ನು ದಿನಾಂಕ 02-02-2023 ರಂದು ತೀರ್ಪು ನೀಡಿ ಸದ್ರಿ ದರ್ಗಾ ಕಮಿಟಿ ಸುಮಾರು ವರ್ಷಗಳಿಂದ ಅನುಮೋದನೆ ಆಗದೆ ಇರುವುದರಿಂದ ತಾವು ನೊಂದಣಿ ಪ್ರಕ್ರಿಯೆ ಮತ್ತು ಚುನಾವಣೆ ಪ್ರಕ್ರಿಯೆ ತಡೆಯಲು ಪ್ರಯತ್ನಿಸುತ್ತಿದ್ದೀರ ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿ ಚುನಾವಣೆ ನಡೆಸಲು ಉಚ್ಚ ನ್ಯಾಯಾಲಯ ನಿರ್ದೇಶಿಸಿತು.

ಅದಲ್ಲದೆ ಇದೇ ಸ್ವಯಂ ಘೋಷಿತ ಸಮೀತಿಯ ಅಧ್ಯಕ್ಷರಾದ ಶ್ರೀ ಹಾಜಿ ಅಬ್ದುಲ್ ರಶೀದ್ ಇವರು ಮತ್ತೊಮ್ಮೆ ಶ್ರೀ ಯು.ಬಿ ಸಿದ್ಧಿಕ್ ಅವರ ಹೆಸರಲ್ಲಿ ಪ್ರಕರಣ ದಾಖಲಿಸಿ ನೊಂದಾವಣೆ ಪ್ರಕ್ರಿಯೆ ರದ್ದುಗೊಳಸಲು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ 1828/2023 ಪ್ರಕರಣ ದಾಖಲಿಸಿರುತ್ತಾರೆ. ಆದರೆ ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ 07-02-2023 ರಂದು ಕರ್ನಾಟಕ ರಾಜ್ಯ ವಕ್ಸ್ ನಿಯಮ 2017ರ ನಿಯಮ 54(2)ರಲ್ಲಿ ಕಮಿಟಿ ರಚಿಸಲು ಕೇವಲ ಹಾಲಿ ಕಮಿಟಿಯವರಿಗೆ ಅವಕಾಶವಿದ್ದು ಸ್ವಯಂ ಘೋಷಿತ ಕಮಿಟಿಗೆ ಅಧಿಕಾರ ಇರುವುದಿಲ್ಲ ನಿಯಮ 54(5) ರಂತೆ ಜಿಲ್ಲಾ ವಕ್ಸ್ ಅಧಿಕಾರಿಯು ದರ್ಗಾದ ಆಡಳಿತ ವಹಿಸಿಕೊಳ್ಳುವುದು ಕಟ್ಟಪ್ಪಣಿಯಾಗಿರುತ್ತದೆ. ಆದ್ದರಿಂದ ವಕ್ಸ್ ಅಧಿಕಾರಿಗಳು ಮತ್ತು ನೊಂದಾಣಿ ಅಧಿಕಾರಿಗಳು ಹೊರಡಿಸಿರುವ ಆದೇಶ ಸರಿಯಾಗಿದೆ ಎಂದು ಪ್ರಕರಣ ಇತ್ಯಾರ್ಥಗೊಳಿಸಿರುತ್ತಾರೆ.

ವಿಶಿಷ್ಟವೇನೆಂದರೆ ಶ್ರೀ ಹಾಜಿ ಅಬ್ದುಲ್ ರಶೀದ್ ಇವರು ಮತ್ತು ಇವರ ಸಂಗಡಿಗರಾದ ಇಲ್ಯಾಸ್ ಮತ್ತು ಇತರರು ನೊಂದಣಿಗೆ ವಿರೋಧ ಮಾಡಿ ಇವರೇ ತಮ್ಮ ಹೆಸರು ಮಹಾ ಸಭೆಯ ಸದಸ್ಯತ್ವ ಸ್ಥಾನಕ್ಕೆ ನೊಂದಣಿ ಮಾಡಿಸಿಕೊಂಡು ಸಾಮಾನ್ಯ ಜನರಿಗೆ ಮೂರ್ಖರನ್ನಾಗಿ ಮಾಡಿ ಕೆಲವರಿಗೆ ಸದಸ್ಯತ್ವ ನೊಂದಾವಣೆ ಮಾಡದ ಹಾಗೆ ಮಾಡಿರುತ್ತಾರೆ.

ಆದರೆ ವಕ್ಸ್ ಮಂಡಳಿಯವರು ಕಾನೂನು ಬದ್ಧವಾಗಿ ಯಾರ ಒತ್ತಡಕ್ಕೆ ಮಣಿಯದೆ ಸದರಿ ಪ್ರತಿಷ್ಠಿತ ದರ್ಗಾದ ಆಡಳಿತ ಮಂಡಳಿ ಚುನಾವಣೆ ನಡೆಸಿ ಚುನಾಯಿತವಾದ ಸಮಿತಿಯನ್ನು ಕರ್ನಾಟಕ ರಾಜ್ಯ ವಕ್ಸ್ ಮಂಡಳಿ ಅನುಮೋದನೆ ಪಡೆದು ಅಧಿಕಾರ ಸ್ವೀಕಾರ ಮಾಡಿಕೊಂಡಿರುತ್ತಾರೆ. ದರ್ಗಾದ ಇತಿಹಾಸದಲ್ಲಿ ಅನುಮೋದನೆ ಪಡೆದ ಮೊದಲನೇ ಸಮಿತಿಯಾಗಿರುತ್ತದೆ.

ಈ ಎಲ್ಲಾ ಪ್ರಕ್ರಿಯೆಗಳ ಕಾನೂನು ಬದ್ಧವಾಗಿದ್ದು ಇದರಲ್ಲಿ ಸಮಾಜದ ಮುಸ್ಲಿಂ ರಾಜಕೀಯ ಮುಖಂಡರಾಗಲಿ ಅಥವಾ ಯಾವುದೇ ಪಕ್ಷದ ರಾಜಕೀಯ ವ್ಯಕ್ತಿಗಳಾಗಲಿ ಹಸ್ತಕ್ಷೇಪ ಮಾಡಿರುವುದಿಲ್ಲ. ಆದರೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕವಾಗಿ ಕೆಲವು ರಾಜಕೀಯ ವ್ಯಕ್ತಿಗಳ ಹೆಸರು ಕೆಡಿಸಲು ಪ್ರಯತ್ನ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿರುತ್ತದೆ ಎಂದು ನಾನು ಶ್ರೀ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಜಿಲ್ಲಾ ವಕ್ಸ್ ಸಲಹಾ ಸಮಿತಿ ಅಧ್ಯಕ್ಷನಾಗಿ ಸ್ಪಷ್ಟನೇ ನೀಡುತ್ತೇನೆ.

ಅದಲ್ಲದೆ ಮುಸ್ಲಿಂ ಸಮುದಾಯದ ಮದುವೆ ಸರ್ಟಿಫಿಕೇಟ್ ನೊಂದಾವಣಿ ಮಾಡಲು ಕರ್ನಾಟಕ ಸರಕಾರ ದಿನಾಂಕ 21-02-2023 ರಂದು ನೊಂದಾವಣಿ ಮಾಡುವರೇ ಕರ್ನಾಟಕ ರಾಜ್ಯ ವಕ್ಸ್ ಮಂಡಳಿ ಅನುಮತಿಯನ್ನು ನೀಡಿರುತ್ತದೆ. ಇದರಲ್ಲಿ ಯಾವುದೇ ಗೊಂದಲಗಳು ಇರುವುದಿಲ್ಲ. ಮತ್ತು ಸಾರ್ವಜನಿಕರು ಮದುವೆ ನೊಂದಾವಣಿಗೊಳಸುವರೇ ಅದರ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ವಕ್ಸ್ ಅಧಿಕಾರಿಗೆ ಸಲ್ಲಿಸಿದರೆ ಪರಿಶೀಲಿಸಿ 15 ದಿವಸದೊಳಗೆ ಮದುವೆ ಪ್ರಮಾಣ ಪತ್ರವನ್ನು ಇಲಾಖೆಯಿಂದ ನೀಡಲಾಗುತ್ತದೆ. ಇದರೊಂದಿಗೆ ಮದುವೆ ಪ್ರಮಾಣ ಪತ್ರ ಪಡೆಯಲು ಸರಕಾರದ ನಿಯಮ ನಿಬಂಧನೆಗಳ ಪ್ರತಿಯನ್ನು ಲಗತ್ತೀಕರಿಸಲಾಗಿದೆ.

ಕರ್ನಾಟಕ ಸರ್ಕಾರವು ಅದೇಶ ಸಂಖ್ಯೆ: ಎಂ.ಡಬ್ಲ್ಯೂಡಿ/65/ಡಬ್ಲ್ಯೂ ಇಎಸ್/2022, ದಿನಾಂಕ 21-02-2023ರ ಅದೇಶದಲ್ಲಿ ಕರ್ನಾಟಕ ರಾಜ್ಯ ಔಕಾಫ್ ಮಂಡಳಿ, ಬೆಂಗಳೂರು ಇವರಿಗೆ ಮದುವೆ ವಿವಾಹ ಸರ್ಟಿಫಿಕೇಟ್ ಮುಸ್ಲಿಂರಿಗೆ ನೀಡಲು ಅದೇಶಿಸಿರುತ್ತಾರೆ. ಈ ಆದೇಶದಂತೆ ಕರ್ನಾಟಕ ರಾಜ್ಯ ಔಕಾಫ್ ಮಂಡಳಿ, ಬೆಂಗಳೂರು ಇವರು ಎಲ್ಲಾ ಜಿಲ್ಲಾ ವಕ್ಸ್ ಅಧಿಕಾರಿಗಳಿಗೆ ಪತ್ರ ಸಂಖ್ಯೆ:ಕೆ.ಎಸ್‌.ಬಿ.ಎ./ಇಎಸ್‌ಟಿ/ಎಡಿಎಂ/31/15-16, ದಿನಾಂಕ 22-02-2023 ಸರ್ಕಾರದ ಆದೇಶಗಳನ್ನು ಪಾಲಿಸುತ್ತಾ ಮದುವೆ ವಿವಾಹ ಪತ್ರ ನೀಡಲು ನಿರ್ದೇಶಿಸಿರುತ್ತಾರೆ. ಈ ಆದೇಶದಂತೆ, ಈ ಕೆಳಕಂಡ ದಾಖಲಗಳನ್ನು ಖಡ್ಡಾಯವಾಗಿ ಸಲ್ಲಿಸಿ ಮದುವೆ ವಿವಾಹ ಸರ್ಟಿಫಿಕೇಟ್ ಪಡೆಯಬಹುದಾಗಿದೆ.

1. ಮದುವೆ ವಿವಾಹ ಪತ್ರ ಅರ್ಜಿಯನ್ನು ವದು ಅಥವ ವರ ಸಲ್ಲಿಸಬೇಕು.

2. ಜಂಟಿ ವಿವಾಹ ದೃಢೀಕರಣ ಪತ್ರ ಸಲ್ಲಿಸತಕ್ಕದು (ಒಂಟಿ ವಿವಾಹ ಧೃಢೀಕರಣ ಪತ್ರ ಅಂಗೀಕರಿಸಲಾಗುವುದಿಲ್ಲ) ನೋಟರಿಯಿಂದ ಧೃಢೀಕರಣ ಮಾಡಿಸಬೇಕು.

3.ಮಸೀದಿಯಿಂದ ನೀಡುವ ನಿಖಾನಾಮ(ದಕ್ಟರ್) ಮೂಲ ಪ್ರತಿ ಜೆರಾಕ್ಸ್ ಪ್ರತಿ ಪಡೆದು ಅದನ್ನು ಮಸೀದಿಯ ಅಧ್ಯಕ್ಷರು ಅಥವ ಕಾರ್ಯದರ್ಶಿ ಮಾತ್ರ ದೃಢೀಕರಣ ಮಾಡಿಕೊಡಬೇಕು.

4.ನಿಖಾನಾಮ(ದಪ್ಪರ್) ನಲ್ಲಿರುವಂತೆ ವಿವಾಹ ದೃಢೀಕರಣ ಪತ್ರದಲ್ಲಿ ವರ ಮತ್ತು ವಧುವಿನ ಹೆಸರು ದಾಖಲಿಸಲಾಗುವುದು. ಅದ್ದರಿಂದ ಅಧಾರ್ ಅಥವಾ ಪಾಸ್‌ಪೋರ್ಟ್‌ನಲ್ಲಿ ಇರುವಂತೆ ಹೆಸರುಗಳನ್ನು ದಾಖಲಿಸಬೇಕು ಯಾವುದೇ ಕಾರಣಕ್ಕೆ ಹೆಸರುಗಳನ್ನು ಬದಲಾಯಿಸಲಾಗುವುದ್ದಿಲ್ಲ. ಹೆಸರುಗಳನ್ನು ತಿದ್ದು ಪಡಿ ಮಾಡಿದ್ದಲ್ಲಿ ಅಂತಹ ಅರ್ಜಿದಾರರು ಮಸೀದಿಯ ಮೂಲ ನಿಖಾನಾಮ್(ದಪ್ಪ‌) ರಿಜಿಸ್ಟರ್ ವಕ್ಸ್ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು. ಕೇವಲ್ ಜೆರಾಕ್ಸ್ ಪ್ರತಿಯಲ್ಲಿ ತಿದ್ದುಪಡಿ ಮಾಡಿ ದೃಢೀಕರಣ ಮಾಡಿಸಿಕೊಂಡು ಬಂದಲ್ಲಿ ಅಂತಹ ನಿಖಾನಾಮ ಅಂಗೀಕರಿಸಲಾಗುವುದಿಲ್ಲ.

5.ಮಸೀದಿಯ ಅಧ್ಯಕ್ಷರು/ಕಾರ್ಯದರ್ಶಿಗಳು ಸಹ ನಿಖಾ ಸಂದರ್ಭದಲ್ಲಿ ಅಧಾರ್ ಮತ್ತು ಪಾಸ್‌ಪೋರ್ಟ್‌ನಲ್ಲಿ ಇರುವಂತೆ ಹೆಸರುಗಳು ದಾಖಲಿಸಬೇಕು.

6.ಕೆಲವು ಮಸೀದಿಗಳಲ್ಲಿ ನಿಖಾನಾಮ(ದಪ್ಪರ್) ಹೊರತು ಪಡಿಸಿ ಬೇರಿ ನಿಖಾ ಸರ್ಟಿಫಿಕೇಟ್ ಅಂತ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ನಿಖಾನಾಮ ಹೊರೆತು ಪಡಿಸಿ ಬೇರೆ ನಿಖಾ ಸರ್ಟಿಫಿಕೇಟ್ ನೀಡಿದ್ದಲ್ಲಿ ಅದನ್ನು ಪರಿಗಣಿಸಲಾಗುವುದಿಲ್ಲ.

 

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಹೊಸ ವಾಹನ ಖರೀದಿಸುವವರು ಗಮನಿಸಿ , ನಂಬರ್‌ ಅಳವಡಿಸದೆ ವಾಹನ ಡೆಲಿವರಿ ಇಲ್ಲ

Next Post

ಮಂಗಳೂರು: 23 ಪ್ರಕರಣಗಳಲ್ಲಿ ವಾರೆಂಟ್ ಎದುರಿಸುತ್ತಿದ್ದ ಆರೋಪಿಯ ಬಂಧನ

Related Posts

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.
ಕರಾವಳಿ

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

April 16, 2026
16
ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು
ಕರಾವಳಿ

ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

April 15, 2026
75
Next Post
ಮಂಗಳೂರು: 23 ಪ್ರಕರಣಗಳಲ್ಲಿ ವಾರೆಂಟ್ ಎದುರಿಸುತ್ತಿದ್ದ ಆರೋಪಿಯ ಬಂಧನ

ಮಂಗಳೂರು: 23 ಪ್ರಕರಣಗಳಲ್ಲಿ ವಾರೆಂಟ್ ಎದುರಿಸುತ್ತಿದ್ದ ಆರೋಪಿಯ ಬಂಧನ

Discussion about this post

Recent News

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

April 18, 2026
17
ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

April 18, 2026
64
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

April 18, 2026
ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

ಕೊಣಾಜೆ : ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ , ಲುಕ್ ಔಟ್ ನೋಟಿಸ್ ಜಾರಿ

April 18, 2026
ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

April 16, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d