• About us
  • Contact us
  • Disclaimer
Tuesday, February 3, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: 3 ಮಕ್ಕಳನ್ನು ಬಾವಿಗೆ ತಳ್ಳಿ ಕೊಂದು ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Coastal Times by Coastal Times
June 23, 2022
in ಕ್ರೈಮ್ ನ್ಯೂಸ್
ಮಂಗಳೂರು: 3 ಮಕ್ಕಳನ್ನು ಬಾವಿಗೆ ತಳ್ಳಿ ಕೊಂದು ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
271
VIEWS
WhatsappTelegramShare on FacebookShare on Twitter

ಮಂಗಳೂರು: ಮೂಲ್ಕಿಯ ತಾಳಿಪಾಡಿ ಗ್ರಾಮದ ಪುನರೂರು ಎಂಬಲ್ಲಿ ಮೂವರು ಮಕ್ಕಳು ಮತ್ತು ಪತ್ನಿಯನ್ನು ವ್ಯಕ್ತಿಯೊಬ್ಬ ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಮಕ್ಕಳೆಲ್ಲರೂ ಸಾವನ್ನಪ್ಪಿದ್ದಾರೆ. ಮಹಿಳೆ ಮತ್ತು ಕೃತ್ಯ ಎಸಗಿದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ರಶ್ಮಿತಾ (13), ಉದಯ (11) ಮತ್ತು ದಕ್ಷಿತ್ (04) ಎಂಬ ಮಕ್ಕಳು ಸಾವನ್ನಪ್ಪಿದವರು. ಹಿತೇಶ್ ಶೆಟ್ಟಿಗಾರ್ ಮತ್ತು ಆತನ ಪತ್ನಿ ಲಕ್ಷ್ಮೀಯನ್ನು ರಕ್ಷಿಸಲಾಗಿದೆ. ಆರೋಪಿ ಹಿತೇಶ್ ಶೆಟ್ಟಿಗಾರ್ ಶಾಲೆಯಿಂದ ಬಂದಿದ್ದ ಮೂವರು ಮಕ್ಕಳನ್ನು ಬಾವಿಗೆ ತಳ್ಳಿದ್ದಾನೆ. ಪತ್ನಿಯು ಮಕ್ಕಳ ಬಗ್ಗೆ ವಿಚಾರಿಸಿದಾಗ ಎಲ್ಲೋ ಅಡಗಿ ಕುಳಿತಿದ್ದಾರೆ ಎಂದು ಸಬೂಬು ನೀಡಿದ್ದ ಎನ್ನಲಾಗಿದೆ.

ಬಳಿಕ ಪತ್ನಿಯು ಅನುಮಾನಗೊಂಡು ಹುಡುಕಾಟಕ್ಕಿಳಿದು ಪಕ್ಕದ ಮನೆಯ ಬಾವಿಯಲ್ಲಿ ನೋಡಿದಾಗ ಮಕ್ಕಳನ್ನು ತಳ್ಳಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಲಕ್ಷ್ಮೀಯನ್ನು ಹಿಂಬಾಲಿಸಿಕೊಂಡು ಬಂದ ಹಿತೇಶ್, ಆಕೆಯನ್ನು ಬಾವಿಗೆ ತಳ್ಳಿ ಬಳಿಕ ತಾನೂ ಹಾರಿದ್ದಾನೆ. ಇದನ್ನು ಸ್ಥಳೀಯರು ಗಮನಿಸಿದ್ದು, ಪತಿ, ಪತ್ನಿ ಮತ್ತು ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಮಕ್ಕಳು ಆಸ್ಪತ್ರೆಗೆ ಸಾಗಿಸುವಾಗಲೇ ಸಾವನ್ನಪ್ಪಿದ್ದಾರೆ.

ಮೃತ ಮಕ್ಕಳಲ್ಲಿ ರಶ್ಮಿತಾ ಕಟೀಲು ಶಾಲೆಗೆ ಎಂಟನೇ ತರಗತಿ ಈ ಬಾರಿ ಸೇರಿದ್ದು, ಉದಯ ಪುನರೂರು ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದು, ದಕ್ಷತ್ ಪದ್ಮನೂರು ಅಂಗನವಾಡಿ ಶಾಲೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಹಿತೇಶ್ ಶೆಟ್ಟಿಗಾರ್ ಕೂಲಿ ಕೆಲಸ ಮಾಡಿಕೊಂಡಿದ್ದು, ಪತ್ನಿ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದಳು. ಇತ್ತೀಚೆಗೆ ಅಂಗಡಿಯೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದರು. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಶಾಸಕ ಹರೀಶ್​ ಪೂಂಜಾರಿಗೆ ಕೊರಿಯರ್​ನಲ್ಲಿ ಬಂತು ಮುಸ್ಲಿಂರ ಬಿಳಿ ಟೋಪಿ , ಹಸಿರು ಶಾಲು.. ಕಾರಣ?

Next Post

ಮಂಗಳೂರು: ಸಮುದ್ರದಲ್ಲಿ ಜಲ ಸಮಾಧಿಯಾದ ವಿದೇಶಿ ಹಡಗು ಎಂವಿ ಪ್ರಿನ್ಸಸ್ ಮಿರಾಲ್

Related Posts

ಮಂಗಳೂರು: ಆನ್‌ಲೈನ್‌ ಗೇಮ್‌ನಲ್ಲಿ ಸೋಲಿಸಿದ ದ್ವೇಷ: ಜೀವ ಬೆದರಿಕೆ ಹಾಕಿ ಕೊಲೆ ಯತ್ನಿಸಿದವನಿಗೆ 4 ವರ್ಷ ಜೈಲು ಶಿಕ್ಷೆ
ಕ್ರೈಮ್ ನ್ಯೂಸ್

ಮಂಗಳೂರು: ಆನ್‌ಲೈನ್‌ ಗೇಮ್‌ನಲ್ಲಿ ಸೋಲಿಸಿದ ದ್ವೇಷ: ಜೀವ ಬೆದರಿಕೆ ಹಾಕಿ ಕೊಲೆ ಯತ್ನಿಸಿದವನಿಗೆ 4 ವರ್ಷ ಜೈಲು ಶಿಕ್ಷೆ

February 2, 2026
40
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ ಎಗರಿಸುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ, 6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಕ್ರೈಮ್ ನ್ಯೂಸ್

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ ಎಗರಿಸುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ, 6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ

January 31, 2026
50
Next Post
ಮಂಗಳೂರು: ಸಮುದ್ರದಲ್ಲಿ ಜಲ ಸಮಾಧಿಯಾದ ವಿದೇಶಿ ಹಡಗು ಎಂವಿ ಪ್ರಿನ್ಸಸ್ ಮಿರಾಲ್

ಮಂಗಳೂರು: ಸಮುದ್ರದಲ್ಲಿ ಜಲ ಸಮಾಧಿಯಾದ ವಿದೇಶಿ ಹಡಗು ಎಂವಿ ಪ್ರಿನ್ಸಸ್ ಮಿರಾಲ್

Discussion about this post

Recent News

ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ

ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ

February 2, 2026
98
ಮಂಗಳೂರು: ಆನ್‌ಲೈನ್‌ ಗೇಮ್‌ನಲ್ಲಿ ಸೋಲಿಸಿದ ದ್ವೇಷ: ಜೀವ ಬೆದರಿಕೆ ಹಾಕಿ ಕೊಲೆ ಯತ್ನಿಸಿದವನಿಗೆ 4 ವರ್ಷ ಜೈಲು ಶಿಕ್ಷೆ

ಮಂಗಳೂರು: ಆನ್‌ಲೈನ್‌ ಗೇಮ್‌ನಲ್ಲಿ ಸೋಲಿಸಿದ ದ್ವೇಷ: ಜೀವ ಬೆದರಿಕೆ ಹಾಕಿ ಕೊಲೆ ಯತ್ನಿಸಿದವನಿಗೆ 4 ವರ್ಷ ಜೈಲು ಶಿಕ್ಷೆ

February 2, 2026
40
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ

ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ

February 2, 2026
ಮಂಗಳೂರು: ಆನ್‌ಲೈನ್‌ ಗೇಮ್‌ನಲ್ಲಿ ಸೋಲಿಸಿದ ದ್ವೇಷ: ಜೀವ ಬೆದರಿಕೆ ಹಾಕಿ ಕೊಲೆ ಯತ್ನಿಸಿದವನಿಗೆ 4 ವರ್ಷ ಜೈಲು ಶಿಕ್ಷೆ

ಮಂಗಳೂರು: ಆನ್‌ಲೈನ್‌ ಗೇಮ್‌ನಲ್ಲಿ ಸೋಲಿಸಿದ ದ್ವೇಷ: ಜೀವ ಬೆದರಿಕೆ ಹಾಕಿ ಕೊಲೆ ಯತ್ನಿಸಿದವನಿಗೆ 4 ವರ್ಷ ಜೈಲು ಶಿಕ್ಷೆ

February 2, 2026
ಮಂಗಳೂರು: ಗುಜ್ಜರಕೆರೆ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ; ಪ್ರಯೋಗಾಲಯ ವರದಿಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

ಮಂಗಳೂರು: ಗುಜ್ಜರಕೆರೆ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ; ಪ್ರಯೋಗಾಲಯ ವರದಿಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

January 31, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d