ಕೊಚ್ಚಿ : ಐಪಿಎಲ್ 16ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ಮುಕ್ತಾಯಗೊಂಡಿದ್ದು, ಒಟ್ಟು 80 ಆಟಗಾರರು ನಾನಾ ತಂಡಗಳನ್ನು ಸೇರಿಕೊಂಡಿದ್ದಾರೆ. ಇವರಲ್ಲಿ 29 ವಿದೇಶಿ ಆಟಗಾರರು. ಒಟ್ಟಾರೆ 167 ಕೋಟಿ ರೂಪಾಯಿ ಮೊತ್ತವನ್ನು ಫ್ರಾಂಚೈಸಿಗಳು ಆಟಗಾರರಿಗೆ ಹೂಡಿಕೆ ಮಾಡಿವೆ. ಅಂತೆಯೇ ಮುಂದಿನ ಐಪಿಎಲ್ನಲ್ಲಿ ಕಣಕ್ಕೆ ಇಳಿಯಲಿರುವ ಗರಿಷ್ಠ ಮೊತ್ತ ಪಡೆದ 10 ಆಟಗಾರರ ಪಟ್ಟಿ ಇಲ್ಲಿದೆ.
ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ ರೂ.18.5 ಕೋಟಿ ನೀಡಿ ಖರೀದಿಸಿದೆ. ಇದರೊಂದಿಗೆ ಕರನ್ ಅವರು ಐಪಿಎಲ್ ಹರಾಜು ಇತಿಹಾಸದಲ್ಲಿಯೇ ಅತಿಹೆಚ್ಚು ಮೊತ್ತ ಗಳಿಸಿಕೊಂಡ ಆಟಗಾರ ಎನಿಸಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯಾದ ಕೆಮರೂನ್ ಗ್ರೀನ್, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಅವರು ಘಟಾನುಘಟಿಗಳನ್ನು ಹಿಂದಿಕ್ಕಿ ಭಾರಿ ಮೊತ್ತ ಜೇಬಿಗಿಳಿಸಿಕೊಳ್ಳುವ ಮೂಲಕ ಕ್ರಿಕೆಟ್ ಪ್ರಿಯರ ಹುಬ್ಬೇರುವಂತೆ ಮಾಡಿದ್ದಾರೆ.
ಈ ಬಾರಿ ಅತಿ ಹೆಚ್ಚು ಮೊತ್ತ ಗಳಿಸಿದ ಅಗ್ರ ಹತ್ತು ಆಟಗಾರರು
1. ಸ್ಯಾಮ್ ಕರನ್ (ಇಂಗ್ಲೆಂಡ್): ₹ 18.50 ಕೋಟಿ – ಪಂಜಾಬ್ ಕಿಂಗ್ಸ್
2. ಕೆಮರೂನ್ ಗ್ರೀನ್ (ಆಸ್ಟ್ರೇಲಿಯಾ): ₹ 17.50 ಕೋಟಿ – ಮುಂಬೈ ಇಂಡಿಯನ್ಸ್
3. ಬೆನ್ ಸ್ಟೋಕ್ಸ್ (ಇಂಗ್ಲೆಂಡ್): ₹ 16.25 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
4. ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್): ₹ 16 ಕೋಟಿ – ಲಖನೌ ಸೂಪರ್ ಜೈಂಟ್ಸ್
5. ಹ್ಯಾರಿ ಬ್ರೂಕ್ (ಇಂಗ್ಲೆಂಡ್): ₹ 13.5 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
6. ಮಯಂಕ್ ಅಗರವಾಲ್ (ಭಾರತ): ₹ 8.25 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
7. ಶಿವಂ ಮಾವಿ (ಭಾರತ): ₹ 6 ಕೋಟಿ – ಗುಜರಾತ್ ಟೈಟನ್ಸ್
8. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್): ₹ 5.75 ಕೋಟಿ – ರಾಜಸ್ಥಾನ ರಾಯಲ್ಸ್
9. ಮುಕೇಶ್ ಕುಮಾರ್ (ಭಾರತ): ₹ 5.5 ಕೋಟಿ – ಡೆಲ್ಲಿ ಕ್ಯಾಪಿಟಲ್ಸ್
10. ಹೆನ್ರಿಚ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ): ₹ 5.25 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
Discover more from Coastal Times Kannada
Subscribe to get the latest posts sent to your email.
Discussion about this post