• About us
  • Contact us
  • Disclaimer
Wednesday, June 24, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

“ನನ್ನನ್ನು ಅಪಹರಿಸಿ ನಾಮಪತ್ರ ವಾಪಾಸ್ ಪಡೆಯುವಂತೆ ಮಾಡಿದ್ದಾರೆ” -ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಆರೋಪ

Coastal Times by Coastal Times
April 24, 2023
in ಕರಾವಳಿ
“ನನ್ನನ್ನು ಅಪಹರಿಸಿ ನಾಮಪತ್ರ ವಾಪಾಸ್ ಪಡೆಯುವಂತೆ ಮಾಡಿದ್ದಾರೆ” -ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಆರೋಪ
168
VIEWS
WhatsappTelegramShare on FacebookShare on Twitter

ಮಂಗಳೂರು: “ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಕಣಕ್ಕಿಳಿಸಿದ್ದ ನನ್ನನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತಂಡವೊಂದು ಅಪಹರಿಸಿ ಕರೆದೊಯ್ದು ಬಲವಂತವಾಗಿ ನಾಮಪತ್ರ ಹಿಂತೆಗೆಯುವಂತೆ ಮಾಡಿದ್ದಾರೆ” ಎಂದು ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.

“ನಾನು ಎಲ್ಲೂ ಓಡಿಹೋಗಿಲ್ಲ, ನನ್ನನ್ನು ಅಪಹರಿಸಿ ಬೆದರಿಸಿ ನನ್ನಿಂದ ನಾಮಪತ್ರ ಹಿಂದೆ ಪಡೆಯುವಂತೆ ಮಾಡಲಾಗಿದೆ. ನನಗೆ ಯಾವುದೇ ರೀತಿಯಲ್ಲಿ ಆಮಿಷ ಒಡ್ಡಲಾಗಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ” ಎಂದರು.

ಬಳಿಕ ಮಾತಾಡಿದ ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ. ಸದಾಶಿವ ಅವರು, “ಈ ಬಾರಿ ಯಾರ ಸಹಾಯವೂ ಇಲ್ಲದೆ ಸ್ವತಂತ್ರವಾಗಿ ನಮ್ಮ ಜೆಡಿಎಸ್ ಪಕ್ಷ ಅಸ್ತಿತ್ವಕ್ಕೆ ಬರಲಿದೆ. ನಾವು ಜನಪರವಾದ ಪಂಚರತ್ನ ಯೋಜನೆಯ ಮೂಲಕ ಜನರ ಮನಸಿಗೆ ಹತ್ತಿರವಾಗಿದ್ದೇವೆ. ಜೆಡಿಎಸ್ ಹೇಳಿರುವ ಜನಪರ ಕಾರ್ಯಕ್ರಮವನ್ನು ಆಡಳಿತಕ್ಕೆ ಬರುವ ಮರುಕ್ಷಣವೇ ಜಾರಿಗೆ ತರಲು ನಾವು ಸಿದ್ಧರಿದ್ದೇವೆ. ಜನರ ಮಧ್ಯೆ ಗೊಂದಲ, ವೈಷಮ್ಯ ಮೂಡಿಸುವ ರಾಜಕೀಯ ನಾವು ಎಂದಿಗೂ ಮಾಡಿಲ್ಲ. ಕುಮಾರಸ್ವಾಮಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ನಿಶ್ಚಿತ. ಜಿಲ್ಲೆಯಲ್ಲಿ 8 ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ಮೊಯಿದೀನ್ ಬಾವಾ ಅವರನ್ನು ಕಣಕ್ಕಿಳಿಸಿದ್ದು ಗೆಲ್ಲುವ ವಿಶ್ವಾಸ ನಮ್ಮಲ್ಲಿದೆ.

ವಿಷಾದದ ಸಂಗತಿ ಏನೆಂದರೆ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಹಾಕಿದ್ದೆವು. ಮಂಗಳೂರು ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಬೇಕಾದ ಅಲ್ತಾಫ್ ಕುಂಪಲ ಎಂಬ ಒಬ್ಬ ವ್ಯಕ್ತಿಯನ್ನು ಅವರ ಸಮಾಜಸೇವೆಯನ್ನು ಗುರುತಿಸಿ ಟಿಕೆಟ್ ನೀಡಿದ್ದೇವೆ. ಆದರೆ ಎರಡು ದಿನಗಳ ಹಿಂದೆ ಅವರು ಹಬ್ಬದ ದಿನ ಮಸೀದಿಯಿಂದ ಹೊರಬರುವಾಗ ತಂಡವೊಂದು ಅವರನ್ನು ಬೆದರಿಸಿ ಚುನಾವಣಾಧಿಕಾರಿಯ ಬಳಿಗೆ ಕರೆದೊಯ್ದು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಯಿತು. ಇದು ಎಲ್ಲರೂ ಚಿಂತಿಸಬೇಕಾದ ವಿಷಯವಾಗಿದೆ. ಯಾಕೆಂದರೆ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೇ ಎದುರಿಸಲಾಗದವರು ಸಮಾಜದ ಜನರನ್ನು ಹೇಗೆ ನಡೆಯಿಸಿಕೊಳ್ಳಬಹುದು?” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಜೀರ್ ಉಳ್ಳಾಲ್, ವಸಂತ ಪೂಜಾರಿ, ಅಶ್ರಫ್ ಸಾಜೀದ್, ಆಶ್ರಪ್ ಖಾಜಿ, ಯುವ ಜನತಾದಳದ ಅಕ್ಷಿತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಐಟಿ ದಾಳಿ

Next Post

ಪುತ್ರಿಯರಿಂದಲೇ ತಂದೆ ವಿರುದ್ಧ ಅತ್ಯಾಚಾರ ದೂರು: ಎರಡನೇ ಪ್ರಕರಣದಲ್ಲೂ ಆರೋಪಿ ತಂದೆ ಖುಲಾಸೆ

Related Posts

ದೇರಳಕಟ್ಟೆ ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ ! ರಸ್ತೆ ಡಿವೈಡರ್ ಮೇಲೇರಿದ ಬಸ್
ಕರಾವಳಿ

ದೇರಳಕಟ್ಟೆ ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ ! ರಸ್ತೆ ಡಿವೈಡರ್ ಮೇಲೇರಿದ ಬಸ್

June 23, 2026
113
ಜೂ.25ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್
ಕರಾವಳಿ

ಜೂ.25ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

June 23, 2026
90
Next Post
ಪುತ್ರಿಯರಿಂದಲೇ ತಂದೆ ವಿರುದ್ಧ ಅತ್ಯಾಚಾರ ದೂರು: ಎರಡನೇ ಪ್ರಕರಣದಲ್ಲೂ ಆರೋಪಿ ತಂದೆ ಖುಲಾಸೆ

ಪುತ್ರಿಯರಿಂದಲೇ ತಂದೆ ವಿರುದ್ಧ ಅತ್ಯಾಚಾರ ದೂರು: ಎರಡನೇ ಪ್ರಕರಣದಲ್ಲೂ ಆರೋಪಿ ತಂದೆ ಖುಲಾಸೆ

Discussion about this post

Recent News

ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

June 24, 2026
171
ದೇರಳಕಟ್ಟೆ ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ ! ರಸ್ತೆ ಡಿವೈಡರ್ ಮೇಲೇರಿದ ಬಸ್

ದೇರಳಕಟ್ಟೆ ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ ! ರಸ್ತೆ ಡಿವೈಡರ್ ಮೇಲೇರಿದ ಬಸ್

June 23, 2026
113
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

ಮಂಗಳೂರು: ಅಪ್ರಾಪ್ತೆಗೆ ಗರ್ಭಿಣಿಯಾಗಿಸಿ ವಂಚನೆ ; ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

June 24, 2026
ದೇರಳಕಟ್ಟೆ ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ ! ರಸ್ತೆ ಡಿವೈಡರ್ ಮೇಲೇರಿದ ಬಸ್

ದೇರಳಕಟ್ಟೆ ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ ! ರಸ್ತೆ ಡಿವೈಡರ್ ಮೇಲೇರಿದ ಬಸ್

June 23, 2026
ಜೂ.25ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

ಜೂ.25ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

June 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d