ಭಾರತ vs ಇಂಗ್ಲೆಂಡ್ ಟಿ20 ಸರಣಿ ದಿನಾಂಕ : ಆಂಡ್ರಸನ್ ತೆಂಡೂಲ್ಕರ್ ಟ್ರೋಫಿಯ ಭಾಗವಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿರುವುದು ಗೊತ್ತೆ ಇದೆ. ಸದ್ಯ ಸರಣಿಯಲ್ಲಿ 2-1 ರಿಂದ ಹಿನ್ನಡೆ ಸಾಧಿಸಿದ್ದು ಮ್ಯಾಂಚೆಸ್ಟರ್ನಲ್ಲಿ ನಾಲ್ಕನೇ ಪಂದ್ಯವನ್ನು ಆಡುತ್ತಿದೆ. ಇದರಲ್ಲಿ ಭಾರತ ಗೆದ್ದರೇ ಮಾತ್ರ ಸರಣಿ ಸಮಬಲಗೊಳ್ಳಲಿದೆ. ಸೋಲನ್ನು ಕಂಡರೇ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕಳೆದುಕೊಳ್ಳಲಿದೆ. ಜು. 31 ರಂದು ಉಭಯ ತಂಡಗಳು ಅಂತಿಮ ಟೆಸ್ಟ್ ಆಡಲಿವೆ.
ಇದರ ನಡುವೆಯೇ ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳು ನಡುವಿನ 3 ಪಂದ್ಯಗಳ ಏಕದಿನ ಸರಣಿ ಮತ್ತು 5 ಪಂದ್ಯಗಳ ಟಿ20 ಸರಣಿಯ ದಿನಾಂಕವನ್ನು ಬಿಸಿಸಿಐ ಪ್ರಕಟಿಸಿದೆ. ಇದರೊಂದಿಗೆ ರೋಹಿತ್ ಮತ್ತು ಕೊಹ್ಲಿ ಆಟವನ್ನು ಅಭಿಮಾನಿಗಳು ಕಣ್ತುಂಬ್ಬಿ ಕೊಳ್ಳಬಹುದಾಗಿದೆ.
ರೋಹಿತ್ ಮತ್ತು ವಿರಾಟ್ ಟಿ20 ಮತ್ತು ಟೆಸ್ಟ್ ಸ್ವರೂಪಕ್ಕೆ ನಿವೃತ್ತಿ ಪಡೆದಿದ್ದರಿಂದ ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಈ ಇಬ್ಬರು ಮುಂದುವರೆದಿದ್ದಾರೆ. ಇದರಿಂದಾಗಿ ಫ್ಯಾನ್ಸ್ಗಳು ಏಕದಿನ ಪಂದ್ಯಗಳು ಯಾವಾಗ ನಡೆಯುತ್ತವೆ ಎಂದು ಎದುರು ನೋಡುತ್ತಿದ್ದಾರೆ. ಅಲ್ಲದೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಬಳಿಕ ಏಕದಿನ ಮತ್ತು ಟಿ20 ಸರಣಿಯನ್ನು ಆಯೋಜಿಸಿದ್ದರೇ ಒಳ್ಳೆದಿತ್ತು ಎಂದು ಫ್ಯಾನ್ಸ್ಗಳು ಅಂದು ಕೊಳ್ಳುತ್ತಿದ್ದರು. ಇದೀಗ ಬಿಸಿಸಿಐ ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ20 ಸರಣಿಯ ದಿನಾಂಕವನ್ನು ಪ್ರಕಟಿಸಿದೆ.
ಇಂದು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ದಿನಾಂಕ ಪ್ರಕಟಿಸಿದೆ. ಈ ಪ್ರವಾಸದಲ್ಲಿ ಭಾರತ ಮೊದಲಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ನಂತರ 3 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತದೆ. ಆದರೆ ಈ ಸರಣಿ ಈವರ್ಷ ನಡೆಯುವುದಿಲ್ಲ ಬದಲಿಗೆ ಮುಂದಿನ ವರ್ಷ ಜುಲೈ ತಿಂಗಳಲ್ಲಿ ನಡೆಯಲಿದೆ. ಹೌದು, ಜುಲೈ 1 ರಿಂದ ಜು.11 ರವರೆಗೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನಂತರ ಜು. 14 ರಿಂದ ಜು. 19ರ ವರೆಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post