• About us
  • Contact us
  • Disclaimer
Monday, June 15, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ರಷ್ಯಾ: 49 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ ಪತನ

Coastal Times by Coastal Times
July 24, 2025
in ರಾಷ್ಟ್ರೀಯ ಸುದ್ದಿ
ರಷ್ಯಾ: 49 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ ಪತನ
53
VIEWS
WhatsappTelegramShare on FacebookShare on Twitter

ಮಾಸ್ಕೋ: ಸುಮಾರು 49 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ತಾಂತ್ರಿಕ ದೋಷದಿಂದ ಗುರುವಾರ ರಷ್ಯಾದ ಪೂರ್ವ ಪ್ರದೇಶ ಅಮುರ್‌ ಎಂಬ ಸ್ಥಳದಲ್ಲಿ ಪತನಗೊಂಡಿದೆ. ಬದುಕುಳಿದವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ AN-24 ಸಂಖ್ಯೆಯ ವಿಮಾನ ಇದಾಗಿದ್ದು, ರಷ್ಯಾ-ಚೀನಾದ ಗಡಿ ಪ್ರದೇಶವಾದ ಬ್ಲಾಗೊವೆಶ್‌ಚೆನ್ಸ್ಕ್ ನಗರದಿಂದ ಟಿಂಡಾ ಪಟ್ಟಣಕ್ಕೆ ತೆರಳುತ್ತಿತ್ತು. ಈ ವೇಳೆ ಸ್ಥಳೀಯ ಕಾಲಮಾನ ಮಧ್ಯಾಹ್ನ 1:00 ಗಂಟೆಗೆ (0400 GMT) ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿರುವುದು ತಿಳಿದುಬಂದಿದೆ.

ಸುದ್ದಿ ತಿಳಿದು ರಕ್ಷಣಾ ಹೆಲಿಕಾಪ್ಟರ್ ತೆರಳಿದ್ದು, ಟಿಂಡಾದಿಂದ 15 ಕಿಲೋಮೀಟರ್ ದೂರದಲ್ಲಿರುವ ಇಳಿಜಾರು ಪ್ರದೇಶದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದೆ. ವಿಮಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ವಿಮಾನದಲ್ಲಿ ಐರು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ಮತ್ತು ಆರು ಜನ ಸಿಬ್ಬಂದಿ ಇದ್ದರು ಎಂದು ಪ್ರದೇಶದ ಗವರ್ನರ್ ವಾಸಿಲಿ ಓರ್ಲೋವ್ ಮಾಹಿತಿ ನೀಡಿದ್ದಾರೆ.

ರಷ್ಯಾದ ತನಿಖಾಧಿಕಾರಿಗಳು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ದಟ್ಟ ಹಾಗೂ ಇಳಿಜಾರಿನಿಂದ ಕೂಡಿರುವ ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳಿಂದ ಹೊಗೆ ಬರುತ್ತಿರುವುದು ಅದರಲ್ಲಿ ಸೆರೆಯಾಗಿದೆ.

25 ಜನರು ಮತ್ತು ಐದು ಯುನಿಟ್ ಉಪಕರಣಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸಿಬ್ಬಂದಿಗಳೊಂದಿಗೆ ನಾಲ್ಕು ವಿಮಾನಗಳು ಅಲ್ಲಿಗೆ ತೆರಳಲು ಸಿದ್ಧವಾಗಿವೆ. ಅರಣ್ಯ ಪ್ರದೇಶವಾಗಿದ್ದರಿಂದ ಸ್ಥಳಕ್ಕೆ ಹೋಗುವುದು ಕಷ್ಟಕರವಾಗಿದೆ. ಆದರೂ, ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಲಿವೆ. ಬದುಕುಳಿದವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ರಕ್ಷಣಾ ಸಿಬ್ಬಂದಿಯೊಬ್ಬರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಇರ್ಕುಟ್ಸ್ಕ್ ನಗರದಲ್ಲಿರುವ ಅಂಗಾರ ಏರ್ಲೈನ್ಸ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾದ ಫಾರ್ ಈಸ್ಟರ್ನ್ ಟ್ರಾನ್ಸ್‌ಪೋರ್ಟ್ ಪ್ರಾಸಿಕ್ಯೂಟರ್ ಕಚೇರಿ ಈ ಬಗ್ಗೆ ಖಚಿತಪಡಿಸಿದೆ. ಟಿಂಡಾ ಪಟ್ಟಣಕ್ಕೆ ತೆರಳುತ್ತಿದ್ದಾಗ ವಿಮಾನ ಅಪಘಾತಕ್ಕೀಡಾಗಿದೆ. ಅದಕ್ಕೂ ಮುನ್ನ ವಿಮಾನವು ಎರಡನೇ ಲ್ಯಾಂಡಿಂಗ್‌ಗೆ ತೆರಳಿತು. ನಂತರ ಸಂಪರ್ಕ ಕಡಿತಗೊಂಡಿತು. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಕಚೇರಿ ತಿಳಿಸಿದೆ.

ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತಿಳಿದು ಬಂದಿಲ್ಲ. ಈ ವಿಮಾನವನ್ನು ಸುಮಾರು 50 ವರ್ಷಗಳ ಹಿಂದೆ ತಯಾರಿಸಲಾಗಿತ್ತು. 2021 ರಲ್ಲಿ, ವಿಮಾನದ ವಾಯು ಯೋಗ್ಯತಾ ಪ್ರಮಾಣಪತ್ರವನ್ನು 2036ರ ವರೆಗೆ ವಿಸ್ತರಿಸಲಾಗಿತ್ತು ಎಂದು ರಾಜ್ಯ TASS ಸುದ್ದಿ ಸಂಸ್ಥೆ ವರದಿ ಮಾಡಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರಿನ ಜೈಲಿನಲ್ಲಿ ವಿಚಾರಣಾಧೀನ ಕೈದಿಯಿಂದ 20 ಸಾವಿರ ರೂ. ಸುಲಿಗೆ ನಾಲ್ವರ ವಿರುದ್ಧ KCOCA ಜಾರಿ

Next Post

ಭಾರತ vs ಇಂಗ್ಲೆಂಡ್​ ನಡುವಿನ 3 ಏಕದಿನ, 5 ಟಿ20 ಸರಣಿಗೆ ದಿನಾಂಕ ಪ್ರಕಟ

Related Posts

ಭಾರತೀಯ ವಾಯುಪಡೆಯ AN-32 ವಿಮಾನ ಅಪಘಾತ: ಲ್ಯಾಂಡಿಂಗ್ ಬೆನ್ನಲ್ಲೇ ಹೊತ್ತಿ ಉರಿದ ಯುದ್ಧ ವಿಮಾನ, ಪೈಲಟ್ ಮೃತಪಟ್ಟಿರುವ ಶಂಕೆ
ರಾಷ್ಟ್ರೀಯ ಸುದ್ದಿ

ಭಾರತೀಯ ವಾಯುಪಡೆಯ AN-32 ವಿಮಾನ ಅಪಘಾತ: ಲ್ಯಾಂಡಿಂಗ್ ಬೆನ್ನಲ್ಲೇ ಹೊತ್ತಿ ಉರಿದ ಯುದ್ಧ ವಿಮಾನ, ಪೈಲಟ್ ಮೃತಪಟ್ಟಿರುವ ಶಂಕೆ

June 13, 2026
31
ಗ್ಲೋಬಲ್ ಬಿಸಿನೆಸ್ ಫೆಲೋಶಿಪ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿ ಮಂಗಳೂರಿನ ಯುವ ನಾಯಕ ಡೆನಿಸ್ ಡಿಸಿಲ್ವಾ ಆಯ್ಕೆ
ಕರಾವಳಿ

ಗ್ಲೋಬಲ್ ಬಿಸಿನೆಸ್ ಫೆಲೋಶಿಪ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿ ಮಂಗಳೂರಿನ ಯುವ ನಾಯಕ ಡೆನಿಸ್ ಡಿಸಿಲ್ವಾ ಆಯ್ಕೆ

May 27, 2026
39
Next Post
ಭಾರತ vs ಇಂಗ್ಲೆಂಡ್​ ನಡುವಿನ 3 ಏಕದಿನ, 5 ಟಿ20 ಸರಣಿಗೆ ದಿನಾಂಕ ಪ್ರಕಟ

ಭಾರತ vs ಇಂಗ್ಲೆಂಡ್​ ನಡುವಿನ 3 ಏಕದಿನ, 5 ಟಿ20 ಸರಣಿಗೆ ದಿನಾಂಕ ಪ್ರಕಟ

Discussion about this post

Recent News

ವಿವಾಹಿತ ಮಹಿಳೆಗೆ ವಿಡಿಯೋ ಕಳಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ, ದಂಪತಿ ಸೇರಿ ಮೂವರು ಅರೆಸ್ಟ್​

ವಿವಾಹಿತ ಮಹಿಳೆಗೆ ವಿಡಿಯೋ ಕಳಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ, ದಂಪತಿ ಸೇರಿ ಮೂವರು ಅರೆಸ್ಟ್​

June 15, 2026
57
ಮಂಗಳೂರು: ಎಂಸಿಸಿ ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026

ಮಂಗಳೂರು: ಎಂಸಿಸಿ ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026

June 15, 2026
8
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ವಿವಾಹಿತ ಮಹಿಳೆಗೆ ವಿಡಿಯೋ ಕಳಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ, ದಂಪತಿ ಸೇರಿ ಮೂವರು ಅರೆಸ್ಟ್​

ವಿವಾಹಿತ ಮಹಿಳೆಗೆ ವಿಡಿಯೋ ಕಳಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ, ದಂಪತಿ ಸೇರಿ ಮೂವರು ಅರೆಸ್ಟ್​

June 15, 2026
ಮಂಗಳೂರು: ಎಂಸಿಸಿ ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026

ಮಂಗಳೂರು: ಎಂಸಿಸಿ ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026

June 15, 2026
ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದ ಅನಂತ್ ಅಂಬಾನಿ; ವಿಶೇಷ ಪೂಜೆ

ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದ ಅನಂತ್ ಅಂಬಾನಿ; ವಿಶೇಷ ಪೂಜೆ

June 15, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d