ಬೆಂಗಳೂರು, ನ 24: ಪ್ರೊಫೆಸರ್‌ಗೆ ಒಬ್ಬರಿಗೆ ಹನಿಟ್ರ್ಯಾಪ್ ಮಾಡಿ 3 ಕೋಟಿ ರೂ.ವಸೂಲಿ ಮಾಡಿ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಮಹಿಳೆ ಅಂಡ್ ಗ್ಯಾಂಗ್ ಸೇರಿದಂತೆ ಮೂವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಮೂಲದ ತಬಸುಂ ಬೇಗಂ (38), ಕಾರ್ಕಳದ ಅಜೀಂ ಉದ್ದೀನ್ (41), ಹಾಗೂ ಅಭಿಷೇಕ್ (33) ಬಂಧಿತರು. ಬೆಂಗಳೂರಿನ 46 ವರ್ಷದ ಪ್ರೊಫೆಸರ್ ಹನಿಟ್ರ್ಯಾಪ್‌ಗೆ ಒಳಗಾಗಿ ನರಕ ಅನುಭವಿಸಿದವರು
ಈ ಆರೋಪಿತೆ ಮಹಿಳೆ ತಬಸುಂ ಆರ್ ಟಿ ನಗರದ ಒಂದು ಜಿಮ್ ನಲ್ಲಿ ರೆಸೆಪ್ಶನಿಸ್ಟ್ ಆಗಿ ಕೆಲಸ ಮಾಡ್ತಿದ್ದಳಂತೆ. ಅದೇ ಜಿಮ್ ಗೆ 2021 ರಲ್ಲಿ 42 ವಯಸ್ಸಿನ ಒರ್ವ ಪ್ರೊಫೆಸರ್ ಜಾಯಿನ್ ಆಗಿದ್ದಾರೆ. ಆತ ಜಿಮ್ ಗೆ ಸೇರಿದ ಕೆಲ ದಿನಗಳಲ್ಲಿ ತಬಸುಂ ಜೊತೆಗೆ ಪರಿಚಯ ಆಗಿ ಸ್ನೇಹ ಸಂಬಂಧ ಬೆಳದಿದೆ. ಈ ಸ್ನೇಹ ಇಬ್ಬರ ನಡುವೆ ಪ್ರೀತಿ ಯಾಗಿ ಬದಲಾಗಿದೆ . ನಂತರ ಆಕೆಗೆ ಮದುವೆಯಾಗಿ ಮಗು ಇದ್ದು ಗಂಡನ ಬಿಟ್ಟಿದ್ದಾಳೆ ಎನ್ನುವ ವಿಚಾರ ಪ್ರೊಫೆಸರ್ ಗೆ ಗೊತ್ತಾಗಿ ಆತ ಗಲಾಟೆ ಮಾಡಿದ್ದನಂತೆ.
ಈ ನಡುವೆ ವ್ಯವಹಾರ ನಡೆಸಲು ಮತ್ತು ಒಂದಷ್ಟು ಬಿಜಿನೆಸ್ ಮಾಡಬೇಕು ಎಂದು ಹಂತ ಹಂತವಾಗಿ ಸುಮಾರು ಎರಡು ಕೋಟಿ ಇಪತ್ತೈದು ಲಕ್ಷಕ್ಕು ಹೆಚ್ಚಿನ ಹಣವನ್ನು ಈಕೆ ಪಡೆದಿದ್ದಾಳೆ. ಇಬ್ಬರ ನಡುವೆ ಗಲಾಟೆ ಆದ ಬಳಿಕ ಪ್ರೊಫೆಸರ್ ಹಣ ಕೊಡಲ್ಲಾ ಎಂದಿದ್ದಾನೆ. ಈ ವೇಳೆ ಪ್ರೊಫೆಸರ್ ಗೆ ವಾಟ್ಸ್ ಆಪ್ ಮೂಲಕ ಕೆಲ ಖಾಸಗಿ ಫೋಟೊಗಳನ್ನು ಕಳಿಸಿದ್ದ ತಬಸುಂ ಬೇಗಂ ತನಗೆ ಇನ್ನಷ್ಟು ಹಣ ಕೊಡಬೇಕು. ಇಲ್ಲವಾದ್ರೆ ಈ ಫೋಟೊ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಆಕೆಯ ಸಹೋದರ ಎಂದು ಹೆಳಿಕೊಂಡು ಅಜೀಂ ಉದ್ದಿನ್ ಮತ್ತು ಆಕೆಯ ವಕೀಲ ಮತ್ತು ಪೋಲಿಸ್ ಎಂದು ಹೇಳಿ ಅಭಿಷೇಕ್ ಎಲ್ಲರು ಬೆದರಿಗೆ ಹಣ ವಸೂಲಿ ಮಾಡಿದ್ದಾರೆ.
ಯಾವಾಗ ಇವರುಗಳ ಕಾಟ ಹೆಚ್ಚಾಗಿತ್ತು ಆಗ ತನ್ನ ಪಿಎಫ್ ನಲ್ಲಿ ಇದ್ದ ಹಣವನ್ನು ಸಹ ಪ್ರೊಫೆಸರ್ ನೀಡಿದ್ದ. ಅಷ್ಟು ಸಾಲುದು ಎಂದು ಆರೋಪಿಗಳು ಹೇಳಿದಾಗ ಕೊನೆಗೆ ಪ್ರೊಫೆಸರ್, ಸಿಸಿಬಿ ಮೆಟ್ಟಿಲೇರಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಕಾರ್ಚರಣೆಗಿಳಿದ ಸಿಸಿಬಿ, ಮೂವರು ಆರೋಪಿಗಳನ್ನು ಬಂಧಿಸಿದ್ದು ಅರೆಸ್ಟ್ ಮಾಡಿ ತನಿಖೆ ನಡೆಸುತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post