ಮಂಗಳೂರು: ರಾಜ್ಯದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್‌ನ ಹೊಸ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ನ ಶಿಲಾನ್ಯಾಸ ಕಾರ್ಯಕ್ರಮವು ಸೋಮವಾರ ನಗರದ ಅತ್ತಾವರ-ಬಾಬುಗುಡ್ಡದಲ್ಲಿ ನಡೆಯಿತು.
ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ರೆ.ಫಾ. ಬೊನೆವೆಂಚರ್ ನಝ್ರತ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಶಾಸಕರಾದ ಐವನ್ ಡಿಸೋಜ, ವೇದವ್ಯಾಸ ಕಾಮತ್ ಶುಭ ಹಾರೈಸಿದರು.
ರೆ.ಫಾ. ಬೊನೆವೆಂಚರ್ ನಝ್ರತ್, ಧರ್ಮಗುರು, ಮಿಲಾಗ್ರಿಸ್ ಚರ್ಚ್ ಇವರು ಮಾತನಾಡಿ ರೋಹನ್ ಮೊಂತೆರೋ ಶಿಸ್ತುಬದ್ಧ ವ್ಯಕ್ತಿ. ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗಲೂ ಗ್ರಾಹಕರ ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಒಂದಿನಿತೂ ಕುಂದುಕೊರತೆ ಇಲ್ಲದ ಯೋಜನೆಗಳನ್ನು ಪೂರ್ತಿಗೊಳಿಸುವುದು ಅವರ ಹೆಗ್ಗಳಿಕೆಯಾಗಿದೆ.
ಡಾ. ಎನ್.ಎಂ. ರಾಜೇಂದ್ರ ಕುಮಾರ್ ಮಾತನಾಡಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ರೋಹನ್ ಮೊಂತೆರೋ ತನ್ನದೇ ಆದ ಛಾಪು ಮೂಡಿಸಿದ್ದಾರೆ. ರೋಹನ್ ಮೊಂತೆರೋ ಈವರೆಗೆ ಕೈಗೆತ್ತಿಕೊಂಡ ಎಲ್ಲಾ ಯೋಜನೆಗಳೂ ಗ್ರಾಹಕರ ತೃಪ್ತಿಗೆ ಪಾತ್ರವಾಗಿವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಕೊಡುವುದರಲ್ಲಿ ಅವರು ಎತ್ತಿದ ಕೈ. ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬೈಯಲ್ಲೂ ವಿನೂತನ ಪ್ರಾಜೆಕ್ಟ್ ನಿರ್ಮಾಣದ ಗುರಿ ಹಾಕಬೇಕಾಗಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ದಾಖಲೆಗಳನ್ನು ಮಾಡುತ್ತಿರುವ ರೋಹನ್ ಮೊಂತೆರೋ ಕೇವಲ ಲಾಭಗಳಿಕೆಯ ಉದ್ದೇಶವನ್ನು ಹೊಂದಿಲ್ಲ. ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದಾರೆ. ಜನರ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿರುವ ಅವರು ಎಲ್ಲದರಲ್ಲೂ ಯಶಸ್ವಿಯಾಗುತ್ತಿರುವುದು ಶ್ಲಾಘನೀಯ.
ವೇದಿಕೆಯಲ್ಲಿ ಮಾಜಿ ಕಾರ್ಪೊರೇಟರ್‌ಗಳಾದ ದಿವಾಕರ ಪಾಂಡೇಶ್ವರ, ಶೈಲೇಶ್ ಶೆಟ್ಟಿ, ಉದ್ಯಮಿ ಶಶಿಧರ ಪೈ ಮಾರೂರು, ಉದ್ಯಮಿ ಡಿಯಾನ್ ಮೊಂತೆರೋ ಉಪಸ್ಥಿತರಿದ್ದರು. ರೋಹನ್ ಕಾರ್ಪೊರೇಷನ್‌ನ ಅಧ್ಯಕ್ಷ ರೋಹನ್ ಮೊಂತೆರೋ ಸ್ವಾಗತಿಸಿ, ವಂದಿಸಿದರು. ಸಾಹಿಲ್ ಜಹೀರ್ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಮ ವರ್ಗದ ಕುಟುಂಬದ ಸ್ವಂತ ಮನೆಯನ್ನು ಹೊಂದುವ ಕನಸನ್ನು ಸಾಕಾರಗೊಳಿಸುವ ಸಲುವಾಗಿ ನಿರ್ಮಾಣಗೊಳ್ಳಲಿರುವ ರೋಹನ್ ನೆಸ್ಟ್ ಎರಡು ಬಿ.ಎಚ್.ಕೆ.ಯ 58 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿವೆ. ಮೂರು ಮಹಡಿಗಳಲ್ಲಿ ಹರಡಿಕೊಳ್ಳಲಿದ್ದು, ಪ್ರತಿ ಘಟಕವು ಉತ್ತಮ ಸ್ಥಳಾವಕಾಶವನ್ನು ಹೊಂದಿದೆ. 695ರಿಂದ 715 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್‌ಮೆಂಟ್‌ಗಳು ಆಧುನಿಕ ನಗರ ಕುಟುಂಬಗಳ ಅವಶ್ಯಗಳನ್ನು ಪೂರೈಸಲಿದೆ. ಸ್ವಯಂಚಾಲಿತ ಲಿಫ್ಟ್‌ಗಳು, ಪವರ್ ಬ್ಯಾಕಪ್, ವಿಟ್ರಿಫೈಡ್ ಟೈಲ್ ಫ್ಲೋರಿಂಗ್, ಸುರಕ್ಷತೆಗಾಗಿ ಸರ್ವಿಲೆನ್ಸ್ ಕ್ಯಾಮೆರಾಗಳು ಸಹಿತ ಹಲವು ಸೌಲಭ್ಯಗಳನ್ನು ಹೊಂದಿದೆ. ಮಳೆ ನೀರಿನ ಸಂಗ್ರಹಣಾ ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ವಾತಾವರಣವಿದೆ. ಹೆಚ್ಚಿನ ಮಾಹಿತಿ ಅಥವಾ ಬುಕ್ಕಿಂಗ್‌ಗಾಗಿ, ರೋಹನ್ ಕಾರ್ಪೊರೇಷನ್ ದೂ.ಸಂ: +919845490100 ಅಥವಾ ಈಮೇಲ್: info@rohancorporation.in / ಜಾಲತಾಣ : www.rohancorporation.in ಅಥವಾ ರೋಹನ್ ಕಾರ್ಪೊರೇಶನ್, ಮುಖ್ಯ ರಸ್ತೆ, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿ ಸಬಹುದು ಎಂದು ಪ್ರಕಟನೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post