• About us
  • Contact us
  • Disclaimer
Thursday, April 30, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಡ್ರಗ್ಸ್ ವ್ಯಸನಕ್ಕೆ ಬಲಿ ಬಿದ್ದ ಮೊಮ್ಮಗ ಅಜ್ಜ–ಅಜ್ಜಿಯನ್ನು ಕೊಂದು ಚಿನ್ನಾಭರಣ ದೋಚಿ ಮಂಗಳೂರಿನಲ್ಲಿ ಮಾರಲೆತ್ನಿಸಿ ಸಿಕ್ಕಿಬಿದ್ದ..!

Coastal Times by Coastal Times
July 25, 2023
in ಕ್ರೈಮ್ ನ್ಯೂಸ್
ಡ್ರಗ್ಸ್ ವ್ಯಸನಕ್ಕೆ ಬಲಿ ಬಿದ್ದ ಮೊಮ್ಮಗ ಅಜ್ಜ–ಅಜ್ಜಿಯನ್ನು ಕೊಂದು ಚಿನ್ನಾಭರಣ ದೋಚಿ ಮಂಗಳೂರಿನಲ್ಲಿ ಮಾರಲೆತ್ನಿಸಿ ಸಿಕ್ಕಿಬಿದ್ದ..!
249
VIEWS
WhatsappTelegramShare on FacebookShare on Twitter

ಮಂಗಳೂರು, ಜುಲೈ 25: ಡ್ರಗ್ಸ್ ವ್ಯಸನಕ್ಕೆ ಬಿದ್ದ ಯುವಕನೊಬ್ಬ ಹಣ ಕೊಡಲಿಲ್ಲ ಎಂಬ ನೆಪದಲ್ಲಿ ತನ್ನ ಅಜ್ಜ, ಅಜ್ಜಿಯನ್ನೇ ಕುತ್ತಿಗೆ ಸೀಳಿ ಕೊಲೆಗೈದಿದ್ದಲ್ಲದೆ, ಚಿನ್ನಾಭರಣ ದೋಚಿಕೊಂಡು ಮಂಗಳೂರಿನ ಜುವೆಲ್ಲರಿಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕಿಬಿದ್ದಿದ್ದಾನೆ.

ಕೇರಳದ ತೃಶ್ಶೂರು ಜಿಲ್ಲೆಯ ವೈಲತ್ತೂರಿನ ನಾಯರಂಗಾಡಿ ಗ್ರಾಮದಲ್ಲಿ ಜುಲೈ 23ರ ಭಾನುವಾರ ಬೆಳಗ್ಗೆ ಅಬ್ದುಲ್ಲ(75) ಮತ್ತು ಜಮೀಳಾ(64) ಎಂಬ ವೃದ್ಧ ದಂಪತಿಯ ಕೊಲೆಯಾಗಿತ್ತು. ಅವರ ಮನೆಯಲ್ಲೇ ವಾಸವಿದ್ದ ಮೊಮ್ಮಗ ಅಹ್ಮದ್ ಅಕ್ಮಲ್ ಈ ಕೃತ್ಯ ಎಸಗಿದ್ದಾನೆಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದರು.

ಆರೋಪಿಯಿಂದ ಮುತ್ತು ಪೋಣಿಸಿದ ಎರಡು ಎಳೆಯ ಚಿನ್ನದ ಸರ, ಸಣ್ಣ ಪದಕವಿರುವ ಚಿನ್ನದ ಸರ, ಮೂರು ಕಿವಿಯೋಲೆಗಳು, ಐದು ಉಂಗುರಗಳು, ಎರಡು ಬಳೆಗಳು, ಪಾಸ್‌ಪೋರ್ಟ್‌ ಹಾಗೂ ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ‘ಕೇರಳದ ತ್ರಿಶೂರ್ ಜಿಲ್ಲೆಯ ವೈಲತ್ತೂರು ಪನಾಂಗೈಲ್ ಹೌಸ್‌ನ ನಿವಾಸಿ ಅಹಮ್ಮದ್ ಅಕ್ಬಲ್ (27) ಬಂಧಿತ ಆರೋಪಿ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ರಥಬೀದಿಯಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿ ಚಿನ್ನಾಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸೋಮವಾರ ಬೆಳಿಗ್ಗೆ ಬಂದರು ಠಾಣೆಯ ಪೊಲೀಸರಿಗೆ ಮಾಹಿತಿ ಬಂದಿತ್ತು. ಠಾಣಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ತಾನು ಕೇರಳದ ತ್ರಿಶೂರ್‌ ಜಿಲ್ಲೆಯವನು ಎಂದು ಆತ ತಿಳಿಸಿದ್ದ. ‌ಆತನ ವರ್ತನೆಯಿಂದ ಅನುಮಾನಗೊಂಡು, ಮತ್ತಷ್ಟು ವಿಚಾರಣೆ ನಡೆಸಿದಾಗ, ಅಜ್ಜ ಅಜ್ಜಿಯನ್ನು ಕೊಂದು ಚಿನ್ನಾಭರಗಳೊಂದಿಗೆ ಬಂದಿರುವುದನ್ನು ಆತ ಒಪ್ಪಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿಗಳಾದ ಅಂಶು ಕುಮಾರ್ ಮತ್ತು ಬಿ.ಪಿ.ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ, ಎಸಿಪಿ ಮಹೇಶ್ ಕುಮಾರ್ ನಿರ್ದೇಶನದಂತೆ ಬಂದರು ಠಾಣೆಯ ಇನ್‌ಸ್ಪೆಕ್ಟರ್‌ ರಾಘವೇಂದ್ರ ಬೈಂದೂರು ನೇತೃತೃದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಠಾಣೆಯ ಅಪರಾಧ ಪತ್ತೆ ವಿಭಾಗದ ಎಎಸ್‌ಐ ದಾಮೋದರ್‌ ಹಾಗೂ ಸಿಬ್ಬಂದಿ ಮದನ್ ಸಿ.ಎಂ, ಸತೀಶ್‌ಹಾಗೂ ಗುರು ಬಿ.ಟಿ. ಭಾಗವಹಿಸಿದ್ದರು’ ಎಂದು ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್. ಜೈನ್‌ ತಿಳಿಸಿದ್ದಾರೆ

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು | ಮೊಬೈಲ್ ನೋಡುತ್ತಲೇ ಬಸ್ ಚಲಾಯಿಸಿದ ಚಾಲಕನ ಡಿಎಲ್ ರದ್ದತಿಗೆ ಶಿಫಾರಸು!

Next Post

ಶೌಚಾಲಯದಲ್ಲಿ ವಿಡಿಯೋ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಉಡುಪಿ ಕಾಲೇಜಿಗೆ ಭೇಟಿ

Related Posts

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್
ಕ್ರೈಮ್ ನ್ಯೂಸ್

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

April 29, 2026
232
ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!
ಕ್ರೈಮ್ ನ್ಯೂಸ್

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

April 27, 2026
170
Next Post
ಶೌಚಾಲಯದಲ್ಲಿ ವಿಡಿಯೋ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಉಡುಪಿ ಕಾಲೇಜಿಗೆ ಭೇಟಿ

ಶೌಚಾಲಯದಲ್ಲಿ ವಿಡಿಯೋ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಉಡುಪಿ ಕಾಲೇಜಿಗೆ ಭೇಟಿ

Discussion about this post

Recent News

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

April 29, 2026
232
ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
3
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

April 29, 2026
ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

April 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d