• About us
  • Contact us
  • Disclaimer
Friday, March 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕಾತಿ : ಮಂಗಳೂರು ವಿವಿ ಕಾರ್ಯಾಗಾರದಲ್ಲಿ ಡಾ.ಗೋಪಾಲಕೃಷ್ಣ ಜೋಶಿ ವಿಶ್ವಾಸ

Coastal Times by Coastal Times
October 25, 2021
in ಕರಾವಳಿ
ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕಾತಿ : ಮಂಗಳೂರು ವಿವಿ ಕಾರ್ಯಾಗಾರದಲ್ಲಿ ಡಾ.ಗೋಪಾಲಕೃಷ್ಣ ಜೋಶಿ ವಿಶ್ವಾಸ
14
VIEWS
WhatsappTelegramShare on FacebookShare on Twitter

ಮಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಅಂತಾರಾಷ್ಟ್ರೀಯ ಶಿಕ್ಷಣ ಪದ್ಧತಿಯ ಮಟ್ಟಕ್ಕೇರಿಸುತ್ತದೆ. ಇದು ಅತ್ಯುತ್ತಮ ಶಿಕ್ಷಣ ಪದ್ಧತಿಗಳ ಸಮ್ಮಿಶ್ರಣ. ಈ ಪದ್ಧತಿ ವಿದ್ಯಾರ್ಥಿಗಳಲ್ಲಿ ವಿಮರ್ಶೆ, ಸಮಸ್ಯೆ ಪರಿಹಾರದಂತಹ ಕೌಶಲ ಬೆಳೆಸುತ್ತದೆ ಮತ್ತು ಅವರಿಗೆ ಉದ್ಯೋಗಾವಕಾಶ ಹೆಚ್ಚಿಸುತ್ತದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋಪಾಲಕೃಷ್ಣ ಜೋಶಿ ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿ ಕುರಿತು ಮಂಗಳೂರು ವಿವಿ ಪುರಭವದಲ್ಲಿ ಸೋಮವಾರ ಆಯೋಜಿಸಿದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರು ತಮಗೆ ತಿಳಿದದ್ದನ್ನು ಕಲಿಸುವ ಬದಲು ವಿದ್ಯಾರ್ಥಿಗಳ ಅಗತ್ಯತೆಗೆ ಅನುಗುಣವಾಗಿ ಶಿಕ್ಷಣ ನೀಡುವುದೇ ಈ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಯ ಮೂಲ ಆಶಯ. ಜಾಗತಿಕ ಅಗತ್ಯ, ಜ್ಞಾನ, ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವುದು ಹಾಗೂ ಶಿಕ್ಷಣದ ಎಲ್ಲ ಹಂತಗಳಲ್ಲಿ ತಂತ್ರಜ್ಞಾನವನ್ನು ಸಂಯೋಜಿಸುವ ಗುರಿಯನ್ನು ಹೊಸ ನೀತಿ ಹೊಂದಿದೆ.

ಮಂಗಳೂರು -ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಖಾಯದ ಡೀನ್ ಡಾ.ಮಂಜುನಾಥ ಪಟ್ಟಾಭಿ, ಶಿಕ್ಷಕರು ಈ ಪದ್ಧತಿ ಅರಿತು ಹೊಸ ಪೀಳಿಗೆಯ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದು ಮುಖ್ಯ ಎಂದರು.

ಕುಲಸಚಿವ ಡಾ.ಕಿಶೋರ್ ಕುಮಾರ್ ಸ್ವಾಗತಿಸಿದರು. ಕುಲಸಚಿವ(ಪರೀಕ್ಷಾಂಗ) ಡಾ.ಪಿ.ಎಲ್.ಧರ್ಮ, ಸಿಡಿಸಿ ಮುಖ್ಯಸ್ಥ ಪ್ರೊ. ರವೀಂದ್ರ ಆಚಾರಿ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗ ಮುಖ್ಯಸ್ಥ ಡಾ.ರವಿಶಂಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸ್ವಾಯತ್ತ ಕಾಲೇಜುಗಳ ಪ್ರಾಂಶುಪಾಲರುಗಳು, ಪ್ರತಿನಿಧಿಗಳ ಪ್ರತ್ಯೇಕ ಸಭೆ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಮುಂದಿನ ದಿನಗಳಲ್ಲಿ ವಿವಿಧ ಕಾಲೇಜುಗಳಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಎನ್‌ಇಪಿ ಕುರಿತು ಕಾರ್ಯಾಗಾರಗಳು ನಡೆಯಲಿವೆ. ಎನ್‌ಇಪಿಯಲ್ಲಿ ಇಂಗ್ಲಿಷ್ ಸಹಿತ ಯಾವ ಭಾಷೆಯನ್ನೂ ಕಡೆಗಣಿಸಲಾಗಿಲ್ಲ. ಶಿಕ್ಷಕರಿಗೂ ಪ್ರಾಧಾನ್ಯತೆಯಿದೆ. ಆದರೆ ಉಪನ್ಯಾಸಕರ ಕಾರ್ಯಭಾರಕ್ಕಾಗಿ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಲು ಸಾಧ್ಯವಿಲ್ಲ. ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕಾತಿ ನಡೆಯಲಿದೆ ಎಂದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಕರ್ತವ್ಯನಿರತ ಯೋಧನಿಗೆ ಬಾಲಕನ ಸೆಲ್ಯೂಟ್

Next Post

ಆಳಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದ ಬೃಹತ್​ ಗಾತ್ರದ ತಿಮಿಂಗಿಲ !

Related Posts

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ
ಕರಾವಳಿ

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

March 26, 2026
14
ಈಶಾನ್ಯ ಭಾರತಕ್ಕೆ ಭಾರತ್ ಗೌರವ್ ಬೇಸಿಗೆ ವಿಶೇಷ ಪ್ರವಾಸಿ ರೈಲು, ಮೂರು ಪ್ಯಾಕೇಜ್‌, 14 ದಿನಗಳ ಪ್ರವಾಸ
ಕರಾವಳಿ

ಈಶಾನ್ಯ ಭಾರತಕ್ಕೆ ಭಾರತ್ ಗೌರವ್ ಬೇಸಿಗೆ ವಿಶೇಷ ಪ್ರವಾಸಿ ರೈಲು, ಮೂರು ಪ್ಯಾಕೇಜ್‌, 14 ದಿನಗಳ ಪ್ರವಾಸ

March 25, 2026
34
Next Post
ಆಳಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದ ಬೃಹತ್​ ಗಾತ್ರದ ತಿಮಿಂಗಿಲ !

ಆಳಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದ ಬೃಹತ್​ ಗಾತ್ರದ ತಿಮಿಂಗಿಲ !

Discussion about this post

Recent News

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

March 26, 2026
40
ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

March 26, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

March 26, 2026
ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

March 26, 2026
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿದ ಆರೋಪಿಯ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿದ ಆರೋಪಿಯ ಬಂಧನ

March 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d