ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟ್ ನ ಮೀನುಗಾರರಿಗೆ ಈ ಮೀನು ದೊರಕಿದೆ, ಸುಮಾರು 1,500 ಕ್ಕೂ ಹೆಚ್ಚು ತೂಕ ಈ ಮೀನು ಹೊಂದಿದ್ದು ಮೀನಿನ ಬಲೆಯನ್ನು ಮೇಲೆಳೆದಾಗ ಬೃಹತ್ ಗಾತ್ರದ ತಿಮಿಂಗಿಲ ಸಿಕ್ಕಿದ್ದನ್ನು ನೋಡಿ ಮೀನುಗಾರರು ಆಶ್ಚರ್ಯಚಕಿತರಾದರು.
ಮಂಗಳೂರಿನಿಂದ ಹೊರಗೆ ಅರಬ್ಬಿ ಸಮುದ್ರದಲ್ಲಿ ಸುಮಾರು 50 ನಾಟಿಕಲ್ ಮೈಲಿಗಳ ದೂರ ಆಳಸಮುದ್ರದಲ್ಲಿ ಈ ತಿಮಿಂಗಿಲ ಸಿಕ್ಕಿತ್ತು. ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದು ಈ ಮೀನು ಹಿಡಿಯುವುದು ನಿಷೇಧವಿದೆ. ಹೀಗಾಗಿ ಬಲೆಗೆ ಸಿಲುಕಿದ್ದ ತಿಮಿಂಗಿಲ ಮೀನನ್ನು ಎತ್ತಿ ಪರಿಶೀಲಿಸಿದ ಬಳಿಕ ಅದು ಜೀವಂತವಾಗಿದ್ದರಿಂದ, ಬಾಲವನ್ನು ಹಗ್ಗದಿಂದ ಕಟ್ಟಿ ಎತ್ತಿ ಮೀನನ್ನು ಹಾಗೆಯೇ ನೀರಿಗೆ ವಾಪಸ್ ಬಿಡಲಾಯಿತು.